More

    ಅವಿವಾಹಿತರಿಗೊಂದು ಬ್ಯಾಡ್ ನ್ಯೂಸ್​; ಕೊವಿಡ್​-19ಗೆ ನೀವೇ ಟಾರ್ಗೆಟ್​

    ಜಗತ್ತನ್ನೇ ವ್ಯಾಪಿಸಿರುವ ಕೊವಿಡ್-19 ಸೋಂಕಿನ ಬಗ್ಗೆ ವಿವಿಧ ಆಯಾಮಗಳಲ್ಲಿ ಸಂಶೋಧನೆ, ಅಧ್ಯಯನಗಳು ನಡೆಯುತ್ತಿವೆ. ಕರೊನಾ ವೈರಸ್​ ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚಾಗಿ ಬಾಧಿಸುತ್ತದೆ ಎಂಬುದನ್ನು ಈ ಹಿಂದಿನ ಅಧ್ಯಯನವೊಂದು ಹೇಳಿದೆ.

    ಹಾಗೇ ಈಗೊಂದು ಅಧ್ಯಯನ ವರದಿ ಇನ್ನೊಂದಷ್ಟು ವಿಚಾರಗಳನ್ನು ಬಹಿರಂಗ ಪಡಿಸಿದ್ದು, ಅದರ ಅನ್ವಯ, ಕಡಿಮೆ ಆದಾಯ ಹೊಂದಿದ, ಕಡಿಮೆ ಶಿಕ್ಷಣ ಪಡೆದಿರುವ, ಮದುವೆಯಾಗದೆ ಇರುವವರು ಮತ್ತು ಕಡಿಮೆ ಅಥವಾ ಮಧ್ಯಮವಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜನಿಸಿರುವವರು ಕೊವಿಡ್​-19 ಸೋಂಕಿನಿಂದ ಸಾಯುವ ಅಪಾಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಿಲುಕುತ್ತಾರಂತೆ…ಈ ಬಗ್ಗೆ ಸಂಶೋಧಕರೇ ಎಚ್ಚರಿಸಿದ್ದಾರೆ.

    ಈ ಮೇಲಿನ ವಿಚಾರಗಳು ಪ್ರತ್ಯೇಕವಾಗಿ ಅಪಾಯ ತಂದೊಡ್ಡುತ್ತವೆ. ತಮ್ಮದೇ ಆದ ಸ್ವತಂತ್ರ ರೀತಿಯಲ್ಲಿ ಕೊವಿಡ್​-19 ಸಾವನ್ನು ತರುತ್ತವೆ ಎಂದು ಸ್ವೀಡನ್​ ಸ್ಟಾಕ್​ಹೋಮ್​ ಯೂನಿವರ್ಸಿಟಿಯ ಸಂಶೋಧಕ ಸ್ವೆನ್​ ಡ್ರೆಫಾಲ್​ ತಿಳಿಸಿದ್ದಾರೆ. ​ ಇದನ್ನೂ ಓದಿ: ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ ಸ್ವಿಯಾಟೆಕ್, ಚೊಚ್ಚಲ ಗ್ರಾಂಡ್ ಸ್ಲಾಂ ಸಂಭ್ರಮ

    ಸ್ವೀಡಿಶ್​ ನ್ಯಾಷನಲ್​ ಬೋರ್ಡ್ ಆಫ್​ ಹೆಲ್ತ್​ ಆ್ಯಂಡ್ ವೆಲ್​ಫೇರ್​ನಲ್ಲಿ ದಾಖಲಾದ ಕೊವಿಡ್​-19 ಸೋಂಕಿನಿಂದ ಮೃತಪಟ್ಟ, 20ರ ಮೇಲ್ಪಟ್ಟ ವಯಸ್ಸಿನವರು ಮತ್ತು ವೃದ್ಧರ ದತ್ತಾಂಶವನ್ನು ಆಧರಿಸಿ ಈ ಅಧ್ಯಯನ ಮಾಡಲಾಗಿತ್ತು. ಅದರ ವರದಿಯನ್ನು ನೇಚರ್​ ಕಮ್ಯೂನಿಕೇಶನ್ಸ್​ ಎಂಬ ಜರ್ನಲ್​​ನಲ್ಲಿ ಪ್ರಕಟಿಸಲಾಗಿದೆ.

    ಆದಾಯ ಕಡಿಮೆ ಇರುವವರು ಸರಿಯಾಗಿ ಚಿಕಿತ್ಸೆ ಪಡೆಯಲಾಗದೆ ಸಾಯುತ್ತಾರೆ. ಶಿಕ್ಷಣ ಮಟ್ಟ ಕಡಿಮೆ ಇರುವವರು ರೋಗಗಳ ಬಗ್ಗೆ, ಚಿಕಿತ್ಸೆಗಳ ಬಗ್ಗೆ ಸರಿಯಾದ ಅರಿವು ಇಲ್ಲದೆ..ಜೀವಕ್ಕೆ ಅಪಾಯ ತಂದುಕೊಳ್ಳಬಹುದು. ಇದು ಕೊವಿಡ್​-19ಗೆ ಅಷ್ಟೇ ಅಲ್ಲ, ಬೇರೆ ರೋಗಗಳಿಗೂ ಅನ್ವಯ ಆಗುತ್ತದೆ. ಇನ್ನು ಕಡಿಮೆ ಹಾಗೂ ಮಧ್ಯಮ ಅಭಿವೃದ್ಧಿ ರಾಷ್ಟ್ರಗಳಲ್ಲಿ ಎಲ್ಲ ಕಡೆಗಳಲ್ಲೂ ಆಸ್ಪತ್ರೆಗಳಲ್ಲಿ ಅಗತ್ಯ, ಅಭಿವೃದ್ಧಿ ಹೊಂದಿದ ವೈದ್ಯಕೀಯ ಉಪಕರಣ, ಸಾಧನಗಳು ಇರುವುದಿಲ್ಲ. ಬೆಡ್​ಗಳ ಕೊರತೆ ಉಂಟಾಗುತ್ತದೆ ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ​ ಇದನ್ನೂ ಓದಿ: ಟಿಟಿಡಿಯ ಹೊಸ ಎಕ್ಸಿಕ್ಯೂಟಿವ್ ಆಫೀಸರ್ ಆಗಿ ಅಧಿಕಾರ ಸ್ವೀಕರಿಸಿದ ಜವಾಹರ ರೆಡ್ಡಿ

    ಅವಿವಾಹಿತ ಯುವಕ, ಯುವತಿಯರು, ಮದುವೆಯನ್ನೇ ಆಗದೆ ಉಳಿದಿರುವವರು, ವಿಧವೆ, ವಿಧುರರು ಮತ್ತು ವಿಚ್ಛೇದಿತರು ಕರೊನಾದಿಂದ ಸಾಯುವ ಅಪಾಯ, ಮದುವೆಯಾದವರಿಗಿಂತ ಎರಡು ಪಟ್ಟು ಹೆಚ್ಚಾಗಿರುತ್ತದೆ. ಅದರಲ್ಲೂ ಪುರುಷರಿಗೇ ಹೆಚ್ಚು ಅಪಾಯ ಎಂದು ಹೇಳಲಾಗಿದೆ. ಇದಕ್ಕೆ ಅವರ ಜೀವನ ಶೈಲಿ ಕಾರಣ ಎಂದಿರುವ ಸಂಶೋಧಕರು, ಕೆಲವು ಜೀವಶಾಸ್ತ್ರಕ್ಕೆ ಸಂಬಂಧಿಸಿದ ಕಾರಣಗಳನ್ನೂ ವಿವರಿಸಿದ್ದಾರೆ.   (ಏಜೆನ್ಸೀಸ್​)

    ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡುತ್ತಿದ್ದಂತೆಯೇ ವೇದನೆಯೊಂದಿಗೆ ಕುಸಿದ ಚಿರಾಗ್​ ಪಾಸ್ವಾನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts