More

    VIDEO| ಖ್ಯಾತ ಬಹುಭಾಷ ನಟಿ, ಶಾಸಕಿ ರೋಜಾ ಮೇಲೆ ಸ್ವಪಕ್ಷೀಯದವರೇ ಹಲ್ಲೆಗೆ ಯತ್ನಿಸಿದ ವಿಡಿಯೋ ವೈರಲ್​

    ಹೈದರಾಬಾದ್​: ಖ್ಯಾತ ಬಹುಭಾಷ ನಟಿ ಹಾಗೂ ಶಾಸಕಿ ರೋಜಾ ಅವರ ಮೇಲೆ ಸ್ವಪಕ್ಷೀಯದವರೇ ಹಲ್ಲೆಗೆ ಯತ್ನ ನಡೆಸಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    90 ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ನಟಿ ರೋಜಾ ಪ್ರಮುಖ ನಟಿಯಾಗಿದ್ದರು. ತಮಿಳು ಮಾತ್ರವಲ್ಲದೇ ತೆಲುಗು, ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸುವ ಮೂಲಕ ಬಹುಭಾಷ ನಟಿಯಾಗಿ ಮಿಂಚಿದ್ದರು. ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾದ ಬಳಿಕ 1999ರಲ್ಲಿ ಆಂಧ್ರ ಪ್ರದೇಶದ ರಾಜಕೀಯಕ್ಕೆ ಪ್ರವೇಶ ನೀಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಗನ್​ ಮೋಹನ್​​ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷದಿಂದ ನಗರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು.

    ವೈಎಸ್ಆರ್ ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸುತ್ತಿದ್ದ ಅವರನ್ನು ಇತ್ತೀಚೆಗೆ ಆಂಧ್ರಪ್ರದೇಶ ರಾಜ್ಯದ ಕೈಗಾರಿಕಾ ಮೂಲ ಸೌಕರ್ಯ ನಿಗಮದ ಅಧ್ಯಕ್ಷೆಯಾಗಿಯೂ ನೇಮಕ ಮಾಡಲಾಗಿದೆ. ಹೀಗಾಗಿ ಚಿತ್ತೂರ್​ ಜಿಲ್ಲೆಯ ಕೆ.ವಿ.ಪುರಂನಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮ ಪಂಚಾಯಿತಿ ಕಚೇರಿ ಉದ್ಘಾಟನೆಗೆ ತೆರಳಿದ್ದರು. ಇದೇ ಸಮಯದಲ್ಲಿ ವೈಎಸ್ಆರ್ ಕಾಂಗ್ರೆಸ್​ನ ವಲಯ ಒಕ್ಕೂಟ ಸಮಿತಿಯ ಸದಸ್ಯ ಅಮ್ಮೂಲ್​ ಎಂಬಾತ 200 ಬೆಂಬಲಿಗರೊಂದಿಗೆ ರೋಜಾ ಅವರ ಕಾರನ್ನು ತಡೆದು, ದಾಳಿ ಮಾಡಲು ಯತ್ನಿಸಿದ್ದಾನೆ. ಆದರೆ, ಸ್ಥಳದಲ್ಲಿದ್ದ ಪೊಲೀಸರು ರೋಜಾರನ್ನು ರಕ್ಷಿಸಿ, ಅಲ್ಲಿಂದ ಸುರಕ್ಷಿಸಿತವಾಗಿ ವಾಪಸ್​ ಕಳುಹಿಸಿದ್ದಾರೆ.

    ರೋಜಾ ಮತ್ತು ಅಮ್ಮೂಲ್​ ನಡುವಿನ ಭಿನ್ನಾಭಿಪ್ರಾಯವೇ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ. ಆದರೆ, ಸ್ವಪಕ್ಷಿಯರಿಂದಲ್ಲೆ ಹಲ್ಲೆ ಯತ್ನ ವಿಚಾರವನ್ನು ರೋಜಾ ನಿರಾಕರಿಸಿದ್ದಾರೆ. ಆದರೆ, ಇದು ಪ್ರತಿಪಕ್ಷ ತೆಲುಗು ದೇಶಂ ಪಕ್ಷದವರ ಕೈವಾಡ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts