More

    ಇರಾನ್​ನಲ್ಲಿ ಉಕ್ರೇನಿಯನ್​ ವಿಮಾನ ಪತನ ಪ್ರಕರಣ: ತನಿಖೆಯಲ್ಲಿ ಕೈಜೋಡಿಸುವುದಾಗಿ ತಿಳಿಸಿದ ಅಮೆರಿಕ

    ನ್ಯೂಯಾರ್ಕ್​: ಇರಾನ್​ನಲ್ಲಿ ನಡೆದ ಉಕ್ರೇನಿಯನ್​ ವಿಮಾನ ಪತನದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅನುಮಾನ ವ್ಯಕ್ತಪಡಿಸಿದ ಬೆನ್ನಲ್ಲೇ ಪತನ ಕುರಿತದಾ ತನಿಖೆಗೆ ಕೈಜೋಡಿಸುವುದಾಗಿ ಯುಎಸ್​ನ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ(ಎನ್​ಟಿಎಸ್​ಬಿ) ಗುರುವಾರ ತಿಳಿಸಿದೆ.

    ಈ ಬಗ್ಗೆ ಎನ್​ಟಿಎಸ್​ಬಿ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದು, ಬುಧವಾರ ಘಟಿಸಿದ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಇರಾನ್​ನಿಂದ ಔಪಚಾರಿಕ ಅಧಿಸೂಚನೆಯನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದೆ.

    ಪತನದ ಬಗ್ಗೆ ತನಿಖೆ ನಡೆಸಲು ಎನ್​ಟಿಎಸ್​ಬಿಯು ಅಂಗೀಕೃತ ಪ್ರಾತಿನಿಧಿಕವೊಂದನ್ನು ಗೊತ್ತುಪಡಿಸಲಿದೆ. ಅಲ್ಲದೆ, ಇರಾನ್​ ನೇತೃತ್ವದಲ್ಲಿ ಪತನದ ಸುತ್ತಲಿನ ಪರಿಸ್ಥಿತಿಯ ಪರಿವೀಕ್ಷಣೆಯನ್ನು ಮುಂದುವರಿಸಲಿದೆ. ಇದರೊಂದಿಗೆ ತನಿಖೆಯಲ್ಲಿ ತನ್ನ ಭಾಗವಹಿಸುವಿಕೆ ಮಟ್ಟವನ್ನು ಎನ್​ಟಿಎಸ್​ಬಿ ಮೌಲ್ಯಮಾಪನ ಮಾಡಲಿದೆ ಎಂದು ತಿಳಿಸಿದೆ.

    ಎನ್​ಟಿಎಸ್​ಬಿ ಒಳಗೊಂಡ ಯಾವುದೇ ತನಿಖೆಯಲ್ಲಿ ಪತನದ ಕಾರಣಗಳ ಬಗ್ಗೆ ಯಾವುದೇ ಊಹಾಪೋಹಕ್ಕೆ ಎಡೆಮಾಡಿಕೊಡುವುದಿಲ್ಲ. ನಿಖರ ತನಿಖೆಯಷ್ಟನ್ನೇ ಪರಿಗಣಿಸಲಾಗುವುದು ಎಂದು ಸ್ಪಷ್ಟನೆ ನೀಡಿದೆ.

    ಬೋಯಿಂಗ್ 737 ಹೆಸರಿನ​ ಉಕ್ರೇನಿಯನ್​ ವಿಮಾನ ಬುಧವಾರ ಬೆಳಗ್ಗೆ ಇರಾನ್​ನ ತೆಹ್ರಾನ್​ ಇಮಾಮ್​ ಖೊಮೆನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಿಟ್ಟು ಉಕ್ರೇನ್​ನ ಕೈವ್‌ ಬೋರಿಸ್‌ಪಿಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಆದರೆ ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ಏರ್​ಪೋರ್ಟ್​ ಬಳಿ ಪತನಗೊಂಡಿದೆ. ಸ್ಫೋಟಗೊಂಡ ಪರಿಣಾಮ ವಿಮಾನದಲ್ಲಿದ್ದವರೆಲ್ಲಾ ಮೃತರಾಗಿರುವುದಾಗಿ ಉಕ್ರೇನ್​ ವಿದೇಶಾಂಗ ಸಚಿವಾಲಯದ ಅಧಿಕಾರಿ ಕೀವ್​ ತಿಳಿಸಿದ್ದರು. ಇರಾನ್​ ಕೂಡ ಇದನ್ನೇ ವಾದಿಸಿತ್ತು. ಆದರೆ, ವಿಮಾನ ಪತನದ ಬಳಿ ಕ್ಷಿಪಣಿ ಅವಶೇಷ ದೊರೆತಿರುವುದು ಅನುಮಾನವನ್ನು ಹುಟ್ಟುಹಾಕಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts