More

    ಸುಪ್ರೀಂಕೋರ್ಟ್​ ಆದೇಶದಂತೆ ಮಸೀದಿಗಾಗಿ ನೀಡಲು ಐದು ಸ್ಥಳಗಳನ್ನು ಗುರುತಿಸಿದ ಉತ್ತರ ಪ್ರದೇಶ ಸರ್ಕಾರ

    ಲಖನೌ: ಉತ್ತರ ಪ್ರದೇಶ ಸರ್ಕಾರ ಮಸೀದಿಗಾಗಿ ಐದು ಸ್ಥಳಗಳನ್ನು ಗುರುತಿಸಿದೆ.

    ಮಿರ್ಜಾಪುರ, ಶಂಶುದ್ದೀನ್​ಪುರ ಮತ್ತು ಚಾಂದ್​ಪುರ ಎಂಬಲ್ಲಿ ಸ್ಥಳಗಳನ್ನು ಗರುತಿಸಲಾಗಿದೆ. ಈ ಜಾಗ ಪಂಚಕೋಸಿ ಪರಿಕ್ರಮ ಎಂದು ಗುರುತಿಸಲ್ಪಡುವ ಸ್ಥಳದಿಂದ 15 ಕಿಲೋಮೀಟರ್​ ದೂರದಲ್ಲಿ ಇದೆ. ಈ ಮೂರು ಸ್ಥಳಗಳಲ್ಲಿ ಒಟ್ಟು 5 ಸ್ಥಳಗಳನ್ನು ಗುರುತಿಸಿದೆ.

    ವಿವಾದಿತ ಸ್ಥಳದಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್​ ಹಸಿರು ನಿಶಾನೆ ತೋರಿದೆ. ಸುಪ್ರೀಂ ನೀಡಿದ ಆದೇಶದ ಹಿನ್ನೆಲೆಯಲ್ಲಿ ಮಸೀದಿಗೆ ಜಾಗ ಗುರುತಿಸಲಾಗಿದೆ.

    ಉತ್ತರ ಪ್ರದೇಶದ ಸರ್ಕಾರ ಈ ಸ್ಥಳಗಳಲ್ಲಿ ಗುರುತಿಸಿರುವ ಜಾಗವನ್ನು ಮಸೀದಿ ಕಟ್ಟಿಸಲು ಸುನ್ನಿ ವಕ್ಫ್​ ಬೋರ್ಡ್​ಗೆ ನೀಡಲಾಗುವುದು.

    ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್​ನ ಆದೇಶದ ಪ್ರಕಾರ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಂಬಂಧ ಪಟ್ಟಂತೆ ವಕ್ಫ್​ಬೋರ್ಡ್​ನ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗುವುದು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts