More

    ಸಕಲೇಶಪುರದಲ್ಲಿ ವಾಲ್ಮಿಕಿ ಜಯಂತಿ

    ಸಕಲೇಶಪುರ: ಹುಟ್ಟಿಗಿಂತ ಮಾಡುವ ಕಾಯಕ ನಮಗೆ ಶ್ರೇಷ್ಠತೆ ತಂದುಕೊಡಲಿದೆ ಎಂದು ಉಪವಿಭಾಗಾಧಿಕಾರಿ ಡಾ.ಎ.ಸಿ ಶೃತಿ ಹೇಳಿದರು.

    ಶನಿವಾರ ಪಟ್ಟಣದ ತಾಲೂಕು ಪಂಚಾಯಿತಿ ಸಂಭಾಗಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮಿಕಿ ಜಯಂತಿ ಉದ್ಘಾಟಿಸಿ ಮಾತನಾಡಿ, ವಾಲ್ಮಿಕಿ ಹಿಂದುಳಿದ ಜನಾಂಗದಲ್ಲಿ ಹುಟ್ಟಿ ಬೇಟೆಗಾರನಾಗಿ ಬದುಕು ಕಟ್ಟಿಕೊಂಡಿದ್ದವರು. ಇಂತಹವರು ಉತ್ತಮ ದಾರ್ಶಿನಿಕರ ಸಹವಾಸದಿಂದ ಮನಪರಿವರ್ತನೆಗೊಂಡು ರಾಮಾಯಣದಂತಹ ಶ್ರೇಷ್ಠ ಕೃತಿ ರಚಿಸುವ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಆದ್ದರಿಂದ, ಹುಟ್ಟು ಮುಖ್ಯ ಅಲ್ಲ. ಮಾಡುವ ಕೆಲಸದ ಮೇಲೆ ತಮಗೆ ಗೌರವ ದೊರೆಯಲಿದೆ ಎಂದರು.

    ಯುವಕರು ಕೆಟ್ಟ ಕೆಲಸಗಳಿಗಾಗಿ ವಿನಿಯೋಗಿಸುವ ಸಮಯವನ್ನು ಉತ್ತಮ ಕೆಲಸಕ್ಕೆ ಬಳಸಬೇಕು. ವಾಲ್ಮಿಕಿ ಜೀವನ ಚರಿತ್ರೆ ಓದುವ ಮೂಲಕ ಉತ್ತಮ ನಾಗರಿಕರಾಗಿ ಬದುಕಬೇಕು ಎಂದರು.

    ತಹಸೀಲ್ದಾರ್ ಕೆ. ಪುರಂದರ ಮಾತನಾಡಿ, ದಾರ್ಶನಿಕರ ಹುಟ್ಟುಹಬ್ಬ ಆಚರಿಸಲು ಕಾರಣ ಅವರ ಜೀವನ ಚರಿತ್ರೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸುವುದು ಹಾಗೂ ಯುವ ಜನಾಂಗ ಸರಿಯಾದ ದಾರಿಯಲ್ಲಿ ನಡೆಸುವ ಉದ್ದೇಶ. ಆದ್ದರಿಂದ ಕಾಟಾಚಾರಕ್ಕೆ ಜಯಂತಿ ಆಚರಣೆ ನಿಲ್ಲಬೇಕು ಮತ್ತು ಮಹಾತ್ಮರನ್ನು ಜಾತಿಗೆ ಸೀಮಿತಗೊಳಿಸುವುದನ್ನು ತಪ್ಪಿಸಬೇಕು ಎಂದರು.

    ಬ್ಯಾಕರವಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಸತ್ಯಂದ್ರಕುಮಾರ್, ತಾಪಂ ಇಒ ರಾಮಚಂದ್ರ, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆನಂದಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts