More

    ಇಷ್ಟೆಲ್ಲ ಹಾರಾಡುವ ಬದಲು, ನೀನೇ ಬಾಲಿವುಡ್​ ಡ್ರಗ್ಗಿಗಳ ಪಟ್ಟಿ ಕೊಡು; ಕಂಗನಾಗೆ ಊರ್ಮಿಳಾ ಚಾಲೆಂಜ್

    ಸುಶಾಂತ್​ ಸಿಂಗ್​ ರಜಪೂತ್​ ನಿಧನರಾಗಿ ಈ ಮೂರು ತಿಂಗಳಲ್ಲಿ ಕಂಗನಾ, ಹಲವು ವಿಷಯಗಳ ಕುರಿತು ಸಾಕಷ್ಟು ಮಾತನಾಡಿದ್ದಾರೆ. ಕೆಲವು ವಿಷಯಗಳ ಬಗ್ಗೆ ಅವರಾಡಿರುವ ಮಾತುಗಳು ಸಾಕಷ್ಟು ಚರ್ಚೆಯಾಗಿದೆ. ಅದರಲ್ಲೂ ಬಾಲಿವುಡ್​ನಲ್ಲಿ ಡ್ರಗ್ಸ್​ ಬಳಕೆ ಬಗ್ಗೆ ದೊಡ್ಡ ಮಟ್ಟದಲ್ಲಿ ಪರ-ವಿರೋಧ ಚರ್ಚೆಗಳು ಕೇಳಿ ಬರುತ್ತಿದ್ದು, ಈಗ ಊರ್ಮಿಳಾ ಕೂಡಾ ತಮ್ಮ ಧ್ವನಿಗೂಡಿಸಿದ್ದಾರೆ. ಕಂಗನಾ ಹೇಳಿಕೆಗಳಿಗೆ ಸರಿಯಾಗಿ ಟಾಂಗ್​ ಕೊಟ್ಟಿದ್ದಾರೆ.

    ಇದನ್ನೂ ಓದಿ: ಊರಿಗೆ ಹೋಗಿ ಡ್ರಗ್ಸ್​ ವಿರುದ್ಧ ಸಮರ ಸಾರಲಿ … ಕಂಗನಾಗೆ ಊರ್ಮಿಳಾ ಸವಾಲ್​

    ‘ಬಾಲಿವುಡ್​ನಲ್ಲಿ ಡ್ರಗ್​ ಮಾಫಿಯಾ ನಡೆಯುತ್ತಿದೆ ಎಂದು ಹೇಳಿಕೊಳ್ಳುವ ಕಂಗನಾ, ಅಷ್ಟೊಂದು ತಾಕತ್ತಿದ್ದರೆ, ಡ್ರಗ್​ ವ್ಯಸನಿಗಳ ಹೆಸರು ನೀಡಲಿ ನೋಡೋಣ. ಹಾಗೆ ಪಟ್ಟಿ ಬಿಡುಗಡೆ ಮಾಡಿದ ಮರುಕ್ಷಣವೇ ನಾನೇ ಆಕೆಯ ಬೆನ್ನಿಗೆ ನಿಲ್ಲುತ್ತೇನೆ. ಬರೀ ಹೇಳಿಕೆ ಶೂರರೆನಿಸಿಕೊಳ್ಳಬಾರದು. ಸೂಕ್ತ ಸಾಕ್ಷ್ಯ ನೀಡಿ ಮಾತನಾಡಿ’ ಎಂದಿದ್ದಾರೆ.

    ‘ಬಾಲಿವುಡ್​ ಸಿನಿಮಾ ಮಂದಿ ಜತೆಗೆ ಸುಖಾ ಸುಮ್ಮನೆ ಸಮಸ್ಯೆಯನ್ನು ತಂದಿಟ್ಟುಕೊಳ್ಳುತ್ತಿರುವ ಕಂಗನಾ, ತಮಗೆ ಗೊತ್ತಿರುವವರ ಹೆಸರುಗಳನ್ನು ಹೇಳಲಿ. ಡ್ರಗ್​ ಮಾಫಿಯಾಗೆ ಸಂಬಂಧಿಸಿದಂತೆ ವಿಚಾರಣೆ ಶುರುವಾಗಿ 20 ದಿನಗಳ ಮೇಲಾಯಿತು. ಎಲ್ಲಿವೇ ಹೆಸರುಗಳು?’ ಎಂದು ಚಾಲೆಂಜ್​ ಮಾಡಿದ್ದಾರೆ.

    ಇದನ್ನೂ ಓದಿ: ಡ್ರಗ್​ ಕೇಸ್​; ದೆಹಲಿ ಹೈಕೋರ್ಟ್ ಮೊರೆ ಹೋದ ರಾಕುಲ್​ ಪ್ರೀತ್​ ಸಿಂಗ್

    ಇತ್ತೀಚೆಗೆ ಸಂದರ್ಶನವೊಂದರಲ್ಲಿ ‘ಬರೀ ಬಾಲಿವುಡ್​ ಅಷ್ಟೇ ಅಲ್ಲ, ಇಡೀ ದೇಶವೇ ಡ್ರಗ್ಸ್​ ಸಮಸ್ಯೆಯನ್ನು ಎದುರಿಸುತ್ತಿದೆ. ಕಂಗನಾ ಮೂಲತಃ ಹಿಮಾಚಲ ಪ್ರದೇಶದವರು. ಡ್ರಗ್ಸ್​ನ ಮೂಲ ಇರುವುದು ಅಲ್ಲೇ ಮತ್ತು ಅಲ್ಲಿಂದಲೇ ಅವರು ಡ್ರಗ್ಸ್​ ವಿರುದ್ಧ ಸಮರಸಾರಲಿ. ಅಲ್ಲಿ ಅವರಿಗೆ ವೈ ಸೆಕ್ಯುರಿಟಿ ನೀಡಲಾಗಿದೆ. ಹಾಗಿರುವಾಗ ಅವರ್ಯಾಕೆ ಪೊಲೀಸರಿಗೆ ಈ ಜಾಲದ ಬಗ್ಗೆ ಹೇಳುತ್ತಿಲ್ಲ’ ಎಂದೂ ಈ ಹಿಂದೆ ಊರ್ಮಿಳಾ ಪ್ರಶ್ನಿಸಿದ್ದರು. (ಏಜೆನ್ಸೀಸ್​)

    ಡಾ. ವಿಷ್ಣುವರ್ಧನ್​ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಅಂಚೆ ಲಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts