More

    ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ನೀಡಿ

    ಸಿಂದಗಿ: ಪಟ್ಟಣದ ಸಂಗಮ ಸಂಸ್ಥೆ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಸ್ಫೂರ್ತಿ ತಾಲೂಕುಮಟ್ಟದ ಒಕ್ಕೂಟದ ಮಹಿಳೆಯರು ಉತ್ತರಪ್ರದೇಶದಲ್ಲಿ ನಡೆದ ಅತ್ಯಾಚಾರ ಘಟನೆ ಖಂಡಿಸಿ ಶನಿವಾರ ತಹಸೀಲ್ದಾರ್ ಸಂಜೀವಕುಮಾರ ದಾಸರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
    ಸಂಗಮ ಸಂಸ್ಥೆ ನಿರ್ದೇಶಕ ಾದರ್ ಅಲ್ವೀನ್ ಡಿಸೋಜಾ, ಸಹ ನಿರ್ದೇಶಕಿ ಸಿ. ಅನಿತಾ ಡಿಸೋಜಾ, ವಿರುಪಾಕ್ಷಿ ಗುಬ್ಬೇವಾಡ, ಜಗದೀಶ ಕಲಬುರ್ಗಿ, ರಾವುತ್ ತಳಕೇರಿ ಮತ್ತಿತರರು ಮಾತನಾಡಿ, ಉತ್ತರಪ್ರದೇಶದಲ್ಲಿ ಮಹಿಳೆಯರು ಅವರಲ್ಲೂ ಯುವತಿಯರು ನಿರ್ಭಯವಾಗಿ ತಿರುಗಾಡದಂತಾಗಿದೆ. ಸಾಮೂಹಿಕ ಅತ್ಯಾಚಾರ, ಕೊಲೆ, ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದು ತೀವ್ರ ಖಂಡನೀಯವಾಗಿದೆ. ಅಲ್ಲಿನ ರಾಜ್ಯ ಸರ್ಕಾರ ಹೇಡಿಯಾಗಿದೆ ಎಂದು ಟೀಕಿಸಿದರು.
    ಮಲಕಪ್ಪ ಹಲಗಿ, ತೇಜಶ್ವಿನಿ ರಮೇಶ, ರಾಜು ಕುರಿಮನಿ, ಶ್ರೀಧರ ಕಾಡಗೋಳ, ವಿಜಯ ಭಂಟನೂರ, ಸವಿತಾ ಇವಣಿ ಸೇರಿ ಐವತ್ತಕ್ಕೂ ಹೆಚ್ಚು ಮಹಿಳೆಯರು ಇದ್ದರು.

    ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ನೀಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts