More

    ಕರೊನಾ ವೈರಸ್​ನಿಂದ ಬದುಕುಳಿದವನ ಮನೆಗೆ ಬಂತು 8. 5 ಕೋಟಿ ರೂ. ಆಸ್ಪತ್ರೆ ಬಿಲ್!​

    ವಾಷಿಂಗ್ಟನ್​: ಮಹಾಮಾರಿ ಕರೊನಾ ವೈರಸ್​ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಸೋಂಕಿಗೆ ಒಳಗಾದ ರೋಗಿಗಳಿಗೆ ಅನೇಕ ರಾಷ್ಟ್ರದ ಸರ್ಕಾರಗಳು ಉಚಿತವಾಗಿ ಚಿಕಿತ್ಸೆ ನೀಡುತ್ತಿರುವಾಗ ಅಮೆರಿಕದಲ್ಲಿ ಕರೊನಾದಿಂದ ಬದುಕುಳಿದ ವ್ಯಕ್ತಿಗೆ ಬಂದ ಆಸ್ಪತ್ರೆ ಬಿಲ್​ ನೋಡಿ ಅವರು ಕಂಗಾಲಾಗಿದ್ದಾರೆ.

    ಬರೋಬ್ಬರಿ 1.1 ಮಿಲಿಯನ್ (8.5 ಕೋಟಿ ರೂ.)​ ಡಾಲರ್​ ಆಸ್ಪತ್ರೆ ಬಿಲ್​ ಬಂದಿರುವುದಾಗಿ ಸ್ಥಳೀಯ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.

    ಮೈಕೆಲ್​ ಫ್ಲೋರ್​ ಎಂಬುವರು ವಾಷಿಂಗ್ಟನ್​ನ ವಾಯುವ್ಯ ನಗರದಲ್ಲಿರುವ ಆಸ್ಪತ್ರೆಗೆ ಮಾರ್ಚ್​ 4 ರಂದು ದಾಖಲಾಗಿ ಸುಮಾರು 62 ದಿನಗಳ ಕಾಲ ಆಸ್ಪತ್ರೆಯಲ್ಲೇ ಉಳಿದಿದ್ದರು. ಒಂದು ಹಂತದಲ್ಲಿ ಸಾಯುವ ಮಟ್ಟಕ್ಕೂ ಹೋಗಿ ನರ್ಸ್​​ ಸಹಾಯದಿಂದ ಹೆಂಡತಿ ಹಾಗೂ ಮಕ್ಕಳಿಗೆ ಫೋನ್​ ಮಾಡಿ ಗುಡ್​ಬೈ ಸಹ ಹೇಳಿದ್ದರಂತೆ.

    ಅದೃಷ್ಟವಶಾತ್​ ಗುಣಮುಖರಾದ ಅವರು ಮೇ 5ರಂದು ಡಿಸ್ಚಾರ್ಜ್​ ಆಗಿ ಕುಟಂಬದ ಜತೆ ಆರಾಮಾಗಿದ್ದರು. ಇದೇ ಸಮಯದಲ್ಲಿ ಆಸ್ಪತ್ರೆಯು 181 ಪುಟಗಳ ಬಿಲ್​ ಅನ್ನು ಫ್ಲೋರ್​ ಮನೆಗೆ ಕಳಹಿಸಿದೆ. ಬರೋಬ್ಬರಿ $1,122,501.04 (8.5 ಕೋಟಿ ರೂ.) ಮೊತ್ತದ ಬಿಲ್​ ಆಗಿದ್ದು, ಅದನ್ನು ನೋಡಿ ಫ್ಲೋರ್​ ಶಾಕ್​ ಆಗಿದ್ದಾರೆ.

    ಪ್ರತಿದಿನವೊಂದಕ್ಕೆ ಐಸಿಯು ಚಾರ್ಜ್ 9,736 (7,39,517 ರೂ.) ಡಾಲರ್​, ಸುಮಾರು 42 ದಿನಗಳವರೆಗೆ ಐಸಿಯು ಅನ್ನು ಒಬ್ಬರಿಗಾಗಿಯೇ ಮೀಸಲಿಟ್ಟು, ಬರಡಾಗುವಂತೆ ಮಾಡಿದ್ದಕ್ಕೆ 409,000 (3,10,66,413 ರೂ.) ಡಾಲರ್​, 29 ದಿನಗಳವರೆಗೆ ವೆಂಟಿಲೇಟರ್​ ಬಳಸಿದ್ದಕ್ಕೆ 82,000 (62,28,474 ರೂ.) ಡಾಲರ್​ ಹಾಗೂ ಜೀವದ ಅಪಾಯಾದಲ್ಲಿದ್ದಾಗ ಎರಡು ದಿನ ಸೂಕ್ಷ್ಮ ನಿಗಾದಲ್ಲಿರಿಸಿದ್ದಕ್ಕೆ $100,000 (75,95,700 ರೂ.) ಬಿಲ್​ ಮಾಡಲಾಗಿದೆ.

    ಸಮಾಧಾನಕರ ಸಂಗತಿಯೆಂದರೆ ಸರ್ಕಾರದ ಯೋಜನೆಯಡಿ ಫ್ಲೋರ್​ ಜೀವ ವಿಮಾ ಯೋಜನೆ ಮಾಡಿಸಿದ್ದರಿಂದ ತನ್ನ ಕೈನಿಂದ ಕೊಡಬೇಕಾದ ಸಂಕಷ್ಟ ತಪ್ಪಿದಂತಾಗಿದೆ. ಆದರೆ, ಅಮೆರಿಕದಲ್ಲಿ ಆರೋಗ್ಯ ವೆಚ್ಚ ಎಷ್ಟು ದುಬಾರಿಯಾಗಿದೆ ಎಂಬುದು ಇದರಿಂದಲೇ ತಿಳಿಯುತ್ತದೆ. (ಏಜೆನ್ಸೀಸ್​)

    VIDEO| ಶೂ ಧರಿಸಿಕೊಂಡು ಶಿವನ ವಿಗ್ರಹ ಪೀಠದ ಮೇಲೆ ಟಿಕ್​ಟಾಕ್​ ಮಾಡಿದ ನಾಲ್ವರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts