More

    ಬೆನ್ನು, ಶ್ವಾಸಕೋಶಗಳಿಗೆ ಶಕ್ತಿ ತುಂಬುವ ಉಪಯುಕ್ತ ಆಸನವಿದು!

    ಗೂನು ಬೆನ್ನಿನ ಪರಿಹಾರ ಸೇರಿದಂತೆ ಹಲವು ಉಪಯೋಗಗಳಿರುವ ಸರಳ ಆಸನವೆಂದರೆ, ಅರ್ಧ ಉಷ್ಟ್ರಾಸನ. ಮೊಣಕಾಲನ್ನು ಊರಿ ಉಸಿರಿನ ಗತಿಯೊಂದಿಗೆ ಸುಲಭವಾಗಿ ಹಿಂದಕ್ಕೆ ಬಾಗುವ ಆಸನವಿದು. ಬೆನ್ನಿನ ಸ್ನಾಯುಗಳು, ನರಗಳು, ಎಲುಬುಗಳು ಬಲಗೊಳ್ಳುವುದರೊಂದಿಗೆ ಅಸ್ತಮಾದಂತಹ ಗಂಭೀರ ಸಮಸ್ಯೆಯ ನಿವಾರಣೆಯಲ್ಲಿ ಇದು ಸಹಕಾರಿ.

    ಉಪಯೋಗಗಳು : ಅರ್ಧ ಉಷ್ಟ್ರಾಸನದ ಅಭ್ಯಾಸದಿಂದ ಬೆನ್ನಿನ ಸ್ನಾಯುಗಳು ಮತ್ತು ಎಲುಬುಗಳು ಬಲಿಷ್ಠವಾಗುತ್ತವೆ. ಗೂನು ಬೆನ್ನು ಪರಿಹಾರವಾಗುತ್ತದೆ. ರಕ್ತ ಸಂಚಾರ ಸುಗಮವಾಗುತ್ತದೆ. ನರಮಂಡಲ ಸಚೇತನಗೊಳ್ಳುತ್ತದೆ. ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿ ಅಸ್ತಮಾ ನಿವಾರಣೆಯಾಗುತ್ತದೆ. ಥೈರಾಯ್ಡ್​ ಗ್ರಂಥಿಯ ಆರೋಗ್ಯ ವರ್ಧಿಸುತ್ತದೆ. ಬೆನ್ನಿನ ಹುರಿಯ ನರಗಳು ಚೈತನ್ಯ ಹೊಂದುತ್ತವೆ. ಜೀರ್ಣಾಂಗಗಳು ಚುರುಕುಗೊಳ್ಳುತ್ತವೆ.

    ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ; ಪಾಲನೆಯಾದ ಕೋವಿಡ್ ಮಾರ್ಗಸೂಚಿ

    ಮಾಡುವ ವಿಧಾನ : ಮೊಣಕಾಲಿನ ಮೇಲೆ ಕುಳಿತು ಈ ಆಸನ ಮಾಡಲು ಆರಂಭಿಸಬೇಕು. ಎರಡೂ ಕೈಗಳನ್ನೂ ಸೊಂಟದ ಹಿಂಭಾಗದಲ್ಲಿ ಜೋಡಿಸಿರಬೇಕು. ಉಸಿರನ್ನು ತೆಗೆದುಕೊಳ್ಳುತ್ತಾ, ನಿಧಾನವಾಗಿ ಸೊಂಟದ ಮೇಲ್ಭಾಗವನ್ನು ಹಿಂದಕ್ಕೆ ಬಾಗಿಸಬೇಕು. ಸ್ವಲ್ಪ ಹೊತ್ತು ಸಹಜ ಉಸಿರಾಟ ಮಾಡಿ, ನಂತರ ನಿಧಾನವಾಗಿ ಮೂಲಸ್ಥಿತಿಗೆ ವಾಪಸಾಗಬೇಕು.

    ತಲೆ ಸುತ್ತು, ಕುತ್ತಿಗೆ ನೋವು, ಹೃದಯ ದೌರ್ಬಲ್ಯ ಇರುವಂಥವರು ಈ ಆಸನವನ್ನು ಮಾಡಬಾರದು.

    ಜೀರ್ಣಶಕ್ತಿ ಹೆಚ್ಚಿಸಿ ಉಸಿರಾಟ ಸುಗಮವಾಗಿಸುತ್ತೆ, ವಜ್ರಾಸನ!

    ಸಂಸತ್ತಿನಲ್ಲಿ ವಿಪಕ್ಷದ ನಡವಳಿಕೆ ಪ್ರಜಾಪ್ರಭುತ್ವಕ್ಕೆ ಅಪಮಾನ: ಗೋಯಲ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts