More

    ಸಮಾಜಕ್ಕೆ ಅಭಿವೃದ್ಧಿ ಸೇವೆಗಳನ್ನು ನೀಡಿ

    ಮರಿಯಮ್ಮನಹಳ್ಳಿ: ಸಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಸಂಬಂಧಿಸಿದ ಅಭಿವೃದ್ಧಿ ಸೇವೆಗಳನ್ನು ಸಮಾಜಕ್ಕೆ ನೀಡಿದಾಗ ಮಾತ್ರ ಸೇವೆ ಸಾರ್ಥಕತೆಯಾಗುತ್ತೆ ಎಂದು ಬಿಎಂಎಂ ಕಂಪನಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕ ಗಣೇಶ್ ಹೆಗಡೆ ಹೇಳಿದರು.

    ಇದನ್ನೂ ಓದಿ: ಆಹಾರ ವ್ಯರ್ಥ ಮಾಡದಿರಲು ಅವಿರತ ಸೇವೆ

    ಪಟ್ಟಣದ ಹೃದಯ ಭಾಗದಲ್ಲಿ ಸೋಮವಾರ ಬಿಎಂಎಂ ಕಂಪನಿಯಿಂದ ನಡೆದ ಸುಮಾರು 2 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಸುಸಜ್ಜಿತ ಕಲ್ಯಾಣ ಮಂಟಪದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

    ದುಬಾರಿ ದುನಿಯಾದಲ್ಲಿ ಬಡವರು, ಮಧ್ಯಮವರ್ಗದವರು ಉತ್ತಮ ಜೀವನ ನಡೆಸುವುದು ದೊಡ್ಡ ಸವಲಾಗಿದೆ. ಮದುವೆ ಮುಂಜಿ ಕಾರ್ಯಕ್ರಮಗಳನ್ನು ಮಾಡಬೇಕಾದರೆ ಲಕ್ಷಾಂತರ ರೂ.ಗಳ ವೆಚ್ಚ ತಗಲುತ್ತದೆ.

    ಇದನ್ನು ಸ್ವಲ್ಪ ಮಟ್ಟಿಗೆ ತಗ್ಗಿಸುವ ನಿಟ್ಟಿನಲ್ಲಿ ಬಿಎಂಎಂ ಇಸ್ಪಾತ್ ಕಂಪನಿಯಿಂದ ಕಲ್ಯಾಣ ಮಂಟಪ ನಿರ್ಮಿಸುತ್ತದೆ. ಅದರ ಜತೆಗೆ ಆರ್ಯ ವೈಶ್ಯ ಸಮಾಜದವರು ಉತ್ತಮ ನಿವೇಶನವನ್ನು ಒದಗಿಸುವುದರ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

    ಹಾಗೂ ಮರಿಯಮ್ಮನಹಳ್ಳಿಯ ಸರ್ವಾಂಗೀಣ ಅಭಿವೃದ್ದಿಗೆ ಬಿಎಂಎಂ ಕಂಪನಿಯು ಸದಾ ಸಿದ್ಧವಿದೆ ಎಂದರು. ಆರ್ಯವೈಶ್ಯ ಸಮಾಜದ ಅಧ್ಯಕ್ಷ ಚಿದ್ರಿ ಸತೀಶ್, ಮುಖಂಡರಾದ ಎಂ.ವಿಶ್ವನಾಥಶೆಟ್ಟಿ, ಡಾ.ಪಿ.ವಿಜಯವೆಂಕಟೇಶ್, ಡಿ.ರಾಘವೇಂದ್ರ ಶೆಟ್ಟಿ, ಎನ್.ಶ್ರೀನಿವಾಸಶೆಟ್ಟಿ,

    ಎಸ್.ಕೃಷ್ಣನಾಯ್ಕ್, ಗೋವಿಂದರ ಪರಶುರಾಮ, ಗರಗ ಪ್ರಕಾಶ್, ಗುಂಡಾಕೃಷ್ಣ, ಎಸ್.ಮಹಮದ್, ಸತೀಶ್‌ಗೌಡ, ಲಿಂಗರಾಜ, ಬಾಬುಸಾಬ, ಗಿರೀಶ, ಅರುಣ, ಮಾರುತಿ, ರೇವಣ್ಣ, ಮಲ್ಲಿಕಾರ್ಜುನ, ಡಿ.ಬಿ.ನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts