More

    ಲಾಕ್​ಡೌನ್​ ಸೆಕ್ಸ್​: ಆರ್​ಟಿಐನಲ್ಲಿ ಬಹಿರಂಗವಾಯ್ತು ಆತಂಕಕಾರಿ ವಿಷಯ!

    ನವದೆಹಲಿ: ಕೋವಿಡ್​-19 ಹಾವಳಿಯಿಂದಾಗಿ ಹೇರಲಾಗಿದ್ದ ಲಾಕ್​ಡೌನ್​ ಸಂದರ್ಭದಲ್ಲಿನ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದಾಗಿ ಉಂಟಾಗಿರುವ ಮಾರಕ ಸಂಗತಿಯೊಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಯಿಂದಾಗಿ ಬಹಿರಂಗಗೊಂಡಿದೆ.

    ಮಧ್ಯಪ್ರದೇಶದ ಆರ್​ಟಿಐ ಕಾರ್ಯಕರ್ತ ಚಂದ್ರೇಶೇಖರ್​ ಗೌರ್ ಎಂಬಾತ ಕೇಳಿದ್ದ ಪ್ರಶ್ನೆಗೆ ಸಿಕ್ಕ ಉತ್ತರ ಭಯಂಕರ ವಿಷಯವೊಂದನ್ನು ಬೆಳಕಿಗೆ ತಂದಿದೆ. ಈತ ಸಲ್ಲಿಸಿದ್ದ ಅರ್ಜಿಗೆ ರಾಷ್ಟ್ರೀಯ ಏಯ್ಡ್ಸ್​ ತಡೆ ಸಂಸ್ಥೆ (ಎನ್​​ಎಸಿಒ-ನ್ಯಾಕೋ) ನೀಡಿರುವ ಉತ್ತರ ಚಿಂತೆಗೀಡು ಮಾಡುವಂತಿದೆ.

    ಲಾಕ್​ಡೌನ್​ ಅವಧಿಯಲ್ಲಿನ ಅಸುರಕ್ಷಿತ ಸಂಭೋಗದಿಂದಾಗಿ ದೇಶದಲ್ಲಿ 85 ಸಾವಿರಕ್ಕೂ ಅಧಿಕ ಮಂದಿ ಏಯ್ಡ್ಸ್​ ಸೋಂಕಿಗೆ ಒಳಗಾಗಿದ್ದಾರೆ ಎಂದು ನ್ಯಾಕೋ ಅಂಕಿ-ಅಂಶ ತಿಳಿಸಿದೆ. ಈ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 10,498, ಆಂಧ್ರಪ್ರದೇಶದಲ್ಲಿ 9521, ಕರ್ನಾಟಕದಲ್ಲಿ 8947, ಮಧ್ಯಪ್ರದೇಶದಲ್ಲಿ 3037 ಮತ್ತು ಪಶ್ಚಿಮ ಬಂಗಾಳದಲ್ಲಿ 2757 ಮಂದಿ ಏಯ್ಡ್ಸ್​ ಸೋಂಕಿಗೆ ಒಳಗಾಗಿದ್ದಾರೆ ಎಂದು ನ್ಯಾಕೋ ಹೇಳಿದೆ.

    ಕನ್ನಡ ಚಿತ್ರವನ್ನೇಕೆ ಹಿಂದಿಗೆ ಡಬ್ ಮಾಡ್ತೀರಿ ಎಂದ ಅಜಯ್​ ದೇವಗನ್​; ನಾನು ಕನ್ನಡದಲ್ಲೇ ಪ್ರತಿಕ್ರಿಯಿಸಿದ್ದಿದ್ರೆ ಹೇಗಿರ್ತಿತ್ತು ಎಂದ ಕಿಚ್ಚ..

    ಕರ್ನಾಟಕದಲ್ಲಿದೆ ‘ನರೇಂದ್ರ ಮೋದಿ ನಿಲಯ’!; ಇಲ್ಲಿದೆ ವಿವರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts