More

    FACT CHECK: ಮೀಸೆ, ಗಡ್ಡ ಇದ್ದವರಿಗೆ ಕರೊನಾ ಬಹುಬೇಗ ಬರುತ್ತಾ? ಮುಖದ ಕೂದಲು ಕ್ಷೌರ ಮಾಡಿಸಿಕೊಳ್ಳಲು ಸಿಡಿಸಿ ಹೇಳಿದೆಯಾ?

    ನವದೆಹಲಿ: ಕರೊನಾ ಎಂಬ ಮಹಾಮಾರಿ ಜಗತ್ತಿನಾದ್ಯಂತ 30,000ಕ್ಕೂ ಅಧಿಕ ಜನರನ್ನು ಬಲಿಪಡೆದಿದೆ. ಕರೊನಾ ಹರಡಲು ಶುರುವಾಗಿ ಮೂರು ತಿಂಗಳ ಮೇಲಾದರೂ ಅದಕ್ಕೆ ಯಾವುದೇ ಲಸಿಕೆ ಕಂಡುಹಿಡಿಯಲು ಸಾಧ್ಯವಾಗಿಲ್ಲ.

    ಹೀಗಿರುವಾಗ ಸಾಮಾಜಿಕ ಜಾಲತಾಣಗಳಂತೂ ಕರೊನಾ ಬಗ್ಗೆಯೇ ತುಂಬಿ ಹೋಗಿವೆ. ಕರೊನಾ ಬಾರದಂತೆ ತಡೆಯಲು ಹೀಗೆ ಮಾಡಿ, ಹಾಗೆ ಮಾಡಿ ಎಂಬ ಪೊಳ್ಳು ಸಲಹೆಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.

    ಈ ಮಧ್ಯೆ ವೈರಲ್​ ಆದ ಒಂದು ಪೋಸ್ಟ್​ನಲ್ಲಿ, ಪುರುಷರು ತಮ್ಮ ಮುಖದಲ್ಲಿರುವ ಗಡ್ಡ, ಮೀಸೆಗಳನ್ನು ಬೋಳಿಸಿಕೊಂಡರೆ ಕರೊನಾ ಬರುವುದನ್ನು ತಡೆಯಬಹುದು ಎಂದು ಅಮೆರಿಕದ ರೋಗ‌ ನಿಯಂತ್ರಣಾ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಹೇಳಿವೆ ಎಂದು ಬರೆಯಲಾಗಿತ್ತು. ಹಾಗೆ ಈ ಬಗ್ಗೆ ಸುದ್ದಿ ಮಾಧ್ಯಮವೊಂದರಲ್ಲಿ ಪ್ರಕಟವಾದ ಆರ್ಟಿಕಲ್ ನ ಲಿಂಕ್ ನ್ನೂ ಅಳವಡಿಸಲಾಗಿತ್ತು. ಜತೆಗೆ ಗ್ರಾಫಿಕ್​ ಫೋಟೋವನ್ನೂ ಪೋಸ್ಟ್​ ಮಾಡಲಾಗಿತ್ತು.

    ಮುಖದ ಕೂದಲುಗಳನ್ನು ಸದಾ ಕ್ಷೌರ ಮಾಡಿಟ್ಟುಕೊಂಡರೆ ಕರೊನಾ ಬರುವ ಸಾಧ್ಯತೆ ತುಂಬ ಕಡಿಮೆ ಎಂದು ವೈರಲ್ ಆದ ಪೋಸ್ಟ್​ನ ಸತ್ಯಾಸತ್ಯತೆಯನ್ನು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಂ ಬಯಲು ಮಾಡಿದೆ. ಅದೊಂದು ಸುಳ್ಳು. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ(ಸಿಡಿಸಿ)ಗಳು ಅಂತಹ ಮಾಹಿತಿಯನ್ನು ನೀಡಿಯೇ ಇಲ್ಲ ಎಂಬುದು ಬೆಳಕಿಗೆ ಬಂದಿದೆ.

    ಇನ್ನು ಇದಕ್ಕೆ ಅಟ್ಯಾಚ್​ ಮಾಡಿರುವ ಗ್ರಾಫಿಕ್ ಫೋಟೋ ಈಗಿನದ್ದು ಅಲ್ಲವೇ ಅಲ್ಲ. 2017ರಲ್ಲಿ ಸಿಡಿಸಿ ಬಿಡುಗಡೆ ಮಾಡಿದ್ದು. ಪುರುಷರು ತಮ್ಮ ಗಡ್ಡಗಳನ್ನು ವಿವಿಧ ಸ್ಟೈಲ್​ಗಳಲ್ಲಿ ಟ್ರಿಮ್ ಮಾಡುವುದು ಸಹಜ. ಹೀಗೆ ಸ್ಟೈಲ್​ ಮಾಡುವಾಗ ಯಾವ ತರಹದ ಗಡ್ಡಗಳಿದ್ದರೆ ಮಾಸ್ಕ್​ ಮುಖಕ್ಕೆ ಸರಿಯಾಗಿ ಹೊಂದುತ್ತದೆ ಎಂಬುದನ್ನು ವಿವರಿಸುವ ಸಲುವಾಗಿ ಸಿಡಿಸಿ ಈ ಗ್ರಾಫಿಕ್​ ಬಿಡುಗಡೆ ಮಾಡಿತ್ತು. ಇದೀಗ ಅದೇ ಗ್ರಾಫಿಕ್​ ಫೋಟೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಕೊರೊನಾ ನಿಯಂತ್ರಣಕ್ಕೆ ದಾರಿ ಎಂದು ಬಳಸಿಕೊಳ್ಳಲಾಗಿತ್ತು.

    ಕರೊನಾ ವೈರಸ್​ ನಿಯಂತ್ರಣ ಮಾಡಲು ಮುಖದ ಕೂದಲುಗಳ ಕೌರ ಮಾಡಿಕೊಳ್ಳುವ ಸಲಹೆ ನೀಡಿ ನಾವು ಯಾವುದೇ ಗ್ರಾಫಿಕ್ಸ್​ ಬಿಡುಗಡೆ ಮಾಡಿಲ್ಲ ಎಂದು ಕಾಯಿಲೆ ನಿಯಂತ್ರಣಾ ಮತ್ತು ತಡೆಗಟ್ಟುವಿಕೆ ಕೇಂದ್ರವೇ ಸ್ಪಷ್ಟಪಡಿಸಿದೆ. ಆರೋಗ್ಯಕರ ಉಸಿರಾಟಕ್ಕೆ ಸಂಬಂಧಪಟ್ಟಂತೆ ಸಿಡಿಸಿಯೇ ಈ ಗ್ರಾಫಿಕ್​ನ್ನು ಬಿಡುಗಡೆ ಮಾಡಿದ್ದರೂ ಅದು ಕರೊನಾಕ್ಕೆ ಸಂಬಂಧಪಟ್ಟಿದ್ದಲ್ಲ ಎಂಬುದು ಸಾಬೀತಾಗಿದೆ. (ಏಜೆನ್ಸೀಸ್​)

    FACT CHECK: ಮೀಸೆ, ಗಡ್ಡ ಇದ್ದವರಿಗೆ ಕರೊನಾ ಬಹುಬೇಗ ಬರುತ್ತಾ? ಮುಖದ ಕೂದಲು ಕ್ಷೌರ ಮಾಡಿಸಿಕೊಳ್ಳಲು ಸಿಡಿಸಿ ಹೇಳಿದೆಯಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts