More

    ಮೀನಿಗೆ ಗಾಳ ಹಾಕಿದಾಗ ಮಕ್ಕಳಿಗೆ ಸಿಕ್ತು ಚಿನ್ನದ ಮೂರ್ತಿ: ಮುಂದೇನಾಯ್ತು?

    ಗೊಂಡಾ (ಉತ್ತರ ಪ್ರದೇಶ): ನದಿ, ಸಮುದ್ರಗಳು ಅದೆಷ್ಟೋ ಅಗಾಧವಾಗಿರುವ ಕೌತುಕಗಳನ್ನು ತನ್ನ ಒಡಲಿನಲ್ಲಿ ಸೇರಿಸಿಕೊಂಡಿರುತ್ತದೆ ಎನ್ನುತ್ತಾರೆ. ಹಾಗೆಯೇ ಮೀನುಗಾರರಿಗೂ ಅಚ್ಚರಿ ಎನಿಸುವ ವಸ್ತುಗಳು ನದಿಯಲ್ಲಿ ಸಿಕ್ಕಿರುವ ಉದಾಹರಣೆಗೂ ಇವೆ.

    ಅಂಥದ್ದೇ ಒಂದು ಅಚ್ಚರಿ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಚಂದ್ರದೀಪ್ ಘಾಟ್‌ನಲ್ಲಿರುವ ಕ್ವಾನೋ ನದಿಯಲ್ಲಿ ನಡೆದಿದೆ. 12 ವರ್ಷದ ಇಬ್ಬರು ಮಕ್ಕಳು ಮೀನು ಹಿಡಿಯಲು ಹೋದಾಗ ಈ ಅಚ್ಚರಿ ನಡೆದಿದೆ. ಅದೇನೆಂದರೆ ಇವರಿಗೆ ಸೀತೆಯ ವಿಗ್ರಹ ಸಿಕ್ಕಿದೆ. ಹಾಗೆಂದು ಇದು ಸಾಮಾನ್ಯ ವಿಗ್ರಹವಲ್ಲ ಬದಲಿಗೆ ಬರೋಬ್ಬರಿ 17 ಕೆ.ಜಿ 650 ಗ್ರಾಂ ತೂಕದ ಮೂರ್ತಿಯಿದು!

    ಅಷ್ಟಧಾತುವಿನಿಂದ (ಚಿನ್ನ ಸೇರಿದಂತೆ ಎಂಟು ಲೋಹಗಳ ಮಿಶ್ರಲೋಹದ್ದು) ತಯಾರಿಸಲ್ಪಟ್ಟಿರುವ ವಿಗ್ರಹವಿದು!ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಲವಾರು ಕೋಟಿ ಮೌಲ್ಯದ ವಿಗ್ರಹ ಇದು ಎನ್ನಲಾಗಿದೆ.

    ಇದನ್ನೂ ಓದಿ: ಒಂದು ಫೋಟೋ ನೂರು ಭಾವ: ಚಿಕಿತ್ಸೆಗಾಗಿ ಬಿಳಿಯನನ್ನು ಒಯ್ಯುತ್ತಿರುವ ಕಪ್ಪುವರ್ಣೀಯರು!

    ಗೊಂಡಾ ಜಿಲ್ಲೆಯ ನಿವಾಸಿಗಳಾದ ರತಿ ರಾಮ್ ಅವರ ಮಗ ಶ್ಯಾಮ್ ಸಿಂಗ್ ಮತ್ತು ವಿಜಯ್ ಅವರ ಪುತ್ರ ಅರುಣ್ ಎಂಬ 12 ವರ್ಷದ ಮಕ್ಕಳು ಮೀನು ಹಿಡಿಯಲು ಹೋಗಿದ್ದರು. ಬಲೆಯನ್ನು ನದಿಯೊಳಕ್ಕೆ ಬೀಸಿದಾಗ ಮೀನು ಸಿಕ್ಕಿಕೊಂಡಿತು. ಅದನ್ನು ತೆಗೆಯಲು ಅನ್ನು ಹೊರಗೆ ತರಲು ಇಬ್ಬರೂ ನೀರಿಗೆ ಕಾಲಿಟ್ಟಾಗ, ಕಾಲಿಗೆ ಏನೋ ತಗುಲಿದಂತೆ ಅನ್ನಿಸಿತು. ಅದನ್ನು ಎತ್ತಿ ನೋಡಿದಾಗ ಸೀತೆಯ ವಿಗ್ರಹವಾಗಿತ್ತು.

    ಅದು ದೇವಿಯ ಮೂರ್ತಿ ಎನ್ನುವುದು ಮಕ್ಕಳಿಗೆ ತಿಳಿಯಿತೇ ವಿನಾ, ಅದರ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಕೂಡಲೇ ಗ್ರಾಮಸ್ಥರಿಗೆ ಮಾಹಿತಿ ನೀಡಿದರು, ಅವರು ಉತ್ತರ ಪ್ರದೇಶದ ಗೊಂಡಾದ ಗೌರ ಚೌಕಿಯ ಪೊಲೀಸರಿಗೆ ಮಾಹಿತಿ ನೀಡಿದರು.

    ಸ್ಥಳಕ್ಕೆ ತಲುಪಿದ ಪೊಲೀಸ್ ಅಧಿಕಾರಿಗಳು ಮೂರ್ತಿಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು. ನಂತರ ಅದರ ಬಗ್ಗೆ ವಿಚಾರಣೆ ಮಾಡಿದಾಗ ಅದು 17 ಕೆಜಿ 650 ಗ್ರಾಂ ತೂಕದ ಅಷ್ಟಧಾತುವಿನಿಂದ ಮಾಡಿದ ಮೂರ್ತಿ. ಅದರ ಬೆಲೆ ಹಲವು ಕೋಟಿ ಎಂಬುದು ತಿಳಿದಿದೆ. ದೇವಿಯ ವಿಗ್ರಹವನ್ನು ನೋಡಿರುವ ತಜ್ಞರು ಇದು 15 ಅಥವಾ 16 ನೇ ಶತಮಾನಕ್ಕೆ ಸೇರಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಆರೋಗ್ಯ ಸಚಿವರನ್ನೂ ಬಿಡದ ಕರೊನಾ! ಸತ್ಯೇಂದ್ರ ಜೈನ್​ ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts