More

    ಅಮೆರಿಕ ಅಧ್ಯಕ್ಷೀಯ ಚುನಾವಣೆ 2020: ಡೊನಾಲ್ಡ್ ಟ್ರಂಪ್ v/s ಜೋ ಬಿಡೆನ್

    ಅಮೆರಿಕದಲ್ಲಿ ಈಗ ಚುನಾವಣೆಯ ಅಬ್ಬರ. ಎರಡನೇ ಅವಧಿಗೆ ಮರು ಆಯ್ಕೆ ಬಯಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಮಾಜಿ ಉಪಾಧ್ಯಕ್ಷ, ಡೆಮಾಕ್ರಟಿಕ್ ಪಕ್ಷದ ಹುರಿಯಾಳು ಜೋ ಬಿಡೆನ್ ತೀವ್ರ ಪೈಪೋಟಿ ನೀಡಿದ್ದಾರೆ. ಹಾಲಿ ಉಪಾಧ್ಯಕ್ಷ ಮೈಕ್ ಪೆನ್ಸ್ ಟ್ರಂಪ್​ರ ‘ರನ್​ವೆುೕಟ್’ ಆಗಿದ್ದರೆ, ಭಾರತ ಮೂಲದ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ. ಕರೊನಾ ಸಂದರ್ಭದ ಈ ಚುನಾವಣೆ ಅಮೆರಿಕದ ಭವಿಷ್ಯ ಮಾತ್ರವಲ್ಲ, ಜಾಗತಿಕ ಸಮುದಾಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ವಿಶ್ವದ ಕಣ್ಣು ಅಮೆರಿಕದ 46ನೇ ಅಧ್ಯಕ್ಷೀಯ ಚುನಾವಣೆ ಮೇಲೆ ನೆಟ್ಟಿದೆ. ಅಭ್ಯರ್ಥಿಗಳ ಬಲಾಬಲದ ಚಿತ್ರಣ ಇಲ್ಲಿದೆ.

    ಟ್ರಂಪ್

    ಅಮೆರಿಕ ಅಧ್ಯಕ್ಷೀಯ ಚುನಾವಣೆ 2020: ಡೊನಾಲ್ಡ್ ಟ್ರಂಪ್ v/s ಜೋ ಬಿಡೆನ್ಪೂರ್ಣ ಹೆಸರು: ಡೊನಾಲ್ಡ್ ಜಾನ್ ಟ್ರಂಪ್. (ಡಿಜೆಟಿ ಎಂದೇ ಪರಿಚಿತ)
    ಜನನ: 1946ರ ಜೂನ್ 14, ನ್ಯೂಯಾರ್ಕ್ ಸಿಟಿ.
    ತಂದೆ-ತಾಯಿ: ಫ್ರೆಡ್ ಟ್ರಂಪ್ ಮತ್ತು ಮೇರಿ ಆನ್
    ಒಡಹುಟ್ಟಿದವರು: ಇಬ್ಬರು ಸೋದರರು, ಇಬ್ಬರು ಸೋದರಿಯರು.
    ಪತ್ನಿಯರು: ಮೊದಲ ಹೆಂಡತಿ ಇವಾನಾ (ವಿಚ್ಛೇದನ), ಎರಡನೇ ಪತ್ನಿ ಮಾರ್ಲಾ ಮ್ಯಾಪಲ್ಸ್ (ವಿಚ್ಛೇದನ), ಮೂರನೇ ಮಡದಿ ಮೆಲನಿಯಾ.
    ಮಕ್ಕಳು: ಇವಾಂಕಾ ಮತ್ತು ಟಿಫಾನಿ (ಹೆಣ್ಣು ಮಕ್ಕಳು) ಬ್ಯಾರನ್,
    ಡೊನಾಲ್ಡ್ ಟ್ರಂಪ್ ಜೂನಿಯರ್, ಎರಿಕ್ (ಗಂಡು ಮಕ್ಕಳು)
    ಶಿಕ್ಷಣ- ವೃತ್ತಿ: ಪದವಿಯ ಬಳಿಕ ತಂದೆಯ ರಿಯಲ್ ಎಸ್ಟೇಟ್ ಕಂಪನಿಯಲ್ಲೇ ಕೆಲಸ. 1983ರಲ್ಲಿ ಮ್ಯಾನ್​ಹಟನ್​ನಲ್ಲಿ ಟ್ರಂಪ್ ಟವರ್ (58 ಅಂತಸ್ತಿನ ಗಗನಚುಂಬಿ ಕಟ್ಟಡ) ನಿರ್ಮಾಣ.
    ಏಳು-ಬೀಳು: 1991-2009ರ ನಡುವೆ ಆರು ಬಾರಿ ವೈಯಕ್ತಿಕ ಹಾಗೂ ಉದ್ಯಮ ದಿವಾಳಿತನ ಘೋಷಿಸಿಕೊಂಡಿದ್ದರು.
    ಪ್ರಮುಖ ಆಸ್ತಿ: ಫ್ಲಾರಿಡಾದ ಪಾಮ್ ಕಡಲ ಕಿನಾರೆಯಲ್ಲಿ 17 ಎಕರೆ ಪ್ರದೇಶದಲ್ಲಿರುವ ಮಾರ್ ಲಾ ಲೊಗೋ ಎಸ್ಟೇಟ್.
    ಕುಟುಂಬದ ವಾರ್ಷಿಕ ಆದಾಯ 27 ಸಾವಿರ ಕೋಟಿ ರೂಪಾಯಿ
    ಒಟ್ಟಾರೆ ಆಸ್ತಿ ಮೌಲ್ಯ 65,990 ಕೋಟಿ ರೂಪಾಯಿ
    ಹೆಗ್ಗಳಿಕೆ: 2015ರಲ್ಲಿ ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿದ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಟ್ರಂಪ್​ಗೆ 405ನೇ ಸ್ಥಾನ. 2018ರಲ್ಲಿ ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿ.
    ಹವ್ಯಾಸ:‘ಗೋಸ್ಟ್ಸ್ ಕಾಂಟ್ ಡೂ ಇಟ್’ (1990) ಸಿನಿಮಾದಲ್ಲಿ ನಟನೆ. ಟಿವಿ ಕಾರ್ಯಕ್ರಮದ ನಿರ್ಮಾಪಕ ಮತ್ತು ‘ದ ಅಪಿಯರೆನ್ಸ್’ ಎಂಬ ಗೇಮ್ ಷೋ ಆಂಕರ್. ಗಾಲ್ಪ್ ಆಟದಲ್ಲಿ ಆಸಕ್ತಿ .
    ದೌರ್ಬಲ್ಯ : ಸಡಿಲ ನಾಲಿಗೆಯ ಕಾರಣ ಹಲವು ಸಲ ಟೀಕೆಗೆ ಗುರಿ. ವಿರೋಧಿಗಳಿಗೆ ಕಿರುಕುಳ ನೀಡುತ್ತಾರೆಂಬ ಆಪಾದನೆ. ಜನಾಂಗೀಯ ದ್ವೇಷಕ್ಕೆ ಬೆಂಬಲ ನೀಡುತ್ತಾರೆಂಬ ದೂರು
    ಶಕ್ತಿ: ಆಕ್ರಮಣಕಾರಿ ಸ್ವಭಾವ. ದಿಟ್ಟ ನಿರ್ಧಾರ ತಳೆಯಲು ಮುಂದು. ಬಲಪಂಥೀಯ ನಿಲುವು. ಭಯೋತ್ಪಾದನೆ, ಮೂಲಭೂತವಾದ ವಿರೋಧಿ. ಅಮೆರಿಕ ಮೊದಲು ಆದ್ಯತೆಯಿಂದ ಜನಪ್ರಿಯ.
    ಟ್ರಂಪ್ ಆಡಳಿತದ ನೋಟ: ‘ಅಮೆರಿಕ ಮೊದಲು’ ನೀತಿಯ ಕಾರಣ 2017ರ ನವೆಂಬರ್​ನಲ್ಲಿ ಏಷ್ಯಾದಿಂದ ಹಲವು ಕಂಪನಿಗಳು ಅಮೆರಿಕಕ್ಕೆ ವಾಪಸಾದವು. ಇದರಿಂದ 40 ಲಕ್ಷ ಉದ್ಯೋಗ ಸೃಷ್ಟಿಯಾಯಿತು.
    ಸಾರ್ವಜನಿಕ ಪಡಿತರ ವಿತರಣೆಯಿಂದ 39 ಲಕ್ಷ ಜನರು ಹೊರಕ್ಕೆ
    ಆರೋಗ್ಯ ರಕ್ಷಣೆ, ವಿಮೆಗೆ ಹೊಸ ಯೋಜನೆ.
    ಕಲ್ಲಿದ್ದಲು ರಫ್ತು ಶೇ. 60ರಷ್ಟು ಹೆಚ್ಚಳ, ತೈಲ ಉತ್ಪಾದನೆಯಲ್ಲಿ ಸಾರ್ವಕಾಲಿಕ ದಾಖಲೆ.
    ರಕ್ಷಣಾ ಬಜೆಟ್​ಗೆ 700 ಬಿಲಿಯನ್ ಡಾಲರ್.
    ಕ್ರಿಮಿನಲ್ ಹಿನ್ನೆಲೆ ಇದ್ದ 8.20 ಲಕ್ಷ ಜನರ ವಿರುದ್ಧ ಕ್ರಮಜರುಗಿಸಲು ಅನುಮತಿ. ಇದರಿಂದ ಲಕ್ಷಾಂತರ ಅಕ್ರಮ ವಲಸಿಗರು ದೇಶದಿಂದ ಆಚೆ.
    ಐಸಿಸ್ ನಾಯಕ ಅಬು ಬಕರ್ ಅಲ್-ಬಾಗ್ದಾದಿಯನ್ನು 2019ರ ಅಕ್ಟೋಬರ್ 26ರಂದು ಅವನ ನೆಲೆಯಲ್ಲೇ ಹೊಡೆದುಹಾಕಿದ್ದು.
    ಸುಪ್ರೀಂಕೋರ್ಟ್ ಮತ್ತು ಮೇಲ್ಮನವಿ ನ್ಯಾಯಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜಡ್ಜ್​ಗಳ ನೇಮಕ
    ಚೀನಿ ಸರಕಿನ ಮೇಲೆ 200 ಬಿಲಿಯನ್ ಡಾಲರ್ ಹೆಚ್ಚುವರಿ ತೆರಿಗೆ ವಿಧಿಸಿದರು. ಚೀನಾ ಟೆಲಿಕಾಂ ಕಂಪನಿಗಳಿಗೆ ನಿರ್ಬಂಧ.

    ಹಿನ್ನಡೆ-ವಿವಾದ
    ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ವಿುಸುವ 5.70 ಬಿಲಿಯನ್ ಡಾಲರ್ ಅನುದಾನಕ್ಕೆ ಸಂಸತ್ ಒಪ್ಪಿಗೆ ನೀಡದ ಕಾರಣ ದೇಶವನ್ನು 35 ದಿನ ಸ್ತಬ್ಧಗೊಳಿಸಿ ವಿಶೇಷ ಅಧಿಕಾರದ ಮೂಲಕ ಯೋಜನೆಗೆ ಆದೇಶ.
    ಜೋ ಬಿಡೆನ್ ಮತ್ತು ಅವರ ಪುತ್ರ ಹಂಟನ್ ಬಿಡೆನ್ ಉಕ್ರೇನ್​ನಲ್ಲಿ ಹೊಂದಿರುವ ಉದ್ಯಮಗಳ ಮೇಲೆ ತನಿಖೆಗೆ ಆದೇಶಿಸುವಂತೆ ಉಕ್ರೇನ್ ಅಧ್ಯಕ್ಷರ ಮೇಲೆ ಒತ್ತಡ ಹೇರುವ ಮೂಲಕ ಅಧಿಕಾರ ದುರ್ಬಳಕೆ ಆರೋಪದ ಮೇಲೆ ವಾಗ್ದಂಡನೆ ಗೊತ್ತುವಳಿ ಮಂಡಿಸಲಾಗಿತ್ತು.
    ಸಂಸತ್​ನ ಕೆಳಮನೆಯಲ್ಲಿ ಇದಕ್ಕೆ ಒಪ್ಪಿಗೆ ಸಿಕ್ಕಿತ್ತು. ಆದರೆ ಮೇಲ್ಮನೆ ಸೆನೆಟ್​ನಲ್ಲಿ ಟ್ರಂಪ್ ಆರೋಪ ಮುಕ್ತರಾದರು.
    ವಿಶ್ವಸಂಸ್ಥೆಯ ಹವಾಮಾನ ಕಾರ್ಯಕ್ರಮ ಸಂಬಂಧಿತ ಎಲ್ಲ ಅನುದಾನ ರದ್ದು, 2017ರ ಜೂನ್​ನಲ್ಲಿ ಪ್ಯಾರಿಸ್ ಒಪ್ಪಂದದಿಂದ ಹೊರಕ್ಕೆ
    ಕರೊನಾ ಸೋಂಕಿನ ಬಗ್ಗೆ ಮೊದಲೇ ಎಚ್ಚರಿಕೆ ನೀಡಲಿಲ್ಲ. ಇದರ ದುಷ್ಪರಿಣಾಮ, ವ್ಯಾಪಕತೆ ಬಗ್ಗೆ ಮಾಹಿತಿ ಮುಚ್ಚಿಟ್ಟಿತು ಎಂದು ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಕಿಡಿ. ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಕೈಗೊಂಬೆಯಾಗಿದೆ ಎಂದು ಆರೋಪಿಸಿ ಅನುದಾನಕ್ಕೆ ತಡೆ.
    ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾ ಜತೆಗೆ ವ್ಯವಹಾರ ಇರಿಸಿಕೊಂಡ ದೇಶಗಳ ಮೇಲೂ ನಿರ್ಬಂಧದ ಕಾನೂನು.
    ಟ್ರಂಪ್ ಆಡಳಿತದಲ್ಲಿ ಆರ್ಥಿಕತೆ ಕುಸಿತ, ನಿರುದ್ಯೋಗದ ಪ್ರಮಾಣ ಹೆಚ್ಚಳ
    ಅಮೆರಿಕನ್ನರಿಗೆ ಆದ್ಯತೆ ನೀಡಲು ಎಚ್ -1 ಬಿ ವೀಸಾಕ್ಕೆ ನಿರ್ಬಂಧ ಮತ್ತು ಹೊಸ ವೀಸಾ ನೀತಿ ಘೋಷಣೆ.

    ಮೈಕ್ ಪೆನ್ಸ್

    (ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ)

    ಅಮೆರಿಕ ಅಧ್ಯಕ್ಷೀಯ ಚುನಾವಣೆ 2020: ಡೊನಾಲ್ಡ್ ಟ್ರಂಪ್ v/s ಜೋ ಬಿಡೆನ್ಪೂರ್ಣ ಹೆಸರು: ಮೈಕಲ್ ರಿಚರ್ಡ್ ಪೆನ್ಸ್
    ಜನನ: 1959ರ ಜೂನ್ 7, ಇಂಡಿಯಾನಾದ ಕೊಲಂಬಸ್ ನಗರ
    ತಂದೆ-ತಾಯಿ: ಎಡ್ವರ್ಡ್ ಜೋಸೆಫ್ ಪೆನ್ಸ್ ಜೂನಿಯರ್, ಆನ್ ಜೇನ್
    ಒಡಹುಟ್ಟಿದವರು- ಐದು ಮಂದಿ. ಸೋದರ ಜಾರ್ಜ್ ಪೆನ್ಸ್ ಸಂಸದ.
    ಪತ್ನಿ: ಕರೆನ್ ಬ್ಯಾಟನ್
    ಮಕ್ಕಳು: ಷಾರ್ಲೆಟ್ ಪೆನ್ಸ್ ಬಾಂಡ್, ಆಂಡ್ರೆ ಪೆನ್ಸ್ (ಹೆಣ್ಣು ಮಕ್ಕಳು), ಮೈಕಲ್ ಪೆನ್ಸ್ (ಮಗ)
    ಶಿಕ್ಷಣ- ವೃತ್ತಿ:ಬಿಎ ಮತ್ತು ಜ್ಯೂರಿಸ್ ಡಾಕ್ಟರ್ (ಕಾನೂನು) ಪದವಿ. ವಕೀಲ,ರಾಜಕಾರಣ, ಉದ್ಘೋಷಕ.
    ಪ್ರಮುಖ ಆಸ್ತಿ: 20 ಸಾವಿರ ಕೋಟಿ ರೂಪಾಯಿ ಒಟ್ಟು ಆಸ್ತಿ ಮೌಲ್ಯ.
    ಖ್ಯಾತಿ-ವಿಖ್ಯಾತಿ: ಹಾಲಿ ಉಪಾಧ್ಯಕ್ಷ, ಇಂಡಿಯಾನಾದ ಗವರ್ನರ್ (2013-2017), 2001ರಿಂದ 2013ರವರೆಗೆ ಹೌಸ್ ಆಫ್ ರೆಪ್ರಸೆಂಟಟೀವ್ಸ್ ಸದಸ್ಯ. 1983ರವರೆಗೆ ಡೆಮಾಕ್ರಟಿಕ್ ಪಕ್ಷದ ಸದಸ್ಯ.
    ಹವ್ಯಾಸ:ಪ್ರಾಣಿಗಳನ್ನು ಸಾಕುವುದು, ಕುದುರೆ ಸವಾರಿ, ಸೈಕ್ಲಿಂಗ್, ಬೈಕ್ ರೈಡಿಂಗ್.
    ಆರೋಪ: ಕರೊನಾ ಸೋಂಕಿನ ಶ್ವೇತಭವನ ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿದ್ದೂ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲ.

    ಬಿಡೆನ್

    ಅಮೆರಿಕ ಅಧ್ಯಕ್ಷೀಯ ಚುನಾವಣೆ 2020: ಡೊನಾಲ್ಡ್ ಟ್ರಂಪ್ v/s ಜೋ ಬಿಡೆನ್ಪೂರ್ಣ ಹೆಸರು:ಜೋಸೆಫ್ ರಾಬಿನೆಟ್ ಬಿಡೆನ್ ಜೂನಿಯರ್ (ಜೋ ಬಿಡೆನ್)

    ಜನನ:1942ರ ನವೆಂಬರ್ 20, ಪೆನ್ಸಿಲ್ವೇನಿಯಾದ ಸ್ಕ್ರಾಂಟನ್

    ತಂದೆ-ತಾಯಿ: ಜೋಸೆಫ್ ಆರ್. ಬಿಡೆನ್ ಸೀನಿಯರ್ ಮತ್ತು ಕ್ಯಾಥರೀನ್ ಯುಜೆನಿಯಾ ಫೆನ್ನೆಗನ್.
    ಒಡಹುಟ್ಟಿದವರು- ಇಬ್ಬರು ಸೋದರರು, ಓರ್ವ ಸೋದರಿ

    ಮಡದಿಯರು: ನೀಲಿಯಾ ಹಂಟರ್ ಮತ್ತು ಜಿಲ್ ಜೇಕಬ್ಸ್

    ಮಕ್ಕಳು: ಬ್ಯೂ ಬಿಡೆನ್ , ಹಂಟರ್ ಬಿಡೆನ್ (ಗಂಡು ಮಕ್ಕಳು). ನವೋಮಿ ಕ್ರಿಸ್ಟಿನಾ ಬಿಡೆನ್, ಆಶ್ಲೆ ಬಿಡೆನ್ (ಹೆಣ್ಣು ಮಕ್ಕಳು)

    ಶಿಕ್ಷಣ- ವೃತ್ತಿ: ಬಿಎ, ಜ್ಯೂರಿಸ್ ಡಾಕ್ಟರ್ (ಕಾನೂನು)
    ಪದವಿ. ವಕೀಲ, ರಾಜಕಾರಣಿ, ಲೇಖಕ.

    ಏಳು-ಬೀಳು: ಮೊದಲ ಪತ್ನಿ ನೀಲಿಯಾ ಮತ್ತು ಒಂದು ವರ್ಷದ ಪುತ್ರಿ ನವೋಮಿ 1972ರ ಡಿಸೆಂಬರ್​ನಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವು. 1977ರಲ್ಲಿ ಜಿಲ್ ಜೇಕಬ್ಸ್ ಜತೆ ವಿವಾಹ. ಡಿಲವೇರ್​ನ ಅಟಾರ್ನಿ ಜನರಲ್ ಆಗಿದ್ದ ಪುತ್ರ ಬ್ಯೂ ಬಿಡೆನ್ ಮಿದುಳು ಕ್ಯಾನ್ಸರ್​ನಿಂದ 2015ರಲ್ಲಿ ನಿಧನ.

    ಪ್ರಮುಖ ಆಸ್ತಿ:ಒಟ್ಟಾರೆ ಆಸ್ತಿ ಮೌಲ್ಯ 67 ಕೋಟಿ ರೂಪಾಯಿ. ರಿಯಲ್ ಎಸ್ಟೇಟ್​ನಲ್ಲಿ ಬಹುಪಾಲು ಹೂಡಿಕೆ.

    ಹೆಗ್ಗಳಿಕೆ: ಬರಾಕ್ ಒಬಾಮ ಅಧ್ಯಕ್ಷರಾಗಿದ್ದಾಗ 47ನೇ (2009-2017) ಉಪಾಧ್ಯಕ್ಷ. ಡೆಲವೇರ್​ನಿಂದ 1972ರಲ್ಲಿ ಮೊದಲ ಬಾರಿಗೆ ಸೆನೆಟ್​ಗೆ ಗೆಲುವು. ಅತ್ಯಂತ ಕಿರಿಯ ವಯಸ್ಸಿನ ಸಂಸದ ಎಂಬ ಹೆಗ್ಗಳಿಕೆ.

    ಹವ್ಯಾಸ: ಫುಟ್​ಬಾಲ್, ಮೋಟಾರ್ ಸೈಕಲ್ ಜಂಪಿಂಗ್, ಸ್ಕೀಯಿಂಗ್. 14 ಪುಸ್ತಕಗಳ ಕರ್ತೃ.

    ದೌರ್ಬಲ್ಯ: ಬಿಲ್ ಕ್ಲಿಂಟನ್, ಬರಾಕ್ ಒಬಾಮ, ಡೊನಾಲ್ಡ್ ಟ್ರಂಪ್​ರಂತೆ ವರ್ಚಸ್ವಿಯಲ್ಲವೆಂಬ ಟೀಕೆ, ಬಾಲ್ಯದಿಂದಲೂ ತೊದಲುವಿಕೆ ಸಮಸ್ಯೆ, ಭಾಷಣದ ಚತುರಗಾರಿಕೆ ಇಲ್ಲವೆಂಬ ಆರೋಪ ಟ್ರಂಪ್​ರಂತೆ ಆಕ್ರಮಣಶೀಲತೆ ಇಲ್ಲ

    ಶಕ್ತಿ : ವೃತ್ತಿಪರ ರಾಜಕಾರಣಿ, ವಿವಾದದಿಂದ ಬಹುತೇಕ ದೂರ, ಶ್ರೀಸಾಮಾನ್ಯರಿಗೂ ಸುಲಭವಾಗಿ ಸಿಗುವ ವ್ಯಕ್ತಿ, ದೇಶದ ಏಕತೆ, ಅಲ್ಪಸಂಖ್ಯಾತರ ಪರ ದನಿ, ಜನಾಂಗೀಯ ಹಿಂಸೆಯ ಕಟುವಿರೋಧಿ, ಚುನಾವಣಾ ನಿಧಿ ಸಂಗ್ರಹದಲ್ಲಿ ನಿಪುಣಗಾರಿಕೆ

    ಬಿಡೆನ್ ಸಾಧನೆ:1970ರಲ್ಲಿ ನ್ಯೂ ಕ್ಯಾಸಲ್ ಕೌಂಟಿ ಕೌನ್ಸಿಲರ್. ಸೆನೆಟ್​ನ ವಿದೇಶಿ ಬಾಂಧವ್ಯ ಸಮಿತಿ, ನ್ಯಾಯಾಂಗ ಸಮಿತಿಯ ಅಧ್ಯಕ್ಷ. ಆರು ಅವಧಿಗೆ ಸೆನೆಟರ್. ಆರು ದಶಕಗಳ ರಾಜಕೀಯ ಅನುಭವ. 2017ರಲ್ಲಿ ಅಧ್ಯಕ್ಷೀಯ ಫ್ರೀಡಂ ವಿಥ್ ಡಿಸ್ಟಿಂಕ್ಷನ್ ಪದಕದ ಗೌರವ. ಸೆನೆಟ್​ನ ವಿದೇಶಿ ಬಾಂಧವ್ಯ ಸಮಿತಿ, ನ್ಯಾಯಾಂಗ ಸಮಿತಿಯ ಅಧ್ಯಕ್ಷ. 1970ರಲ್ಲಿ ನ್ಯೂ ಕ್ಯಾಸಲ್ ಕೌಂಟಿ ಕೌನ್ಸಿಲರ್. 2017ರಲ್ಲಿ ಅಧ್ಯಕ್ಷೀಯ ಫ್ರೀಡಂ ವಿಥ್ ಡಿಸ್ಟಿಂಕ್ಷನ್ ಪದಕದ ಗೌರವ.

    ಹಿನ್ನಡೆ-ವಿವಾದ: 1987ರಲ್ಲೇ ಸಂಭಾವ್ಯ ಅಧ್ಯಕ್ಷೀಯ ಚುನಾವಣಾ ಸ್ಪಧೆಯಲ್ಲಿ ವಿಫಲ ಪ್ರಯತ್ನ. 2008ರಲ್ಲಿ ಸಂಭನೀಯ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಸ್ಪರ್ಧೆಯಲ್ಲಿ ಐಯೋವಾದ ಕಾಕಸ್ ಆಯ್ಕೆಯಲ್ಲಿ 5ನೇ ಸ್ಥಾನ. ಉಕ್ರೇನ್​ನಲ್ಲಿ ಪುತ್ರ ಹಂಟರ್ ಹೊಂದಿರುವ ಉದ್ಯಮದಲ್ಲಿ ಅವ್ಯವಹಾರದ ಆರೋಪ. ಹಂಟರ್ ಮಾದಕ ದ್ರವ್ಯ ವ್ಯಸನಿ, ವ್ಯಭಿಚಾರಿ ಎಂಬ ಆಪಾದನೆ ಇದೆ.

    ಕಮಲಾ ಹ್ಯಾರಿಸ್

    (ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ)

    ಅಮೆರಿಕ ಅಧ್ಯಕ್ಷೀಯ ಚುನಾವಣೆ 2020: ಡೊನಾಲ್ಡ್ ಟ್ರಂಪ್ v/s ಜೋ ಬಿಡೆನ್ಪೂರ್ಣ ಹೆಸರು: ಕಮಲಾ ದೇವಿ ಹ್ಯಾರಿಸ್

    ಜನನ: 1964ರ ಅ. 20, ಕ್ಯಾಲಿಫೋನಿರ್ಯಾದ ಓಕ್​ಲ್ಯಾಂಡ್

    ತಂದೆ-ತಾಯಿ:ಡೊನಾಲ್ಡ್ ಜೆ. ಹ್ಯಾರಿಸ್, ಶ್ಯಾಮಲಾ.

    ಒಡಹುಟ್ಟಿದವರು: ಓರ್ವ ಸೋದರಿ

    ಪತಿ:ಡೌಗ್ಲಾಸ್ ಎಮ್ಹಾಫ್

    ಶಿಕ್ಷಣ- ವೃತ್ತಿ: ಬಿಎ ಮತ್ತು ಜ್ಯೂರಿಸ್ ಡಾಕ್ಟರ್ (ಕಾನೂನು) ಪದವಿ. ಅಟಾರ್ನಿ ಜನರಲ್, ರಾಜಕಾರಣಿ.

    ಪ್ರಮುಖ ಆಸ್ತಿ: ಒಟ್ಟಾರೆ ಆಸ್ತಿ ಮೌಲ್ಯ 47 ಕೋಟಿ ರೂಪಾಯಿ.

    ಖ್ಯಾತಿ-ವಿಖ್ಯಾತಿ: ಜಿಲ್ಲಾ ಡೆಪ್ಯೂಟಿ ಅಟಾರ್ನಿ, ಜಿಲ್ಲಾ ಅಟಾರ್ನಿ ಹುದ್ದೆಯಿಂದ ಕ್ಯಾಲಿಫೋನಿರ್ಯಾ ರಾಜ್ಯದ
    ಅಟಾರ್ನಿ ಜನರಲ್ ಆಗಿ ಹಂತ ಹಂತವಾಗಿ ಬಡ್ತಿ. 2016ರಲ್ಲಿ ಸೆನೆಟ್​ಗೆ ಮೊದಲ ಬಾರಿಗೆ ಆಯ್ಕೆ. ಸೆನೆಟ್ ಪ್ರವೇಶಿಸಿದ ಮೊದಲ ದಕ್ಷಿಣ ಏಷ್ಯಾದ ಮೂಲದವರೆಂಬ ಹೆಗ್ಗಳಿಕೆ. ಉಪಾಧ್ಯಕ್ಷ ಹುದ್ದೆಗೆ ಅಭ್ಯರ್ಥಿಯಾಗಿ ನಿಯೋಜನೆಯಾದ ಮೂರನೇ ಮಹಿಳೆ ಮತ್ತು ಏಷ್ಯಾ ಮೂಲದ ಮೊದಲ ವ್ಯಕ್ತಿ.

    ಹವ್ಯಾಸ: ಜನಾಂಗೀಯ ತಾರತಮ್ಯದ ವಿರುದಟಛಿ ಹೋರಾಟ, ಲಿಂಗಸಮಾನತೆಗೆ ಹೋರಾಟ, ಕೌಟುಂಬಿಕ ಮೌಲ್ಯಕ್ಕೆ ಆದ್ಯತೆ, ಭಾರತದ ಆಹಾರ ವಿಶೇಷವಾಗಿ ಇಡ್ಲಿ ಇಷ್ಟ.

    ಅಮೆರಿಕ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹೀಗಿರುತ್ತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts