More

    ಅಗತ್ಯವಿಲ್ಲದಿದ್ದರೂ ಆನ್‌ಲೈನ್ ಶಿಕ್ಷಣ ನೀಡಿ ಶೋಷಿಸುವ ಶಾಲೆಗಳಿಗೆ ಸಚಿವರ ಎಚ್ಚರಿಕೆ

    ಬೆಂಗಳೂರು: ಕೆಲವು ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು ರಾಜ್ಯದಲ್ಲಿ ಅನಗತ್ಯವಾಗಿ ಆನ್‌ಲೈನ್ ಕ್ಲಾಸುಗಳನ್ನು ಆರಂಭಿಸಿ ವಿದ್ಯಾರ್ಥಿಗಳು, ಪಾಲಕರನ್ನು ಶೋಷಿಸುತ್ತಿವೆ. ಅಂಥ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

    ಕರೊನಾ ಹಾವಳಿ ವ್ಯಾಪಿಸಿರುವ ಪ್ರಸ್ತುತ ಸಂದರ್ಭದಲ್ಲಿ ಆನ್‌ಲೈನ್ ಮೂಲಕ ಶಿಕ್ಷಣದ ಅವಶ್ಯಕತೆ ಇಲ್ಲದಿದ್ದರೂ ಕೆಲವು ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆಗಳು ತಾವೂ ಆನ್‌ಲೈನ್ ಮೂಲಕ ಶಿಕ್ಷಣ ನೀಡುವುದಾಗಿ ಹೇಳುತ್ತಿವೆ.

    ಇದನ್ನೂ ಓದಿ: VIDEO| ಕನ್ನಡದಲ್ಲಿ ಟಿಕ್‌ಟಾಕ್ ಮಾಡಿದ ಹೈದರಾಬಾದ್ ಬ್ಯಾಡ್ಮಿಂಟನ್ ದಂಪತಿ!

    ಇನ್ನು ಕೆಲವು ಖಾಸಗಿ ಶಾಲೆಗಳವರು ವಿದ್ಯಾರ್ಥಿಗಳನ್ನು ಮತ್ತು ಪಾಲಕರನ್ನು ಶೋಷಿಸುತ್ತಿದ್ದಾರೆ. ಆನ್‌ಲೈನ್ ತರಗತಿಗಳನ್ನು ನಡೆಸಬೇಕಾದರೆ ಮಕ್ಕಳಿಗೆ ಅವರ ವಯೋಮಿತಿ ಮತ್ತು ತರಗತಿಯನ್ನು ಆಧರಿಸಿ ಅದರ ಅವಶ್ಯಕತೆ ಇದೆಯೋ ಇಲ್ಲವೋ ಎಂಬುದನ್ನು ಗಮನಿಸಬೇಕು. ಯಾವುದೇ ವೈಜ್ಞಾನಿಕ ಆಧಾರಗಳಿಲ್ಲದೆ ಮಕ್ಕಳ ಅನವಶ್ಯಕ ಶೋಷಣೆಗೆ ಮುಂದಾಗಬಾರದು ಎಂದು ತಾಕೀತು ಮಾಡಿದ್ದಾರೆ.

    ಯಾವುದೇ ಸಂದರ್ಭದಲ್ಲೂ ಮಕ್ಕಳ ಗಮನಸೆಳೆಯುವಾಗ ಹಾಗೂ ತಾಂತ್ರಿಕ ಪರಿಕರಗಳನ್ನು ಉಪಯೋಗಿಸುವಾಗ ಉಂಟಾಗಬಹುದಾದ ಆರೋಗ್ಯದ ಅಡ್ಡಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಆನ್‌ಲೈನ್ ಶಿಕ್ಷಣವನ್ನು ನೀಡಬೇಕಾಗುತ್ತದೆ. ದಿನವಿಡೀ ಆನ್‌ಲೈನ್ ತರಗತಿಗಳನ್ನು ನಡೆಸುವಂತಹ ಅವೈಜ್ಞಾನಿಕ ಕ್ರಮಗಳಿಗೆ ಯಾರೂ ಮುಂದಾಗಬಾರದು ಎಂದು ಎಚ್ಚರಿಸಿದ್ದಾರೆ.

    ಇಂತಹ ಕ್ರಮಗಳಿಗೆ ಕಡಿವಾಣ ಹಾಕಲು ಕೂಡಲೇ ಕಟ್ಟನಿಟ್ಟಾದ ಸುತ್ತೋಲೆ ಹೊರಡಿಸಬೇಕೆಂದೂ ಅವರು ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

    ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆ ಜೂನ್ 1ರಿಂದ; ಯಾವ ರಾಜ್ಯದಲ್ಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts