More

    ಜೀವನ್ಮುಕ್ತಿ ಹೊಂದಲು ಪುರಾಣ ಪಠಣ ಮಾಡಿ

    ಉಪ್ಪಿನಬೆಟಗೇರಿ: ಮನುಷ್ಯ ಕಾಮ, ಕ್ರೋಧ, ಮೋಹ, ಮದ, ಮಾತ್ಸರ್ಯದಂತಹ ಅವಗುಣಗಳಿಂದ ದೂರವಿರಬೇಕು. ಅವುಗಳಿಂದ ದೂರವಿದ್ದು, ಜೀವನ್ಮುಕ್ತಿ ಹೊಂದಲು ನವರಾತ್ರಿಯಲ್ಲಿ ದೇವಿ ಪುರಾಣ ಪಠಣ ಮಾಡಬೇಕು ಎಂದು ಕರಡಿಗುಡ್ಡ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅರ್ಚಕ ಶಿವಕುಮಾರ ಗುಡ್ಡದಮಠ ಸ್ವಾಮೀಜಿ ಹೇಳಿದರು.
    ಧಾರವಾಡ ಎಪಿಎಂಸಿ ಮಾಜಿ ಅಧ್ಯಕ್ಷ, ಕರಡಿಗುಡ್ಡ ಗ್ರಾಮದ ಬಸವರಾಜ ಹೊಸೂರ ಅವರ ನಿವಾಸದಲ್ಲಿ ನವರಾತ್ರಿ ಅಂಗವಾಗಿ ಏರ್ಪಡಿಸಿರುವ ಶ್ರೀದೇವಿ ಪುರಾಣ ಪ್ರವಚದಲ್ಲಿ ಅವರು ಮಾತನಾಡಿದರು.
    ಜಗನ್ಮಾತೆಯಾದ ದೇವಿಯು ಬೇಡಿದ್ದನ್ನು ಕೊಡುವ ಕಲ್ಪವೃಕ್ಷವಿದ್ದಂತೆ, ಭಕ್ತಿಯಿಂದ ಪೂಜಿಸಿದರೆ ಭಕ್ತರ ಕಷ್ಟಗಳನ್ನು ಕ್ಷಣಮಾತ್ರದಲ್ಲಿ ದೇವಿ ನಿವಾರಿಸುತ್ತಾಳೆ. ಪುಣ್ಯದ ಫಲದಿಂದ ಮಾನವ ಜನ್ಮ ಸಿಕ್ಕಿದ್ದು, ಅರಿತು ನಡೆದರೆ ಮಾತ್ರ ಬಾಳು ಬಂಗಾರವಾಗುತತದೆ. ದಸರಾ ಹಬ್ಬದಲ್ಲಿ ಪ್ರತಿಯೊಬ್ಬರೂ ದೇವಿಯ ಪುರಾಣವನ್ನು ಆಲಿಸಬೇಕು ಎಂದರು.
    ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ ಹೊಸೂರ ಮಾತನಾಡಿ, ಕಳೆದ 78 ವರ್ಷಗಳ ಹಿಂದೆ ನಮ್ಮ ಹಿರಿಯರು ನವರಾತ್ರಿಯಲ್ಲಿ ಪುರಾಣ ಪ್ರವಚನ ನಡೆಸಿಕೊಂಡು ಬಂದಿದ್ದಾರೆ. ಅದನ್ನು ನಾವು ಮುಂದುವರಿಸಿಕೊಂಡು ಬಂದಿದ್ದೇವೆ. ದುರ್ಗಾ ಮಾತೆಯ ಪ್ರತಿಷ್ಠಾಪನೆ ದಿನದಿಂದ ನಿತ್ಯ ಪುರಾಣದ ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಅ. 25ರಂದು ಉತ್ತರ ಪೂಜೆ ಬಳಿಕ ಪುರಾಣ ಮಂಗಲವಾಗಲಿದೆ. ಅಂದು ಗ್ರಾಮಸ್ಥರಿಗೆ ಸಾಮೂಹಿಕ ಅನ್ನ ಪ್ರಸಾದ ನೆರವೇರಿಸಲಾಗುವುದು ಎಂದರು.
    ಹಾರ್ಮೋನಿಯಂ ಮಾಸ್ತರ ಮಡಿವಾಳಪ್ಪ ಛಬ್ಬಿ ಹಾಗೂ ಸುಭಾಸ ಚಂದರಗಿ ಅವರಿಂದ ತಬಲಾ ಸೇವೆ ನಡೆಯುತ್ತಿದೆ. ಸ್ಥಳೀಯರು ಹಾಗೂ ಸುತ್ತಲಿನ ಹಳ್ಳಿಗಳ ಭಕ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts