More

    ದೇಹದ ಸಮತೋಲನ, ಏಕಾಗ್ರತೆ ಹೆಚ್ಚಿಸುವ ಊರ್ಧ್ವ ಕುಕ್ಕುಟಾಸನ; ಇದೊಂದು ಚ್ಯಾಲೆಂಜಿಂಗ್ ಪೋಸ್!

    ಊರ್ಧ್ವ ಕುಕ್ಕುಟಾಸನ ಅಥವಾ ಮೇಲ್ಮುಖ ರೂಸ್ಟರ್​ ಭಂಗಿಯು ಯೋಗ ಸ್ಪರ್ಧೆಗಳಲ್ಲಿ ಬಳಸುವ ಸುಧಾರಿತ ಎ ಶ್ರೇಣಿಯ ಭಂಗಿಯಾಗಿದೆ. ಚ್ಯಾಲೆಂಜಿಂಗ್​ ಭಂಗಿಯಾಗಿರುವ ಈ ಯೋಗಾಸನದಲ್ಲಿ ಸ್ಥಿರತೆ, ಸಮತೋಲನ ಮತ್ತು ಗಮನವನ್ನು ಹೇಗೆ ಪಡೆಯಬಹುದು ಎಂದು ತಿಳಿಯಬಹುದಾಗಿದೆ. ಈ ಆಸನದ ಮಾಹಿತಿಯು ಪ್ರಾಚೀನ ಯೋಗ ಗ್ರಂಥಗಳಾದ ಹಠಯೋಗ ಪ್ರದೀಪಿಕಾ, ಘೇರಂಡ ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ.

    ಉಪಯೋಗಗಳು: ಈ ಭಂಗಿ ಅಭ್ಯಾಸ ಮಾಡಿದಾಗ ದೇಹಕ್ಕೆ ನಮ್ಯತೆ ಮತ್ತು ಶಕ್ತಿ ಲಭಿಸುತ್ತದೆ, ಏಕಾಗ್ರತೆ ಹೆಚ್ಚುತ್ತದೆ. ತೋಳು ಮತ್ತು ಭುಜಗಳಲ್ಲಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಪಶ್ಚಿಮೋತ್ಥಾನಾಸನದ ಪ್ರಯೋಜನಗಳು ಈ ಆಸನದಲ್ಲಿ ಬೇಗನೇ ಲಭಿಸುತ್ತದೆ. ದಿನಾಲೂ ಈ ಆಸನ ಮಾಡುವುದರಿಂದ ದೇಹವನ್ನು ಬೇಕಾದ ಹಾಗೆ ಬಾಗಿಸಲು ಸುಲಭವಾಗುತ್ತದೆ. ಎದೆಯ ಭಾಗಕ್ಕೆ ಮೃದುವಾದ ವ್ಯಾಯಾಮ ನೀಡಿ, ಎದೆಯನ್ನು ಅಗಲಗೊಳಿಸಲು ಸಹಾಯ ಮಾಡುತ್ತದೆ. ಮೂಲಾಧಾರ ಚಕ್ರವನ್ನು ಸಕ್ರಿಯಗೊಳಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ.

    ಇದನ್ನೂ ಓದಿ: ಒತ್ತಡ ನಿಯಂತ್ರಣಕ್ಕೆ ‘ವಜ್ರಾಸನದಲ್ಲಿ ಪರ್ವತಾಸನ’ ಮಾಡಿ!

    ಅಭ್ಯಾಸ ಕ್ರಮ: ಇದು ಒಂದು ಸಂಕೀರ್ಣವಾದ ಭಂಗಿಯಾಗಿದ್ದು, ಈ ಆಸನವನ್ನು ಚೆನ್ನಾಗಿ ನಿರ್ವಹಿಸಲು ತೋಳಿನ ಬಲ ಬೇಕಾಗುತ್ತದೆ. ಶಕ್ತಿ ಮತ್ತು ಸ್ಥಿರತೆಯನ್ನು ನಿರ್ಮಿಸಲು ತೋಳಿನ ಮೇಲೆ ದೇಹದ ತೂಕವನ್ನೆಲ್ಲಾ ಕೇಂದ್ರೀಕರಿಸಲಾಗುತ್ತದೆ.

    ಮೊದಲು ಪದ್ಮಾಸನ ಮಾಡಿ ಕುಳಿತುಕೊಳ್ಳಬೇಕು. ಪದ್ಮಾಸನದ ಸ್ಥಿತಿಯಲ್ಲಿದ್ದು ಕೈಗಳನ್ನು ನೆಲದಲ್ಲಿ ಇಟ್ಟು ಮೊಣಕಾಲಿನ ಮೇಲೆ ದೇಹವನ್ನು ನಿಲ್ಲಿಸುವುದು. ಒಮ್ಮೆ ಉಸಿರನ್ನು ತೆಗೆದುಕೊಂಡು ಮತ್ತೆ ಉಸಿರನ್ನು ಬಿಡುತ್ತಾ ಎರಡು ಕೈಗಳ ಆಧಾರದಿಂದ ದೇಹವನ್ನು (ಪದ್ಮಾಸನ ಸ್ಥಿತಿಯಲ್ಲಿ) ಮೇಲಕ್ಕೆತ್ತಬೇಕು. ನೋಟವನ್ನು ನಿರ್ದಿಷ್ಟ ಬಿಂದುವಿನ ಮೇಲೆ ಕೇಂದ್ರೀಕರಿಸಿ, ತೋಳುಗಳ ಆಧಾರದ ಮೇಲಿರಬೇಕು. ಈ ಭಂಗಿಯಲ್ಲಿ ಸಹಜ ಉಸಿರಾಟ ನಡೆಸುತ್ತಿರಬೇಕು. ಅನಂತರ ನಿಧಾನವಾಗಿ ದೇಹವನ್ನು ಕೆಳಗಿಳಿಸಿ ವಿಶ್ರಾಂತಿ ಪಡೆಯಬೇಕು.

    ಕ್ಲಿಷ್ಟಕರವಾದ ಈ ಯೋಗಾಸನವನ್ನು ಗುರುಮುಖೇನ ಸಹಾಯ ಪಡೆದುಕೊಂಡು ಅಭ್ಯಾಸ ಮಾಡಬೇಕು. ಸೊಂಟ ನೋವು, ಶ್ವಾಸಕೋಶ, ಹೃದಯದ ತೊಂದರೆಗಳು ಮತ್ತು ಗ್ಯಾಸ್ಟ್ರಿಕ್ ಹುಣ್ಣು ಇದ್ದವರು ಈ ಆಸನವನ್ನು ಮಾಡಬಾರದು.

    ಮುಟ್ಟಿನ ದೋಷಗಳ ನಿವಾರಣೆಗೆ ಈ ಸರಳ ಯೋಗಾಸನ ಮಾಡಿ!

    ಕರ್ನಾಟಕ ಟಿಇಟಿ ಫಲಿತಾಂಶ ಬಿಡುಗಡೆ: 45,074 ಅಭ್ಯರ್ಥಿಗಳಿಗೆ ಅರ್ಹತೆ

    ಬೆನ್ನುಮೂಳೆ ಬಲಗೊಳಿಸಲು, ಹೊಟ್ಟೆಯ ಬೊಜ್ಜು ಕರಗಿಸಲು ಈ ಆಸನ ಮಾಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts