More

    ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ಉ.ಪ್ರ ಮನವಿ

    ಲಖನೌ: ಸಿಎಎ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿ ಧ್ವಂಸಗೊಳಿಸಿದವರ ಚಿತ್ರ ಸಮೇತ ಹಾಕಲಾದ ಫ್ಲೆಕ್ಸ್ ಗಳನ್ನು ತೆರವುಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಉತ್ತರಪ್ರದೇಶ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಮತ್ತು ಅನಿರುಧ್ ಬೋಸ್​ರನ್ನು ಒಳಗೊಂಡ ಪೀಠ ಗುರುವಾರ ವಿಚಾರಣೆ ನಡೆಸಲಿದೆ.

    ಸಿಎಎ ವಿರೋಧಿಸಿ ಕಳೆದ ಡಿ.19ರಂದು ಉತ್ತರಪ್ರದೇಶದ ವಿವಿಧೆಡೆ ಸಾರ್ವಜನಿಕ ಆಸ್ತಿ ಧ್ವಂಸಗೊಳಿಸಿದ್ದ ಸುಮಾರು 53 ಆರೋಪಿಗಳ ಫೋಟೋ ಮತ್ತು ಮಾಹಿತಿ ಇರುವ ಫ್ಲೆಕ್ಸ್​ಗಳನ್ನು ಲಖನೌ ಜಿಲ್ಲಾಡಳಿತ ನಗರದಾದ್ಯಂತ ಹಾಕಿತ್ತು. ಆದರೆ ಇವುಗಳನ್ನು ತೆರವು ಮಾಡುವಂತೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿತ್ತು. ಈ ಕ್ರಮ ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಅತಿಕ್ರಮಣ ಎಂದು ಹೇಳಿತ್ತು.

    ದೊಡ್ಡ ಮರ ಬಿದ್ದಾಗ ಭೂಮಿ ನಡುಗುತ್ತದೆ ಎಂದು ನಿಮ್ಮಂತೆ ಹೇಳಲಿಲ್ಲ: ಹಳೇ ಘಟನೆ ಕೆದಕಿ ಕಾಂಗ್ರೆಸ್​ಗೆ ಅಮಿತ್​ ಷಾ ತಿರುಗೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts