More

    ಇನ್ನು ಈ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಭಾರೀ ಅಗ್ಗ! ವರ್ಷಕ್ಕೆ ಒಂದೂವರೆ ಲಕ್ಷ ರೂ. ಮಾತ್ರ

    ಡೆಹ್ರಾಡೂನ್​​: ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣವು ಎಲ್ಲೆಡೆ ದುಬಾರಿಯಾಗುತ್ತಿರುವ ಸಂದರ್ಭದಲ್ಲಿ ಉತ್ತರಾಖಂಡ ಸರ್ಕಾರವು ಎಂಬಿಬಿಎಸ್​ ಕೋರ್ಸ್​ನ ಫೀಸನ್ನು ಕಡಿತಗೊಳಿಸುವ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದ 18 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್​ ಕೋರ್ಸ್​ನ ವಾರ್ಷಿಕ ಶುಲ್ಕವನ್ನು ಹಾಲಿ ಇದ್ದ 4 ಲಕ್ಷ ರೂ.ಗಳಿಂದ ಕೇವಲ 1.45 ಲಕ್ಷ ರೂ.ಗಳಷ್ಟಕ್ಕೆ ಇಳಿಸಲಾಗಿದೆ.

    ಈ ನಿರ್ಧಾರದೊಂದಿಗೆ ಉತ್ತರಾಖಂಡವು ವೈದ್ಯಕೀಯ ಪದವಿಗೆ ದೇಶದಲ್ಲೇ ಅತಿಕಡಿಮೆ ಶುಲ್ಕ ಹೊಂದಿರುವ ರಾಜ್ಯವಾಗಲಿದೆ ಎಂದು ಸರ್ಕಾರದ ವಕ್ತಾರ ಸುಬೋಧ್​ ಉನಿಯಾಲ್ ತಿಳಿಸಿದ್ದಾರೆ. ಸಿಎಂ ಪುಷ್ಕರ್​ ಸಿಂಗ್ ಧಾಮಿ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ರಾಜ್ಯದಲ್ಲಿ, ಬಿಜೆಪಿ ಸರ್ಕಾರವು ಇನ್ನೂ ಕೆಲವು ಮಹತ್ವದ ನಿರ್ಣಯಗಳನ್ನು ಅಂಗೀಕರಿಸಿದೆ.

    ಇದನ್ನೂ ಓದಿ: ಪುನೀತ್​ ರಾಜ್​ಕುಮಾರ್​ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

    10 ನೇ ತರಗತಿ ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರೀಲೋಡೆಡ್​ ಟ್ಯಾಬ್ಲೆಟ್​​ಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ಟೆಂಡರ್​ ಷರತ್ತುಗಳಿಗೆ ಬದಲಾವಣೆ ಮಾಡಿ ಅಂಗೀಕರಿಸಲಾಗಿದೆ. ಮಹಿಳೆಯರಿಗೆ ವಾರಕ್ಕೆಡರು ದಿನ ಹಣ್ಣು, ಒಣಹಣ್ಣುಗಳು ಮತ್ತು ಮೊಟ್ಟೆ ನೀಡುವ ಮುಖ್ಯಮಂತ್ರಿ ಮಹಿಳಾ ಪೋಷಣ್​ ಯೋಜನೆಯನ್ನು ಅನುಮೋದಿಸಲಾಗಿದೆ. ಆಶಾ ಕಾರ್ಯಕರ್ತರಿಗೆ ಪ್ರವಾಸಕ್ಕೆ ನೀಡುವ ಇಂಸೆಂಟೀವನ್ನು 20 ಟೂರ್​ಗಳಿಗೆ ಹಾಲಿ ಇರುವ 1000 ರೂ.ಗಳಿಂದ 2000 ರೂ.ಗಳಿಗೆ ಏರಿಸಲಾಗಿದೆ. (ಏಜೆನ್ಸೀಸ್)

    ನಗರದ ಮೈದಾನಗಳಲ್ಲಿ ಪಟಾಕಿ ಮಳಿಗೆ ತೆರೆಯಲು ಅವಕಾಶ: ಅ.29, 30 ಕ್ಕೆ ಅರ್ಜಿ ಸಲ್ಲಿಕೆ; ಇಲ್ಲಿದೆ ಎಲ್ಲಾ ವಿವರ

    ಆರ್ಯನ್​ ಖಾನ್​ ಡ್ರಗ್ಸ್​ ಕೇಸಲ್ಲಿ ಸಮೀರ್​ ವಾಂಖೇಡೆ ತನಿಖಾಧಿಕಾರಿಯಲ್ಲ: ಬಂದಿತು ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts