More

    ಸೋಂಕಿಗೆ ‘ಆರೋಗ್ಯ ಸೇತು’, ಮಾಲಿನ್ಯಕ್ಕೆ ‘ಸಮೀರ್’…

    ನವದೆಹಲಿ: ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಮೊಬೈಲ್​ ಅಪ್ಲಿಕೇಷನ್​ವೊಂದರ ಮೊರೆ ಹೋಗಿದ್ದ ಕೇಂದ್ರ ಸರ್ಕಾರ ಈಗ, ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದಂತೆಯೂ ಅಂಥದ್ದೇ ಒಂದು ಹೆಜ್ಜೆ ಇಟ್ಟಿದೆ.

    ಕರೊನಾ ಸೋಂಕಿತರ ಸುಳಿವು ತಿಳಿಯಲು ಆರೋಗ್ಯ ಸೇತುವನ್ನು ರೂಪಿಸಿದ್ದ ಕೇಂದ್ರ ಸರ್ಕಾರ, ಎಲ್ಲರೂ ಅದನ್ನು ಡೌನ್​ಲೋಡ್​ ಮಾಡಿಕೊಂಡು ಕರೊನಾ ಸೋಂಕು ಹರಡುವಿಕೆ ತಡೆಯುವಲ್ಲಿ ಸಹಕರಿಸಬೇಕು ಎಂದು ಕೋರಿಕೊಂಡಿತ್ತು. ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಇಂಥದ್ದೊಂದು ಮನವಿ ಮಾಡಿಕೊಂಡಿದ್ದರು.

    ಇದೀಗ ಪರಿಸರ ಮಾಲಿನ್ಯದ ದುಷ್ಪರಿಣಾಮ ತಡೆಯುವ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ ಇಲಾಖೆ ಈ ಕ್ರಮ ಅನುಸರಿಸುತ್ತಿದೆ. ಎಲ್ಲರೂ ಮೊಬೈಲ್​ಫೋನ್​ ಅಪ್ಲಿಕೇಷನ್​ ‘ಸಮೀರ್​’ಅನ್ನು ಡೌನ್​ಲೋಡ್ ಮಾಡಿಕೊಳ್ಳಿ. ಇದು ದೇಶಾದ್ಯಂತ ವಿವಿಧ ನಗರಗಳಲ್ಲಿನ ಪರಿಸರ ಮಾಲಿನ್ಯ ಪ್ರಮಾಣವನ್ನು ತಿಳಿಸುತ್ತದೆ. ಅತಿಹೆಚ್ಚು ಮಾಲಿನ್ಯ ಹೊಂದಿರುವ ಪ್ರದೇಶವನ್ನುಇದು ಕೆಂಪು ಗುರುತಿನ ಮೂಲಕ ತೋರಿಸುತ್ತದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್​ ತಿಳಿಸಿದ್ದಾರೆ. ಈ ಮೂಲಕ ಸಾರ್ವಜನಿಕರು ಅಂಥ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಬಹುದು ಅಥವಾ ಸೂಕ್ತ ಮುನ್ನೆಚ್ಚರಿಕೆ ಕಂಡುಕೊಳ್ಳಬಹುದು ಎಂಬುದು ಪರಿಸರ ಇಲಾಖೆಯ ಉದ್ದೇಶವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts