More

    ದೆಹಲಿ ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯಲ್ಲಿ 250 ಕಿ.ಮೀ. ಪ್ರಯಾಣಕ್ಕೆ 10ರಿಂದ 12 ಸಾವಿರ ರೂ. ಶುಲ್ಕ

    ನೋಯ್ಡಾ: ವಂದೇ ಭಾರತ್​ ಯೋಜನೆಯಡಿ ವಿದೇಶಗಳಿಂದ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಉತ್ತರ ಪ್ರದೇಶ ಮೂಲದ ಪ್ರಯಾಣಿಕರು ನೋಯ್ಡಾ ಹಾಗೂ ಘಾಜಿಯಾಬಾದ್​ಗೆ ತಲುಪಲು ಅನುವಾಗುವಂತೆ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (ಯುಪಿಎಸ್​ಆರ್​ಟಿಸಿ) ಟ್ಯಾಕ್ಸಿಗಳನ್ನು ವ್ಯವಸ್ಥೆ ಮಾಡಿದೆ. ಆದರೆ, ಅವುಗಳ ಸೌಲಭ್ಯವನ್ನು ಬಳಸುವ ಪ್ರಯಾಣಿಕರು ಶುಲ್ಕ ಪಾವತಿಸುವಷ್ಟರಲ್ಲೇ ಬಸವಳಿದುಬಿಡುತ್ತಾರೆ!

    ಏಕೆಂದರೆ, ದೆಹಲಿ ವಿಮಾನ ನಿಲ್ದಾಣದಿಂದ ನೋಯ್ಡಾ ಮತ್ತು ಘಾಜಿಯಾಬಾದ್​ ಅಂದಾಜು 250 ಕಿ.ಮೀ. ದೂರದಲ್ಲಿವೆ. ಇಲ್ಲಿಗೆ ಯುಪಿಎಸ್​ಆರ್​ಟಿಸಿಯ ಟ್ಯಾಕ್ಸಿಯಲ್ಲಿ ತೆರಳಬೇಕೆಂದರೆ ಪ್ರಯಾಣಿಕರು 10 ಸಾವಿರ ರೂ. ಶುಲ್ಕ ಪಾವತಿಸಬೇಕಾಗುತ್ತದೆ.

    10 ಸಾವಿರ ರೂ. ಸೆಡಾನ್​ ಟ್ಯಾಕ್ಸಿಯ ಶುಲ್ಕವಾದರೆ, ಎಸ್​ಯುವಿಯಲ್ಲಿ ಹೋಗಲು ಬಯಸುವವರು 12 ಸಾವಿರ ರೂ. ಪಾವತಿಸಬೇಕಾಗುತ್ತದೆ. ಇದು 250 ಕಿ.ಮೀ.ವರೆಗಿನ ಪ್ರಯಾಣದ ದರವಾಗಿದ್ದು, ಹೆಚ್ಚುವರಿ ಪ್ರಯಾಣಕ್ಕೆ ಕ್ರಮವಾಗಿ ಕಿ.ಮೀಗೆ 40 ಮತ್ತು 50 ರೂ. ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.

    ಇದನ್ನೂ ಓದಿ: ನಿಯಮಿತ ರೈಲು ಸಂಚಾರ ಜೂನ್​ 30ವರೆಗೂ ಆರಂಭವಾಗಲ್ಲ

    ನಮಗೆ ಅಷ್ಟೊಂದು ಶಕ್ತಿಯಿಲ್ಲ. ಯುಪಿಎಸ್​ಆರ್​ಟಿಸಿ ವ್ಯವಸ್ಥೆ ಮಾಡಿರುವ ಬಸ್​ಗಳಲ್ಲಿ ಪ್ರಯಾಣಿಸುತ್ತೇವೆ ಎಂದರೆ ಹವಾನಿಯಂತ್ರಿತವಲ್ಲದ ಬಸ್​ನ ಪ್ರಯಾಣಕ್ಕೆ ತಲಾ 1 ಸಾವಿರ ರೂ. ಹಾಗೂ ಹವಾನಿಯಂತ್ರಿತ ವ್ಯವಸ್ಥೆಯುಳ್ಳ ಬಸ್​ನ ಪ್ರಯಾಣಕ್ಕೆ ತಲಾ 1,320 ರೂ. ಪಾವತಿಸಬೇಕಾಗುತ್ತದೆ. ಈ ಶುಲ್ಕಗಳು 100 ಕಿ.ಮೀ. ಅಂತರಕ್ಕೆ ಮಾತ್ರವೇ ನಿಗದಿಪಡಿಸಲಾಗಿದೆ. ಇದಕ್ಕಿಂತ ಹೆಚ್ಚಿನ ದೂರ ಪ್ರಯಾಣಿಸಬೇಕು ಎಂದರೆ, 101ರಿಂದ 200 ಕಿ.ಮೀ.ವರೆಗಿನ ಪ್ರಯಾಣಕ್ಕೆ ಇದರ ಎರಡು ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ.

    ವಂದೇ ಭಾರತ್​ ಯೋಜನೆಯಲ್ಲಿ ವಿದೇಶಗಳಿಂದ ಸ್ವದೇಶಕ್ಕೆ ಕರೆತರಲಾಗುವ ಪ್ರಯಾಣಿಕರ ಅನುಕೂಲಕ್ಕಾಗಿ ಯುಪಿಎಸ್​ಆರ್​ಟಿಸಿ ವತಿಯಿಂದ ಟ್ಯಾಕ್ಸಿ ಹಾಗೂ ಬಸ್​ಗಳನ್ನು ವ್ಯವಸ್ಥೆಗೊಳಿಸುವಂತೆ ಸೂಚಿಸಿ ನಿಗಮದ ಎಂಡಿ ರಾಜಶೇಖರ್​ ನಿಗಮದ ಪ್ರಾದೇಶಿಕ ವ್ಯವಸ್ಥಾಪಕರೆಲ್ಲರಿಗೂ ಮೇ 9ರಂದು ಪತ್ರ ಬರೆದಿದ್ದರು. ಅದರಂತೆ ಬಸ್​ ಹಾಗೂ ಟ್ಯಾಕ್ಸಿಗಳನ್ನು ವ್ಯವಸ್ಥೆಗೊಳಿಸಲಾಗಿದೆ.

    ಆಗ್ರಾದಲ್ಲಿ ಒಣಗಿದ್ದ ಸೌದೆ ಸಾಗಿಸಲು ಪಿಪಿಇ ಕಿಟ್​ಗಳ ಬಳಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts