More

    ‘ವೈಶಂಪಾಯನ ತೀರ’ದಲ್ಲಿ ಪ್ರಕೃತಿ ಮತ್ತು ಮನುಷ್ಯನ ಸಂಘರ್ಷ …

    ಬೆಂಗಳೂರು:ರಮೇಶ್ ಬೇಗಾರು ನಿರ್ದೇಶಿಸಿರುವ ‘ವೈಶಂಪಾಯನ ತೀರ’ ಚಿತ್ರಕ್ಕೆ ಕೊನೆಗೂ ಬಿಡುಗಡೆ ದಿನಾಂಕ ಸಿಕ್ಕಿದೆ. ಚಿತ್ರವು ಜ.6ಕ್ಕೆ ಬಿಡುಗಡೆಯಾಗಲಿದ್ದು, ಇತ್ತೀಚೆಗೆ ಟ್ರೈಲರ್​ ಬಿಡುಗಡೆಯಾಗಿದೆ.

    ಇದನ್ನೂ ಓದಿ: ‘ನಾಗಕನ್ಯೆ ಶ್ರೀವಾಸವಿ’ಯಾದ ನಿಮಿಕಾ ರತ್ನಾಕರ್​; ಕಿರುಚಿತ್ರದಲ್ಲಿ ನಟನೆ …

    'ವೈಶಂಪಾಯನ ತೀರ'ದಲ್ಲಿ ಪ್ರಕೃತಿ ಮತ್ತು ಮನುಷ್ಯನ ಸಂಘರ್ಷ …ಈ ಚಿತ್ರದ ಕುರಿತು ವಿವರಣೆ ನೀಡುವ ರಮೇಶ್​ ಬೇಗಾರು, ‘ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಸಣ್ಣಕತೆಯನ್ನು ಆಧರಿಸಿ ಈ ಸಿನಿಮಾ ನಿರ್ಮಾಣವಾಗಿದೆ. ಯಕ್ಷಗಾನವನ್ನು ಹಿನ್ನೆಲೆಯಾಗಿಟ್ಟುಕೊಂಡು ಪ್ರಕೃತಿ ಮತ್ತು ಮನುಷ್ಯನ ಸಂಬಂಧವನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಇಡೀ ಸಿನಿಮಾವನ್ನು ಕೊಪ್ಪ ಮತ್ತು ಶೃಂಗೇರಿ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಮಲೆನಾಡ ಭಾಷೆ, ಜನಜೀವನ ಮತ್ತು ಸಂಸ್ಕೃತಿಯನ್ನು ತೆರೆಯ ಮೇಲೆ ತರಲಾಗಿದೆ’ ಎಂದು ಹೇಳಿಕೊಂಡರು.

    ಟ್ರೈಲರ್​ ಬಿಡುಗಡೆ ಮಾಡಿದ್ದು ಹಿರಿಯ ನಿರ್ದೇಶಕ ಗಿರೀಶ್​ ಕಾಸರವಳ್ಳಿ. ‘ರಮೇಶ್ ಬೇಗಾರು ಸುಮಾರು ಮೂರು ದಶಕಗಳಿಂದ ಕಲಾಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ. ಯಕ್ಷಗಾನದಂತಹ ಕಲೆಯನ್ನು ಹೊಸ ಆಯಾಮದಲ್ಲಿ ನೋಡುವಂತ ಅಪರೂಪದ ಪ್ರತಿಭಾವಂತ ರಮೇಶ್ ಅವರು. ನಾನು ಕೂಡ ಈ ಚಿತ್ರವನ್ನು ನೋಡಲು ಕಾತುರನಾಗಿದ್ದೇನೆ’ ಎಂದರು.

    ಚಿತ್ರದ ಪ್ರಮುಖ ಪಾತ್ರದಲ್ಲಿ ಪ್ರಮೋದ್​ ಶೆಟ್ಟಿ ನಟಿಸಿದ್ದಾರೆ. ಇದೊಂದು ವಿಭಿನ್ನ ಕಥೆಯ ಚಿತ್ರ ಎನ್ನುವ ಅವರು, ‘ಮಲೆನಾಡ ಸಂಸ್ಕೃತಿಯನ್ನು ನಿರ್ದೇಶಕರು ಮನಮುಟ್ಟುವಂತೆ ತೋರಿಸಿದ್ದಾರೆ. ನಾನು ಈ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ’ ಎಂದು ಹೇಳಿದರು.

    ಇದನ್ನೂ ಓದಿ: ಚಂದನವನದಲ್ಲಿ ಮುಂದುವರೆದ ದಾಸ ಪರಂಪರೆ; ಜಗನ್ನಾಥ ದಾಸರ ನಂತರ ವೆಂಕಟದಾಸರ ಕುರಿತ ಚಿತ್ರ

    ಸ್ವರಸಂಗಮ ಎಂಟರ್‌ಟೈನ್‌ಮೆಂಟ್​ನಡಿ ಆರ್. ಸುರೇಶ ಬಾಬು ನಿರ್ಮಿಸಿರವ ‘ವೈಶಂಪಾಯನ ತೀರ’ ಚಿತ್ರದಲ್ಲಿ ವೈಜಯಂತಿ ಅಡಿಗ ನಾಯಕಿಯಾಗಿದ್ದು, ಉಳಿದಂತೆ ಪ್ರಮೋದ್ ಶೆಟ್ಟಿ, ಬಾಬು ಹಿರಣ್ಣಯ್ಯ, ರಮೇಶ್ ಪಂಡಿತ್, ರವೀಶ್ ಹೆಗಡೆ, ಪ್ರಸನ್ನ ಶೆಟ್ಟಿಗಾರ್, ರಮೇಶ್ ಭಟ್, ಗುರುರಾಜ ಹೊಸಕೋಟೆ, ಶೃಂಗೇರಿ ರಾಮಣ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀನಿಧಿ ಕೊಪ್ಪ ಸಂಗೀತ ಸಂಯೋಜಿಸಿದ್ದು, ಶಿಶಿರ ಶೃಂಗೇರಿ ಛಾಯಾಗ್ರಹಣವಿದೆ.

    ಕೊನೆಗೂ ಸುದ್ದಿ ನಿಜವಾಯ್ತು; ಧನ್ಯಾಗೆ ಒಂದು ವರ್ಷದ ಹಿಂದೆಯೇ ಮದುವೆಯಾಗಿತ್ತಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts