More

    ಮಗುವಿಲ್ಲದ ಜೀವನಕ್ಕೆ ಅಂತ್ಯಸಂಸ್ಕಾರ..! ‘RIP’ ಎಂದು ಬರೆದು ವಿಚಿತ್ರವಾಗಿ ಮೆಟರ್ನಿಟಿ ಫೋಟೋಶೂಟ್​​ ಮಾಡಿಸಿದ ಮಹಿಳೆ; ಫೋಟೋ ವೈರಲ್​​

    ಇತ್ತೀಚಿನ ದಿನಗಳಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಫೋಟೋಶೂಟ್ ನಲ್ಲು ಹೊಸ ಬಗೆ, ಹೊಸ ಆಕರ್ಷಣೆ, ಚಿತ್ರ ವಿಚಿತ್ರ ಪರಿಕಲ್ಪನೆಗಳು ಬಂದಿದೆ.


    ಆದರೆ, ಇಲ್ಲೊಬ್ಬ ಯುವತಿ ಇದೀಗ ಕಪ್ಪು ಡ್ರೆಸ್​​​ನಲ್ಲಿ ಮಾಡಿಸಿರುವ ಮೆಟರ್ನಿಟಿ ಫೋಟೋಶೂಟ್​​​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
    ಅಮೆರಿಕದ ಕೆಂಟುಕಿಯಲ್ಲಿ ವಾಸಿಸುತ್ತಿರುವ 23 ವರ್ಷದ ಚೆರಿಡಾನ್ ಲಾಗ್ಸ್‌ಡನ್ ಇತ್ತೀಚೆಗಷ್ಟೆ ತಮ್ಮ ಮೆಟರ್ನಿಟಿ ಫೋಟೋಶೂಟ್​​ ಮಾಡಿಸಿಕೊಂಡಿದ್ದಾರೆ.

    ಸದ್ಯ ಆಕೆಯ ಫೋಟೋಗಳು ವೈರಲ್​ ಆಗಿದೆ. ಈಕೆ ನಾನು ಇಲ್ಲಿಯವರೆಗೂ ಮಗುವಿಲ್ಲದೆ ನನ್ನ ಜೀವನವನ್ನ ನಡೆಸಿದ್ದೇನೆ. ಆಜೀವನಕ್ಕೆ ಅಂತ್ಯಸಂಸ್ಕಾರ ಮಾಡುತ್ತಿದ್ದೇನೆ, RIP to being kid-free ಎಂದು ತನ್ನ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​​ ಮಾಡಿದ್ದಾಳೆ.


    ಕಪ್ಪು ವಸ್ತ್ರ ಧರಿಸಿರುವ ಈಕೆ ಕಾಡಿನ್ಯ ಮಧ್ಯೆ ತೆರಳಿ ತನ್ನ ಅಲ್ಟ್ರಾಸೌಂಡ್​​ ಫೋಟೋಗಳನ್ನ ಹಿಡಿದುಕೊಂಡು ಪೋಸ್​​​ ಕೊಟ್ಟಿದ್ದಾಳೆ.


    ಛಾಯಾಗ್ರಾಹಕ ಮಲಿಕ್ ಟ್ರಿಗ್ ಸೆರೆಹಿಡಿದ ಚಿತ್ರಗಳನ್ನ ಚೆರಿಡಾನ್ ಲಾಗ್ಸ್‌ಡನ್ ಹಂಚಿಕೊಂಡಿದ್ದು, ಆಕೆ ಬೇಸರದಿಂದ ಫೋಸ್​ ಕೊಟ್ಟಿದ್ದಾಳೆ. ನಾನು ತಾಯಿ ಆಗುತ್ತಿರುವ ಬಗ್ಗೆ ನನಗೆ ನಿಜವಾಗಿಯೂ ಖುಷಿ ಇದೆ. ಆದರೆ ಮಗುವಿಲ್ಲದ ಇಷ್ಟು ದಿನಗಳ ಕಾಲ ಕಳೆದ ಜೀವನಕ್ಕೆ ಇದು ವಿದಾಯ ಅಂತಲೂ ಹೇಳಿದ್ದಾಳೆ.


    ಪೋಸ್ಟ್ ತ್ವರಿತವಾಗಿ ವೈರಲ್ ಆಗತ್ತಿದ್ದಂತೆಯೇ, 14,000 ಕ್ಕೂ ಹೆಚ್ಚು ಲೈಕ್ಸ್​​ ಮತ್ತು ಕಾಮೆಂಟ್​​ಗಳನ್ನ ಪಡೆಯುತ್ತಿದೆ. ಕೆಲವರು ಈ ಫೋಟೊ ಶೂಟನ್ನ ಟೀಕಿಸಿದ್ರೆ ಇನ್ನು ಹಲವರು ಅವಳು ತಾಯಿಯಾಗುತ್ತಿರುವುದಕ್ಕೆ ಹಾರೈಸಿ ಅಭಿನಂದಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts