More

    ಜಮೀನಿಗೆ ನುಗ್ಗಿದ ವರದಾ, ದಂಡಾವತಿ

    ಸೊರಬ: ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು ವರದಾ, ದಂಡಾವತಿ, ಕೆರೆಕಟ್ಟೆಗಳು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆಗೆ ಆನವಟ್ಟಿ ವ್ಯಾಪ್ತಿಯ ತತ್ತೂರು ವಡ್ಡಿಗರೇರಿ ಗ್ರಾಮದ ವಿರುಪಾಕ್ಷಪ್ಪ ಎಂಬುವವರ ಮನೆಯ ಗೋಡೆ ಕುಸಿದು ಬಿದ್ದಿದೆ.

    ಶನಿವಾರ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ವರದಾ ಮತ್ತು ದಂಡಾವತಿ ನದಿಗಳು ತುಂಬಿ ಹರಿಯುತ್ತಿವೆ. ಚಂದ್ರಗುತ್ತಿ ಹೋಬಳಿಯ ಹಲವು ಕಡೆ ನಾಟಿ ಕಾರ್ಯ ಭರದಿಂದ ಸಾಗಿದೆ. ವರದಾ ನದಿ ವ್ಯಾಪ್ತಿಯ ಜೋಳದಗುಡ್ಡೆ, ಬಾಡದಬೈಲು, ಕಡಸೂರು, ತಟ್ಟಿಕೆರೆ, ಕಾರೆಹೊಂಡ ಸೇರಿದಂತೆ ಹಲವು ಕಡೆ ನದಿ ಪಾತ್ರದ ಜಮೀನುಗಳಿಗೆ ನುಗ್ಗಿದೆ. ಅಲ್ಲದೆ ಕೆರೆಗಳು ತುಂಬಿ ಕೋಡಿಬೀಳುತ್ತಿವೆ. ಮಳೆ ಇಲ್ಲದೆ ಹಿನ್ನಡೆಯಾದ ಕೃಷಿ ಚಟುವಟಿಕೆಗಳಿಗೆ ಕಳೆ ತುಂಬಿ ರೈತರು ನಾಟಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
    ಮಳೆ ಹೆಚ್ಚಾದ ಹಿನ್ನಲೆ ದಂಡಾವತಿ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾಗಿದ್ದು ನದಿ ಪಾತ್ರದ ಉಳವಿ ಹೋಬಳಿಯ ನಿಸರಾಣಿ, ಕುಪ್ಪೆ, ಕಾನಗೋಡು, ಚೀಲೂರು, ಮರೂರು ಗ್ರಾಮಗಳ ಜಮೀನುಗಳ ಮೇಲೆ ನೀರು ನುಗ್ಗುತ್ತಿದೆ. ನಾಟಿ ಸಸಿ ಮಡಿಗಳು ಅಲ್ಲಲ್ಲಿ ಮುಳುಗುತ್ತಿವೆ. ಶನಿವಾರದಿಂದ ಭಾನುವಾರ ಬೆಳಗ್ಗೆವರೆಗೆ 43.3 ಮಿಮೀ ಮಳೆಯಾಗಿದೆ. ಇದರಿಂದಾಗಿ ಜುಲೈ ವಾಡಿಕೆ ಮಳೆ ಶೇ.16 ಕೊರತೆಯಾಗಿದೆ. ಮಳೆ ಬಿರುಸುಗೊಂಡ ಹಿನ್ನೆಲೆಯಲ್ಲಿ ಈಗ ಕೊರತೆ ಪ್ರಮಾಣ ಇಳಿಮುಖಖವಾಗುತ್ತಿರುವುದು ಗಮನರ್ಹವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts