More

    ಆಹಾರ ವ್ಯರ್ಥ ಮಾಡದಿರಲು ಅವಿರತ ಸೇವೆ

    ಮಡಿಕೇರಿ:

    ‘ತಿನ್ನುವ ಹಕ್ಕಿದೆ-ಬಿಸಾಡುವ ಹಕ್ಕಿಲ್ಲ…’ ಇಂಥದ್ದೊAದು ಘೋಷವಾಕ್ಯದಡಿ ಆಹಾರ ಪೋಲು ತಡೆಗಟ್ಟಲು ಕಳೆದ 2 ದಶಕಗಳಿಂದ ಕೊಡಗಿನ ಕುಶಾಲನಗರದ ಉದ್ಯಮಿ ಎನ್.ಕೆ. ಮೋಹನ್ ಕುಮಾರ್ ಕೆಲಸ ಮಾಡುತ್ತಿದ್ದಾರೆ. ಸ್ವಂತ ಖರ್ಚಿನಲ್ಲೇ ರಾಜ್ಯಾದ್ಯಂತ ಸುತ್ತಾಡಿ ಈ ಸಂಬAಧ ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ. ಇವರ ಸಾಮಾಜಿಕ ಕಾಳಜಿ ಹಲವರಿಗೆ ಮಾದರಿಯೂ ಆಗಿದ್ದು, ಬಳ್ಳಾರಿ ತನಕ ಪರಿಣಾಮ ಬೀರಿದೆ.

    ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮದಡಿಯಲ್ಲಿ ಸಿದ್ದಪಡಿಸಲಾದ ಆಹಾರ ತ್ಯಾಜ್ಯ ಸೂಚ್ಯಂಕ ವರದಿ 2021ರ ಪ್ರಕಾರ ಜಗತ್ತಿನಲ್ಲಿ ಉತ್ಪಾದನೆಯಾಗುವ ಮೂರರಲ್ಲಿ ಒಂದು ಭಾಗ ಆಹಾರ ಪೋಲಾಗುತ್ತಿದೆ. ಸುಮಾರು 1.3 ಶತಕೋಟಿ ಟನ್ ಆಹಾರ ಯಾರ ಬಳಕೆಗೂ ಸಿಗುತ್ತಿಲ್ಲ. ಜಗತ್ತಿನಲ್ಲಿ ಉತ್ಪಾದನೆಯಾಗುವ ಹಸಿರುಮನೆ ಅನಿಲದಲ್ಲಿ ಶೇ.10ರಷ್ಟು ಪ್ರಮಾಣ ಇಂಥ ಪೋಲಾಗುವ ಆಹಾರಗಳಿಂದಲೇ ಉತ್ಪಾದನೆ ಆಗುತ್ತದೆ. ಇದೆಲ್ಲಾ ಒಂದು ಕಡೆ ಆದರೆ ಒಂದು ಹೊತ್ತಿನ ಊಟಕ್ಕೂ ಪರದಾಡುವವರ ಸಂಖ್ಯೆ ಮತ್ತೊಂದು ಕಡೆ ಗಮನ ಸೆಳೆಯುತ್ತದೆ.

    ಈ ಹಿನ್ನೆಲೆಯಲ್ಲಿ ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ಸದ್ಯ ಕುಶಾಲನಗರದಲ್ಲಿ ಉದ್ಯಮ ನಡೆಸುತ್ತಿರುವ ಎನ್.ಕೆ. ಮೋಹನ್‌ಕುಮಾರ್ 2002ರಿಂದ ಮಾದರಿ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಅಕ್ಕಿ ಬೆಳೆಯುವ ಅನ್ನದಾತರ ಸಂಕಷ್ಟದ ಅರಿವಿರುವ ಎನ್.ಕೆ. ಮೋಹನ್‌ಕುಮಾರ್ ಆಹಾರ ಸಂರಕ್ಷಣಾ ಅಭಿಯಾನ ನಡೆಸಿಕೊಂಡು ಬರುತ್ತಿದ್ದಾರೆ. ಮದುವೆ ಮತ್ತಿತರ ಸಮಾರಂಭಗಳಿಗೆ ಹೋದಾಗ ತಟ್ಟೆ ತುಂಬಾ ಬಡಿಸಿಕೊಂಡು ಅದನ್ನು ತಿನ್ನದೆ ಪೋಲು ಮಾಡುತ್ತಿದ್ದವರನ್ನು ನೋಡುತ್ತಾ ಇಂಥವರಿಗೆ ಜಾಗೃತಿ ಮೂಡಿಸುವ ಅಗತ್ಯತೆ ಬಗ್ಗೆ ಮನಗಾಣುತ್ತಾರೆ ಮೋಹನ್‌ಕುಮಾರ್.

    ಆಹಾರ ಅಪವ್ಯಯ ತಡೆಗಟ್ಟುವುದಕ್ಕೆ ಸಂಬAಧಿಸಿದAತೆ ಅವಕಾಶ ಸಿಕ್ಕಲೆಲ್ಲಾ ಸದಾ ಒಂದಿಲ್ಲೊAದು ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೋಹನ್‌ಕುಮಾರ್, ಪ್ರತಿ ವರ್ಷವೂ ಅ.16ರಂದು ವಿಶ್ವ ಆಹಾರ ದಿನವನ್ನು ಸಾರ್ಥಕ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಸ್ನೇಹಿತರು, ಆಸಕ್ತರು, ಆಹಾರ ಉಳಿತಾಯದ ಕಾಳಜಿ ಇರುವವರು, ರೈತ ಪರ ನಿಲುವಿನವರು ಇವರ ಅಭಿಯಾನಕ್ಕೆ ಸೇರಿಕೊಳ್ಳುತ್ತಾ ಬಂದಿದ್ದು, ಅಭಿಯಾನವನ್ನು ರಾಜ್ಯವ್ಯಾಪಿ ತೆಗೆದುಕೊಂಡು ಹೋಗಿದ್ದಾರೆ.

    ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಲಾಗುವ ಕೃಷಿ ಮೇಳ ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆ ನಡೆಯುವ ಸಮ್ಮೇಳನ, ಸಮಾರಂಭಗಳಿಗೆ ಹಾಜರಾಗುವ ಮೋಹನ್‌ಕುಮಾರ್ ಆಹಾರ ಸಂರಕ್ಷಣೆ ಮಹತ್ವ ಸಾರುವ ಬರಹಗಳುಳ್ಳ ಜುಬ್ಬಾ ಧರಿಸಿ, ಕೈಯಲ್ಲಿ ಘೋಷಣಾ ಫಲಕ ಹಿಡಿದುಕೊಂಡು ಅಲ್ಲಿಗೆ ಆಗಮಿಸುವವರ ಗಮನ ಸೆಳೆಯುತ್ತಾರೆ. ಕರಪತ್ರ ವಿತರಿಸುವ ಮೂಲಕ ಆಹಾರ ಉಳಿತಾಯದ ಬಗ್ಗೆಯೂ ಜಾಗೃತಿ ಮೂಡಿಸುತ್ತಾರೆ.

    ಶ್ರೀ ಕ್ಷೇತ್ರ ಧರ್ಮಸ್ಥಳ, ಹೊರನಾಡು ಶ್ರೀ ಅನ್ನಪೂರ್ಣೆಶ್ವರಿ ದೇವಾಲಯ ಸೇರಿದಂತೆ ಅನ್ನದಾನ ನಡೆಯುವ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ, ಕೊಡಗಿನ ಎಲ್ಲಾ ಹಾಸ್ಟೆಲ್‌ಗಳಲ್ಲೂ ಆಹಾರ ಸಂರಕ್ಷಣೆಯ ಜಾಗೃತಿ ಮೂಡಿಸುವ ಫಲಕಗಳನ್ನು ಇವರು ಅಳವಡಿಸಿದ್ದಾರೆ. ಈ ತನಕ ಸುಮಾರು 50 ಸಾವಿರ ಮಕ್ಕಳಿಗೆ ನೇರವಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಆ ಮಕ್ಕಳ ಮೂಲಕ ಪೋಷಕರಿಗೂ ತಮ್ಮ ಕಾಳಜಿ ರವಾನೆ ಆದರೆ ಮಾಡಿರುವ ಕೆಲಸ ಸಾರ್ಥಕ ಎನ್ನುವುದು ಮೋಹನ್‌ಕುಮಾರ್ ಅಭಿಪ್ರಾಯ.

    ಮೋಹನ್ ಕುಮಾರ್ ಕಾರ್ಯದಿಂದ ಸ್ಫೂರ್ತಿ ಪಡೆದ ಬೆಂಗಳೂರಿನ ಚಾಮರಾಜಪೇಟೆಯ ಯುವರಾಜ್ ಸಮಾರಂಭಗಳಲ್ಲಿ ಉಳಿಯುವ ಆಹಾರ ಸಂಗ್ರಹಿಸಿ ಅನಾಥಾಶ್ರಮ, ವೃದ್ಧಾಶ್ರಮ, ಮೆಜೆಸ್ಟಿಕ್‌ನಲ್ಲಿರುವ ನಿರ್ಗತಿಕರಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ. ಬಳ್ಳಾರಿಯ ಹಾಸ್ಟೆಲ್ ವಾರ್ಡನ್ ಬಸವರಾಜ್ ಹಾಸ್ಟೆಲ್‌ಗಳಲ್ಲಿ ಆಹಾರ ಅಪವ್ಯಯ ಆಗದ ರೀತಿಯಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಾರೆ. ಅಥಣಿಯ ದೃಷ್ಟಿ ವಿಶೇಷ ಚೇತನ ಪ್ರತಿಭೆ ಬಸವರಾಜು ತಾನು ಕಾರ್ಯಕ್ರಮ ಕೊಡುವ ಕಡೆಯಲೆಲ್ಲಾ ಆಹಾರ ಸಂರಕ್ಷಣೆಯ ಅಗತ್ಯತೆ ಬಗ್ಗೆಯೂ ಮಾತಾಡುತ್ತಾರೆ. ಬೆಳಗಾವಿಯ ಧರ್ಮರಾಜು, ಶಿವಮೊಗ್ಗದ ರಾಮು.. ಹೀಗೆ ಮೋಹನ್ ಕುಮಾರ್ ಅವರಿಂದ ಹಲವರು ಪ್ರೇರಣೆ ಪಡೆದಿದ್ದಾರೆ.

    ವಿಶ್ವ ಆಹಾರ ದಿನವನ್ನು ರಾಜ್ಯ ಸÀರ್ಕಾರದ ವತಿಯಿಂದ ಅಧಿಕೃತವಾಗಿ ಆಚರಿಸುವಂತಾಗಬೇಕು. ಶಾಲಾ ಪಠ್ಯಗಳಲ್ಲಿ ಸೇರಿಸಬೇಕು ಎನ್ನುವುದು ಮೋಹನ್‌ಕುಮಾರ್ ಒತ್ತಾಸೆ. ಈ ಸಂಬAಧ ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಗಮನ ಸೆಳೆದಿದ್ದಾರೆ. ಈಗ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರ ಬೆನ್ನುಬಿದ್ದಿದ್ದಾರೆ. ಈ ನಿಟ್ಟಿನಲ್ಲಿ ಮುನಿಯಪ್ಪ ಅವರೂ ಅಸಕ್ತರಾಗಿದ್ದು, ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಆಹಾರ ಅಪವ್ಯಯ ಜಾಗೃತಿ ಮೂಡಿಸಲು ಮಳಿಗೆಯೊಂದನ್ನು ಕೊಡಿಸಿದ್ದಾರೆ. ಉಳಿದ ಬೇಡಿಕೆಗಳ ಬಗ್ಗೆಯೂ ಸಕರಾತ್ಮಕವಾಗಿ ಸ್ಪಂದಿಸಿರುವುದರಿAದ ಈ ಬಾರಿ ದೊಡ್ಡ ಮಟ್ಟದ ನಿರೀಕ್ಷೆ ಹೊಂದಿದ್ದಾರೆ.

    ಸಮಾರಂಭಗಳಲ್ಲಿ ಹೆಚ್ಚಿನವರು ತಿನ್ನುವುದಕ್ಕಿಂತ ಜಾಸ್ತಿ ಬಡಿಸಿಕೊಂಡು ಹಾಳು ಮಾಡುತ್ತಾರೆ. ಹೀಗೆ ಪೋಲು ಮಾಡುವುದಕ್ಕಿಂತಲೂ ಮೊದಲು ಅದನ್ನು ಬೆಳೆಯಲು ರೈತ ಪಟ್ಟ ಶ್ರಮ ಮತ್ತು ಜಗತ್ತಿನಲ್ಲಿ ಅದೆಷ್ಟು ಮಂದಿ ಒಂದು ಹೊತ್ತಿನ ಊಟಕ್ಕೆ ಕಷ್ಟಪಡುತ್ತಿದ್ದಾರೆ ಎನ್ನುವುದನ್ನು ಕಣ್ಣು ಮುಂದೆ ತಂದು ಕೊಂಡರೆ ಸಾಕು, ಯಾರೂ ಆಹಾರ ವ್ಯರ್ಥ ಮಾಡಲಿಕ್ಕಿಲ್ಲ.

    • ಎನ್.ಕೆ. ಮೋಹನ್‌ಕುಮಾರ್, ಆಹಾರ ಸಂರಕ್ಷಣಾ ಅಭಿಯಾನದ ರಾಜ್ಯ ಸಂಚಾಲಕ
    • ಮಡಿಕೇರಿಗೆ ಹೋಗಿದ್ದ ವೇಳೆ ಮೋಹನ್ ಕುಮಾರ್ ಕಾರ್ಯದ ಬಗ್ಗೆ ತಿಳಿಯಿತು. ಅದರಿಂದ ಸ್ಫೂರ್ತಿ ಪಡೆದು ಬೆಂಗಳೂರಿನಲ್ಲಿ ಈಗ ನಾನು ನನ್ನದೇ ಆದ ರೀತಿಯಲ್ಲಿ ಆಹಾರ ಪೋಲು ತಪ್ಪಿಸುವಲ್ಲಿ ಕೆಲಸ ಮಾಡುತ್ತಿದ್ದೇನೆ.
    • ಯುವರಾಜ್, ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts