More

    ಯುಪಿಎಸ್​​ಸಿ: ಇಂಜಿನಿಯಯರಿಂಗ್ ಸೇವೆ ಹಾಗೂ ಜಿಯೋ ಸೈಂಟಿಸ್ಟ್ ಪರೀಕ್ಷಾ ದಿನಾಂಕ ಪ್ರಕಟ

    ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಎಂಜಿನಿಯರಿಂಗ್ ಸೇವೆಗಳ ಮುಖ್ಯ ಪರೀಕ್ಷೆ ಮತ್ತು ಜಿಯೋ ಸೈಂಟಿಸ್ಟ್ ಮುಖ್ಯ ಪರೀಕ್ಷೆಗೆ ಹೊಸ ದಿನಾಂಕ ಬಿಡುಗಡೆ ಮಾಡಿದೆ.
    ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಯುಪಿಎಸ್ಸಿ ಎಂಜಿನಿಯರಿಂಗ್ ಸೇವೆಗಳ ಮುಖ್ಯ ಪರೀಕ್ಷೆ ಅಕ್ಟೋಬರ್ 18 ರಂದು ಮತ್ತು ಕಂಬೈನ್ಡ್ ಜಿಯೋ ಸೈಂಟಿಸ್ಟ್ ಮುಖ್ಯ ಪರೀಕ್ಷೆ ಅಕ್ಟೋಬರ್ 17 ಮತ್ತು 18 ರಂದು ನಡೆಯಲಿದೆ.
    ಈ ಮೊದಲು ನಿರ್ಧರಿಸಿದಂತೆ ಯುಪಿಎಸ್ಸಿ ಜಿಯೋ ಸೈಂಟಿಸ್ಟ್ ಮುಖ್ಯ ಪರೀಕ್ಷೆಯನ್ನು ಜೂನ್ 27 ಕ್ಕೆ ಮತ್ತು ಎಂಜಿನಿಯರಿಂಗ್ ಮುಖ್ಯ ಪರೀಕ್ಷೆಯನ್ನು ಜೂನ್ 28 ರಂದು ನಡೆಸಬೇಕಾಗಿತ್ತು. ಕೋವಿಡ್ -19 ದಿಂದಾಗಿ ಪರೀಕ್ಷೆಗಳನ್ನು ನಂತರ ಕ್ರಮವಾಗಿ ಆಗಸ್ಟ್ 8 ಮತ್ತು 9 ಕ್ಕೆ ಮುಂದೂಡಲಾಗಿತ್ತು. ನಂತರ ಎರಡೂ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ದಿನಾಂಕಗಳನ್ನು ನಂತರ ಸೂಚಿಸುವುದಾಗಿ ಯುಪಿಎಸ್‌ಸಿ ಜುಲೈ 2 ರಂದು ತಿಳಿಸಿತ್ತು. ‘

    ಇದನ್ನೂ ಓದಿ:  ಸಾಲ ಭಾದೆ ತಾಳದೆ ತಂದೆ ಅಪ್ರಾಪ್ತೆಯರ ಮದುವೆ ಮಾಡಲು ಮುಂದಾಗಿದ್ದ : ಮದ್ವೆ ನಡೀತಾ?

    ಪರಿಷ್ಕೃತ ಯುಪಿಎಸ್‌ಸಿ 2020 ರ ವೇಳಾಪಟ್ಟಿ ಪ್ರಕಾರ, 2020 ರ ಕಂಬೈನ್ಡ್ ಮೆಡಿಕಲ್ ಸರ್ವೀಸಸ್ ಪರೀಕ್ಷೆಯ ಅಧಿಸೂಚನೆಯನ್ನು ಜುಲೈ 22 ರಂದು ಬಿಡುಗಡೆ ಮಾಡಲಾಗುವುದು ಮತ್ತು ಅದರ ಪರೀಕ್ಷೆಯು ಅಕ್ಟೋಬರ್ 22 ರಿಂದ ಪ್ರಾರಂಭವಾಗಲಿದೆ.
    ಇದಲ್ಲದೆ, ಎನ್‌ಡಿಎ, ಎನ್‌ಎ ಪರೀಕ್ಷೆಗಳು ಸೆಪ್ಟೆಂಬರ್ 6 ರಂದು ನಡೆಯಲಿದೆ. ಈ ಬಾರಿ ಎನ್‌ಡಿಎ, ಎನ್‌ಎ (I) ಮತ್ತು (II) ಪರೀಕ್ಷೆಗಳಿಗೆ ಸಾಮಾನ್ಯ ಪರೀಕ್ಷೆ ನಡೆಯಲಿದೆ.
    ಅಲ್ಲದೆ, ಯುಪಿಎಸ್ಸಿ ಸಿವಿಲ್ ಸರ್ವೀಸಸ್ 2019 ರ ಉಳಿದ ಅಭ್ಯರ್ಥಿಗಳಿಗೆ ವ್ಯಕ್ತಿತ್ವ ಪರೀಕ್ಷೆ ನಾಳೆ ಜುಲೈ 20 ರಿಂದ ಪುನರಾರಂಭಗೊಳ್ಳಲಿದೆ.

    ರೆಮ್ಡೆಸಿವಿರ್: ಕಾಳದಂಧೆಯಲ್ಲಿದ್ದವರು ಅಂದರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts