More

    ವಚನ ಸಾಹಿತ್ಯ ಸಂರಕ್ಷಿಸಿದ ಹಳಕಟ್ಟಿ

    ನರಗುಂದ: ವಚನ ಸಾಹಿತ್ಯ ಪರಂಪರೆ ಉಳಿಸುವಲ್ಲಿ ಡಾ. ಫ.ಗು. ಹಳಕಟ್ಟಿಯವರ ಪಾತ್ರ ಮಹತ್ತರವಾದುದು. 1925ರಲ್ಲಿ ಹಿತಚಿಂತಕ ಎಂಬ ಮುದ್ರಣಾಲಯ ಸ್ಥಾಪಿಸಿ ನಶಿಸಿ ಹೋಗುತ್ತಿರುವ ವಚನ ಸಾಹಿತ್ಯವನ್ನು ವಚನ ಶಾಸ್ತ್ರಸಾರ ಎಂಬ ಪುಸ್ತಕ ಪ್ರಕಟಿಸುವ ಮೂಲಕ ವಚನಗಳನ್ನು ಸಂರಕ್ಷಿಸಿದ ಕೀರ್ತಿ ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ ಹೇಳಿದರು.

    ಡಾ.ಪ.ಗು. ಹಳಕಟ್ಟಿಯವರ ಜಯಂತಿ ನಿಮಿತ್ತ ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 12ನೇ ಶತಮಾನದ ಶರಣರು ಶ್ರೇಷ್ಠ ವಚನ ಸಾಹಿತ್ಯವನ್ನು ಸಂಗ್ರಹಿಸಿ ನಮಗೆ ನೀಡದೆ ಇದ್ದಿದ್ದರೆ ಇಂದು ವಿಶ್ವಕ್ಕೆ ಬಸವಣ್ಣನವರ ಪರಿಕಲ್ಪನೆಗಳ ಮಾಹಿತಿ ದೊರೆಯುತ್ತಿರಲಿಲ್ಲ ಎಂದರು.

    ಡಾ. ಶಿವಯೋಗಿ ದೇವರು ಮಾತನಾಡಿ, ವಚನ ಸಾಹಿತ್ಯ ಸಂರಕ್ಷಿಸಿ, ಅವುಗಳನ್ನು ಸಂಗ್ರಹಿಸಿ ಜನರಿಗೆ ಪರಿಚಯಿಸಲು ಡಾ.ಪ.ಗು. ಹಳಕಟ್ಟಿಯವರು ಸಲ್ಲಿಸಿದ ಸೇವೆ ಸ್ಮರಣೀಯ ಎಂದರು.

    ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚನ್ನಬಸಪ್ಪ ಕಂಠಿ, ಬೂದಿಹಾಳ ದುರ್ಗಾದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಷಣ್ಮುಖಪ್ಪ ಹಳೆಹೊಳಿ ಮಾತನಾಡಿದರು. ಸುಶೀಲಮ್ಮ ನರಗುಂದ, ಉಮಾ ನಾಯ್ಕರ, ಶಿವಾನಂದ ಗಾಳಪ್ಪನವರ ಉಪಸ್ಥಿತರಿದ್ದರು. ಪ್ರೊ. ಆರ್.ಬಿ. ಚಿನಿವಾಲರ ಹಾಗೂ ಮಹಾಂತೇಶ ಹಿರೇಮಠ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts