More

    10 ಕರೊನಾ ರೋಗಿಗಳಲ್ಲಿ ಒಬ್ಬರಿಗೆ ಕಳೆದು ಹೋದದ್ದು ತಿಂಗಳಾದ್ರೂ ಮರಳಿ ಬಾರದು!

    ರೋಮ್​: ಹತ್ತು ಕರೊನಾ ರೋಗಿಗಳಲ್ಲಿ ಒಬ್ಬರಿಗೆ ರುಚಿ ಮತ್ತು ವಾಸನೆ ಗ್ರಹಿಕೆ ತಿಂಗಳೊಳಗೆ ಮರಳಿ ಬರುವುದಿಲ್ಲ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

    ನಿರಂತರ ಕೆಮ್ಮು ಮತ್ತು ಜ್ವರದ ಜತೆಗೆ ರುಚಿ ಮತ್ತು ವಾಸನೆ ಗ್ರಹಿಕೆ ಕ್ಷೀಣಿಸುವುದು ಸಹ ಕರೊನಾ ರೋಗ ಲಕ್ಷಣಗಳಲ್ಲಿ ಒಂದು ಎಂದು ಹೇಳಲಾಗಿದೆ. ಇದರ ಮೇಲೆ ಅಧ್ಯಯನ ನಡೆಸಿದ ಸಣ್ಣ ಇಟಾಲಿಯನ್​ ಸಂಶೋಧಕರ ಗುಂಪೊಂದು, ಕರೊನಾ ಸೋಂಕಿಗೆ ಒಳಗಾದ ತಿಂಗಳ ನಂತರವೂ ರುಚಿ ಮತ್ತು ವಾಸನೆ ಗ್ರಹಿಸಲು ಹೋರಾಟ ನಡೆಸುತ್ತಿರುವುದಾಗಿ ಕಂಡುಕೊಂಡಿದ್ದಾರೆ.

    ಇದನ್ನೂ ಓದಿ: PHOTOS| ಮತ್ತಷ್ಟು ಮಾದಕ ಫೋಟೋಗಳನ್ನು ಹರಿಬಿಟ್ಟು ಟ್ರೋಲಿಗರಿಗೆ ಟಾಂಗ್​ ಕೊಟ್ರಾ ಚಿತ್ರಾಲ್​?

    ಅಧ್ಯಯನ ವರದಿಯು ಜೆಎಎಂಎ ಒಟೋಲರಿಂಗೋಲಜಿ ಹೆಡ್​ ಆ್ಯಂಡ್​ ನೆಕ್​ ಸರ್ಜರಿ ಜರ್ನಲ್​ನಲ್ಲಿ ಪ್ರಕಟವಾಗಿದೆ. ಸಂಶೋಧನೆಯಲ್ಲಿ 187 ಇಟಾಲಿಯನ್​ ಸೋಂಕಿತರು ಒಳಗೊಂಡಿದ್ದು, ಆಸ್ಪತ್ರೆಗೆ ದಾಖಲಿಸುವಷ್ಟು ಸೋಂಕಿತರು ಅನಾರೋಗ್ಯಕ್ಕೀಡಾಗಿರಲಿಲ್ಲ. ಒಂದು ತಿಂಗಳಿಂದ ಸೋಂಕಿಗೆ ಒಳಗಾದವರನ್ನು ಸಂಶೋಧನೆಯಲ್ಲಿ ತಮ್ಮ ವಾಸನೆ ಮತ್ತು ರುಚಿಯ ಗ್ರಹಿಕೆಯನ್ನು ಪ್ರಾಮಾಣೀಕರಿಸಲು ಹೇಳಲಾಯಿತು.

    ಇದರಲ್ಲಿ ಶೇ. 60 ರಷ್ಟು ಅಂದರೆ 113 ಮಂದಿಯಲ್ಲಿ ತಮ್ಮ ವಾಸನೆ ಮತ್ತು ರುಚಿಯ ಗ್ರಹಿಕೆಯಲ್ಲಿ ಬದಲಾವಣೆ ಕಂಡುಬಂದಿದೆ. ಇವರಲ್ಲಿ 55 ಮಂದಿ ಸಂಪೂರ್ಣ ಗುಣಮುಖರಾಗಿರುವುದಾಗಿ ತಿಳಿಸಿದ್ದಾರೆ. 46 ಮಂದಿ ತಮ್ಮ ರೋಗ ಲಕ್ಷಣಗಳಲ್ಲಿ ಸುಧಾರಣೆ ಕಾಣುತ್ತಿರುವುದಾಗಿ ಹೇಳಿದ್ದಾರೆ. ಉಳಿದ 12 ಮಂದಿ ತಮ್ಮ ರೋಗ ಲಕ್ಷಣಗಳು ತುಂಬಾ ಕೆಟ್ಟದಾಗಿ ಬದಲಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಕೇವಲ ಅರ್ಧದಷ್ಟು ಜನರು ಮಾತ್ರ ತಮ್ಮ ರುಚಿ ಮತ್ತು ವಾಸನೆಯನ್ನು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

    ಇದನ್ನೂ ಓದಿ: VIDEO| ಕಾಡುಗಳ್ಳ ವೀರಪ್ಪನ್​ ಊರಿನಲ್ಲಿ ಕರೊನಾ ಓಡಿಸಲು ಅಖಾಡಕ್ಕಿಳಿದ ದೇವರು: ಅಚ್ಚರಿ ವಿಡಿಯೋ…!

    ಇನ್ನುಳಿದ ಶೇ. 40 ಮಂದಿ ತಮ್ಮ ರೋಗ ಲಕ್ಷಣಗಳಲ್ಲಿ ಸುಧಾರಣೆ ಕಂಡಿದ್ದರೆ, 10 ರಷ್ಟು ಮಂದಿ ಸುಧಾರಣೆಯನ್ನೇ ಕಂಡಿಲ್ಲ. ಗಂಭೀರವಾದ ರೋಗ ಲಕ್ಷಣಗಳು ಕಂಡುಬಂದಿರುವ ಜನರ ಪರಿಸ್ಥಿತಿ ಸುಧಾರಿಸಲು ಬಹಳಷ್ಟು ಸಮಯ ತೆಗೆದುಕೊಳ್ಳಲಿದೆ ಎಂದು ಪಡೋವಾ ಯೂನಿವರ್ಸಿಟಿಯ ಡಾ. ಪಾವೊಲೊ ಬಾಸ್ಕೊಲೊ ರಿಜೋ ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್​)

    ಬಸ್​ ನಿಲ್ದಾಣದಲ್ಲೇ ಕರೊನಾ ಶಂಕಿತನ ಶವ ಬಿಟ್ಟು ಹೋದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts