More

    ಆಕ್ಸಿಜನ್ ಪೂರೈಕೆ ಮೇಲ್ವಿಚಾರಣೆಗೆ ಲೈವ್ ಪೋರ್ಟಲ್ ಆರಂಭ

    ಲಖನೌ : ರಾಜ್ಯದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಮೆಡಿಕಲ್ ಆಕ್ಸಿಜನ್​ನ ಬೇಡಿಕೆಯನ್ನು ಸಕಾಲಿಕವಾಗಿ ಪೂರೈಸುವ ಪ್ರಯತ್ನದಲ್ಲಿ ಉತ್ತರ ಪ್ರದೇಶ ಸರ್ಕಾರವು, ಡಿಜಿಟಲ್ ಪ್ಲಾಟ್‌ಫಾರ್ಮ್ ಒಂದನ್ನು ಪ್ರಾರಂಭಿಸಿದೆ. ಆಮ್ಲಜನಕ ಪೂರೈಕೆ ವ್ಯವಸ್ಥೆಯ ನೇರ ಮೇಲ್ವಿಚಾರಣೆ ಮಾಡಲಿರುವ ಈ ವೆಬ್​ ಪೋರ್ಟಲ್​ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶುಕ್ರವಾರ ಚಾಲನೆ ನೀಡಿದ್ದಾರೆ.

    ಈ ಮೇ​ಲ್ವಿಚಾರಣಾ ವ್ಯವಸ್ಥೆಯಲ್ಲಿ ವಿವಿಧ ಜಿಲ್ಲೆಗಳಲ್ಲಿನ ಆಸ್ಪತ್ರೆಗಳಿಂದ ಆಮ್ಲಜನಕದ ಬೇಡಿಕೆ, ವಾಹನಗಳಲ್ಲಿ ಆಮ್ಲಜನಕದ ಲೋಡಿಂಗ್​, ಹೆದ್ದಾರಿಗಳಲ್ಲಿ ಚಲಿಸುವ ವಾಹನಗಳ ಲೈವ್​ ಲೊಕೇಶನ್ ಮತ್ತು ಆಸ್ಪತ್ರೆಗಳಿಗೆ ಪೂರೈಕೆ ಮತ್ತು ಅದರ ಬಳಕೆಯ ಕುರಿತಾಗಿ ಲೈವ್ ಮಾಹಿತಿ ಲಭ್ಯವಿರುತ್ತದೆ. ಈ ವೆಬ್ ಪೋರ್ಟಲ್ ಲಿಂಕ್ಅನ್ನು ಆಮ್ಲಜನಕ ಪೂರೈಕೆ ಸರಪಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ನೌಕರರು ಬಳಸಬಹುದು. ಅಗತ್ಯಕ್ಕೆ ಅನುಗುಣವಾಗಿ ಆಸ್ಪತ್ರೆಗಳು ಬೇಡಿಕೆಯ ವಿವರಗಳನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬಹುದು ಎನ್ನಲಾಗಿದೆ.

    ಇದನ್ನೂ ಓದಿ: ಆಂಬ್ಯುಲೆನ್ಸ್ ಮಾದರಿಯಲ್ಲಿ ಆಕ್ಸಿಜನ್ ಟ್ಯಾಂಕರ್​​ಗಳ ಸುಗಮ ಸಂಚಾರ; ಆಮ್ಲಜನಕ ಸ್ಥಾವರ ಸ್ಥಾಪನೆ

    ರೋಡಿಕ್ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್ ಈ ವೇದಿಕೆಯನ್ನು ರಚಿಸಿದ್ದು, ಆಹಾರ ಮತ್ತು ಔಷಧ ಇಲಾಖೆ ವೈದ್ಯಕೀಯ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗೃಹ ಇಲಾಖೆ ಮತ್ತು ಸಾರಿಗೆ ಇಲಾಖೆಗಳೆಲ್ಲ ಸಹಯೋಗದೊಂದಿಗೆ ಕಾರ್ಯನಿರ್ವಹಿಸಲಿವೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಕೆ.ಅವಸ್ಥಿ ತಿಳಿಸಿದ್ದಾರೆ. (ಏಜೆನ್ಸೀಸ್)

    48ನೇ ಸಿಜೆಐ ಆಗಿ ನ್ಯಾಯಮೂರ್ತಿ ಎನ್​.ವಿ.ರಮಣ ಪ್ರಮಾಣ ವಚನ ಸ್ವೀಕಾರ

    ವೈದ್ಯರ ಸೇವಾ ಅವಧಿ ವಿಸ್ತರಣೆ ; ಆಕ್ಸಿಜನ್ ಪ್ಲ್ಯಾಂಟ್ ಆಮದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts