More

    ಕಾಬುಲ್​ ಆತ್ಮಾಹುತಿ ದಾಳಿಗೆ ಪ್ರತೀಕಾರ: ಐಎಸ್​-ಕೆ ಮೇಲೆ ಡ್ರೋನ್​ ದಾಳಿ ಮಾಡಿದ ಅಮೆರಿಕ

    ಕಾಬುಲ್​: ಅಫ್ಘಾನಿಸ್ತಾನ ರಾಜಧಾನಿ ಕಾಬುಲ್​ ವಿಮಾನ ನಿಲ್ದಾಣದಲ್ಲಿ ಗುರುವಾರ ರಾತ್ರಿ ಅಮೆರಿಕ ಸೇನೆಯನ್ನು ಗುರಿಯಾಗಿರಿಸಿಕೊಂಡು ನಡೆದ ಉಗ್ರರ ದಾಳಿಯ ಬೆನ್ನಲ್ಲೇ ಯುಎಸ್​ ಅಧ್ಯಕ್ಷ ಜೋ ಬೈಡೆನ್​ ಪ್ರತೀಕಾರದ ಮಾತನಾಗಳನ್ನಾಡಿದ್ದರು. ಇದರ ಬೆನ್ನಲ್ಲೇ ಅಮೆರಿಕ ಸೇನಾ ಪಡೆ ಕಾಬುಲ್​ ಏರ್​ಪೋರ್ಟ್​ ದಾಳಿಯ ಹೊಣೆ ಹೊತ್ತಿರುವ ಐಎಸ್​-ಕೆ ಉಗ್ರರನ್ನು ಗುರಿಯಾಗಿಸಿಕೊಂಡು ಡ್ರೋನ್​ ದಾಳಿ ನಡೆಸಿದೆ.

    ಅಫ್ಘಾನಿಸ್ತಾನದ ನಂಗರ್ಹಾರ್ ಪ್ರಾಂತ್ಯದಲ್ಲಿ ಡ್ರೋನ್​ ದಾಳಿ ನಡೆದಿದೆ. ತಾವು ಹಾಕಿಕೊಂಡಿದ್ದ ಗುರಿಯನ್ನು ಕೊಂದಿರುವ ಆರಂಭಿಕ ಸೂಚನೆ ಇದೆ ಎಂದು ಕೇಂದ್ರ ಕಮ್ಯಾಂಡ್​ ಕ್ಯಾಪ್ಟನ್​ ಬಿಲ್​ ಅರ್ಬನ್​ ತಿಳಿಸಿದ್ದಾರೆ. ಯಾವುದೇ ನಾಗರಿಕ ಸಾವು-ನೋವುಗಳು ಸಂಭವಿಸಿಲ್ಲ ಅಂತಲೂ ಹೇಳಿದ್ದಾರೆ. ಕಾಬುಲ್​ ದಾಳಿ ಹಿಂದಿರುವ ಐಎಸ್​-ಕೆ ಸದಸ್ಯ ದಾಳಿಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

    ಕಾಬುಲ್​ ಏರ್​ಪೋರ್ಟ್​ನಲ್ಲಿ ಗುರುವಾರ ರಾತ್ರಿ ಐಎಸ್​-ಕೆ ಸಂಘಟನೆ ನಡೆಸಿದಿ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ ಅಮೆರಿಕ ಸೇನೆಯ 13 ಯೋಧರು ಹಾಗೂ ಸುಮಾರು 72 ನಾಗರಿಕರು ದಾರುಣವಾಗಿ ಮೃತಪಟ್ಟಿದ್ದಾರೆ. ಹೀಗಿದ್ದರೂ ಸಾಕಷ್ಟು ಭದ್ರತೆಯೊಂದಿಗೆ ಅಮೆರಿಕ ಮತ್ತೆ ತನ್ನ ಸ್ಥಳಾಂತರ ಕಾರ್ಯವನ್ನು ಮುಂದುವರಿಸಿದೆ.

    ದಾಳಿಯ ಬೆನ್ನಲ್ಲೇ ನಿನ್ನೆ ವೈಟ್​ಹೌಸ್​ನಲ್ಲಿ ಮಾತನಾಡಿದ್ದ ಜೋ ಬೈಡೆನ್​, ಈ ದಾಳಿಯನ್ನು ಮಾಡಿದವರಿಗೆ ಹಾಗೂ ಅಮೆರಿಕಕ್ಕೆ ಹಾನಿ ಬಯಸುವ ಯಾರಿಗಾದರೂ ಇದು ತಿಳಿದಿರಲಿ, ನಾವು ನಿಮ್ಮನ್ನು ಕ್ಷಮಿಸುವುದಿಲ್ಲ. ನಾವು ಎಂದಿಗೂ ಮರೆಯುವುದಿಲ್ಲ. ನಿಮ್ಮನ್ನು ಹುಡುಕಿ ಬೇಟೆಯಾಡುತ್ತೇವೆ. ನೀವು ಮಾಡಿದ ಕೃತ್ಯಕ್ಕೆ ನೀವು ಬೆಲೆತೆರೆಲೇಬೇಕು ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೆ, ಉಗ್ರರ ಮೇಲಿನ ದಾಳಿಗೆ ಯೋಜನೆ ರೂಪಿಸುವಂತೆ ತಮ್ಮ ಸೇನೆಗೆ ಆದೇಶವನ್ನು ನೀಡಿದ್ದರು. (ಏಜೆನ್ಸೀಸ್​)

    ಕಾಬುಲ್ ದಾಳಿಗೆ ಪಾಕಿಸ್ತಾನ್ ನಂಟು: ಫಿದಾಯೀನ್​ಗಳ ಚಿತ್ರ ಬಿಡುಗಡೆ ಮಾಡಿದ ಐಸಿಸ್-ಕೆ; ದಾಳಿಕೋರರು ಪಾಕ್ ಉಗ್ರರು

    ಕಾಬುಲ್​ ಏರ್​ಪೋರ್ಟ್​ನಲ್ಲಿ ಬಾಂಬ್​ ಸ್ಫೋಟ: ಭಯಾನಕವಾಗಿದೆ ದಾಳಿಯ ಹೊಣೆ ಹೊತ್ತ ಐಎಸ್​-ಕೆ ಹಿನ್ನೆಲೆ ಮತ್ತು ಗುರಿ!

    ಕಾಬುಲ್​ ಏರ್​ಪೋರ್ಟ್​ನಲ್ಲಿ ಆತ್ಮಾಹುತಿ ಬಾಂಬ್​ ದಾಳಿ: ಐಸಿಸ್​-ಕೆ ವಿರುದ್ಧ ಗುಡುಗಿದ ಜೋ ಬೈಡೆನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts