More

    ಅನ್‌ಲಾಕ್ 5 ಮಾರ್ಗಸೂಚಿ ಕಟ್ಟುನಿಟ್ಟು: ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.

    ಮಂಗಳೂರು: ಕೇಂದ್ರ ಸರ್ಕಾರದ ಅನ್‌ಲಾಕ್-5 ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ದ.ಕ ಜಿಲ್ಲೆಯಲ್ಲಿ ಕರೊನಾ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂದು ಸೂಚಿಸಿರುವ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಕೆಲ ಆದೇಶಗಳನ್ನು ಹೊರಡಿಸಿದ್ದಾರೆ.

    ಶಾಲೆಗಳು, ಕಾಲೇಜುಗಳ, ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ ಆರಂಭದ ಕುರಿತು ಅ.15ರ ನಂತರ ಹಂತ-ಹಂತವಾಗಿ ತೀರ್ಮಾನ ತೆಗೆದುಕೊಳ್ಳಬಹುದು. ಸಂಬಂಧಪಟ್ಟ ಶಾಲೆ, ಸಂಸ್ಥೆಯ ಆಡಳಿತ ಮಂಡಳಿಯೊಂದಿಗೆ ಸಮಾಲೋಚಿಸಿ, ಪರಿಸ್ಥಿತಿ ಅವಲೋಕಿಸಿ ಈ ಕುರಿತ ಅನುಮತಿ ನೀಡಲಾಗುವುದು. ಕಂಟೈನ್ಮೆಂಟ್ ವಲಯ ಹೊರತುಪಡಿಸಿದ ಸಿನಿಮಾ ಮಂದಿರ, ರಂಗಮಂದಿರ, ಮಲ್ಟಿಫ್ಲೆಕ್ಸೃ್ ಒಟ್ಟು ಆಸನ ಸಾಮರ್ಥ್ಯದ ಶೇ.50ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಿ ತೆರೆಯಲು ಅನುಮತಿ. ಅಂಗಡಿ ಮಾಲೀಕರು ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಹಾಗೂ ನಿಯಮ ಉಲ್ಲಂಘನೆಯಾಗದಂತೆ ಸಾಕಷ್ಟು ಮುಂಜಾಗ್ರತಾ ಕ್ರಮವಹಿಸಿಕೊಳ್ಳಬೇಕು.
    ಸಾರ್ವಜನಿಕರು ಮಾಸ್ಕ್ ಧರಿಸುವಂತೆ ಹಾಗೂ ಎಲ್ಲೆಂದರಲ್ಲಿ ಉಗುಳದಂತೆ ಆಯುಕ್ತರು, ಮನಪಾ, ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳ ಮೂಲಕ ಜನಜಾಗೃತಿ ಮೂಡಿಸಲಾಗುತ್ತದೆ. ಕಾನೂನು ಉಲ್ಲಂಘಿಸುವವರಿಗೆ ಅಗತ್ಯಾನುಸಾರ ಸರಿಯಾಗಿ ಮಾಸ್ಕ್ ಧರಿಸದಿದ್ದಲ್ಲಿ ಮನಪಾ ಪ್ರದೇಶಗಳಲ್ಲಿ 1 ಸಾವಿರ ರೂ, ಉಳಿದ ಪ್ರದೇಶಗಳಲ್ಲಿ 500 ರೂ.ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    245 ಮಂದಿಗೆ ಕರೊನಾ ಪಾಸಿಟಿವ್
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 6 ಮಂದಿ ಸಾವನ್ನಪ್ಪಿದವರೂ ಸೇರಿದಂತೆ 245 ಮಂದಿಗೆ ಕರೊನಾ ಪಾಸಿಟಿವ್ ವರದಿಯಾಗಿದೆ. ಕರೊನಾಗೆ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 574ಕ್ಕೆ ಏರಿಕೆಯಾಗಿದ್ದು, ಒಟ್ಟು ಪಾಸಿಟಿವ್ ಸಂಖ್ಯೆ 24,557 ತಲಪಿದೆ. ಜಿಲ್ಲೆಯಲ್ಲಿ ಸೋಮವಾರ 261 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ಸಕ್ರಿಯ ಪ್ರಕರಣಗಳು 5,579 ಆಗಿವೆ. ಕಾಸರಗೋಡು ಜಿಲ್ಲೆಯ 207 ಮಂದಿ ಸೇರಿ ಕೇರಳದಲ್ಲಿ ಸೋಮವಾರ 5042 ಮಂದಿಯಲ್ಲಿ ಕೋವಿಡ್-19 ರೋಗ ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಕೋವಿಡ್ ಬಾಧಿಸಿ 23 ಮಂದಿ ಮೃತಪಟ್ಟಿದ್ದಾರೆ.

    118 ಮಂದಿಗೆ ಸೋಂಕು
    ಉಡುಪಿ: ಜಿಲ್ಲೆಯಲ್ಲಿ ಸೋಮವಾರ 118 ಮಂದಿಗೆ ಕೋವಿಡ್ ಪಾಸಿಟಿವ್ ವರದಿಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 18,138ಕ್ಕೆ ಏರಿದೆ. ಸೋಮವಾರ 23 ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 2,237 ಸಕ್ರಿಯ ಪ್ರಕರಣಗಳಿವೆ. ವಿವಿಧ ಅನಾರೋಗ್ಯ ಕಾರಣಗಳಿಂದ ಮೂವರು ಮೃತಪಟ್ಟಿದ್ದು, ಎಲ್ಲರಿಗೂ ಸೋಂಕು ದೃಢಪಟ್ಟಿದೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts