More

    ವಚನ ಜಗತ್ತಿನ ಮೊದಲ ಸಾಹಿತ್ಯ

    ಧಾರವಾಡ: ಶರಣರು ತಮ್ಮ ವಚನಗಳ ಮೂಲಕ ಸಾಹಿತ್ಯ ಹಾಗೂ ಸಮಾಜವನ್ನು ಬೆಸೆದರು. ಸಂಬAಧಗಳನ್ನು ಗಟ್ಟಿಗೊಳಿಸಿ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಾಯಕ ಮಾಡಿದ್ದರು ಎಂದು ಸಾಹಿತಿ ಡಾ. ಶಶಿಕಾಂತ ಪಟ್ಟಣ ಹೇಳಿದರು.
    ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಇತ್ತೀಚಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಲೋಚನಾ ಅಪ್ಪಾಸಾಹೇಬ ಮಾಲಿಪಾಟೀಲ ರಚಿತ ಚೊಚ್ಚಲ ಕವನ ಸಂಕಲನ `ಭಾವಸ್ಪಂಧನ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
    ಶರಣರು ಓದು ಬರಹ ಕಲಿಯದಿದ್ದರೂ ಸಾಮಾಜಿಕ ಕಳಕಳಿಯುಳ್ಳವರಾಗಿದ್ದರು. ಅವರ ಮಾತುಗಳು ಜನಪದದ ಮೂಲಕ ಹಂಚಿ ಹೋಗಿದ್ದವು. ನಂತರ ಬರವಣಿಗೆ ಆರಂಭಿಸಿ ಅನುಭವ ಮಂಟಪದಲ್ಲಿ ತಮ್ಮ ಸಾಹಿತ್ಯ ರಚನೆ ಕುರಿತು ಅನುಭಾವ ಮಾಡಿ ಅವುಗಳನ್ನು ಕ್ರೋಢೀಕರಿಸುತ್ತಿದ್ದರು ಎಂದರು.
    ಹಿರಿಯ ಸಾಹಿತಿ ಡಾ. ಎಸ್.ಆರ್. ಗುಂಜಾಳ, ಕಸಾಪ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ, ಡಾ. ಶರಣಮ್ಮ ಗೊರೇಬಾಳ, ಡಾ. ವೀಣಾ ಸಂಕನಗೌಡರ, ಲಲಿತಾ ಪಾಟೀಲ, ಶಕುಂತಲಾ ಮನ್ನಂಗಿ, ಆರ್. ನಿರ್ಮಲಾ, ಮಧು ಗುಂಜಾಳ, ಶಿವಾನಂದ ನಾಗೂರ, ಎಂಜಲೀನಾ ಗ್ರೇಗರಿ, ಇತರರಿದ್ದರು
    ಸುನಿತಾ ಅರವಳ್ಳಿ ಪ್ರಾರ್ಥಿಸಿದರು. ರೇಖಾ ಜೋಶಿ ಸ್ವಾಗತಿಸಿದರು. ಮೇಘಾ ಹುಕ್ಕೇರಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts