More

    ಮಹಾರಾಜ ಕಾಲೇಜು ತಂಡ ಶುಭಾರಂಭ


    ಮೈಸೂರು:
    ಉತ್ತಮ ಪ್ರದರ್ಶನ ನೀಡಿದ ಮಹಾರಾಜ ಕಾಲೇಜು ತಂಡ 2021-22ನೇ ಸಾಲಿನ ಮೈಸೂರು ವಿಶ್ವವಿದ್ಯಾಲಯ ಚಾಮುಂಡಿ ವಲಯ ಅಂತರ ಕಾಲೇಜು ಫುಟ್‌ಬಾಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.


    ಮೈಸೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗ ಹಾಗೂ ಸೇಪಿಯೆಂಟ್ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್‌ನ ಫುಟ್‌ಬಾಲ್ ಮೈದಾನದಲ್ಲಿ ಸೋಮವಾರ ಆರಂಭಗೊಂಡ ಟೂರ್ನಿಯಲ್ಲಿ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜು ವಿರುದ್ಧ 4-0 ಗೋಲುಗಳಿಂದ ಭರ್ಜರಿ ಜಯ ಸಾಧಿಸಿತು.


    ಮತ್ತೊಂದು ಪಂದ್ಯದಲ್ಲಿ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು ತಂಡ 6-0 ಗೋಲುಗಳಿಂದ ಶೇಷಾದ್ರಿಪುರಂ ಕಾಲೇಜು ವಿರುದ್ಧ ಗೆಲುವು ಪಡೆಯಿತು. ಉಳಿದಂತೆ ಕುವೆಂಪುನಗರದ ಪ್ರಥಮ ದರ್ಜೆ ಕಾಲೇಜು, ವಿದ್ಯಾಶ್ರಮ ಪ್ರಥಮ ದರ್ಜೆ ಕಾಲೇಜು ವಿರುದ್ಧ ಹಾಗೂ ಸಿದ್ಧಾರ್ಥನಗರ ಪ್ರಥಮ ದರ್ಜೆ ಕಾಲೇಜು, ವಿದ್ಯಾ ವಿಕಾಸ್ ಪ್ರಥಮ ದರ್ಜೆ ಕಾಲೇಜು ವಿರುದ್ಧ ಜಯ ಸಾಧಿಸಿದವು.


    ಉದ್ಘಾಟನೆ: ಟೂರ್ನಿಗೆ ಮೈಸೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಚಾಲನೆ ನೀಡಿ, ಕ್ರೀಡಾಪಟುಗಳಿಗೆ ಶುಭ ಕೋರಿದರು. ಚಾಮುಂಡಿ ವಲಯ ಸಂಚಾಲಕ ಡಾ.ಎಚ್.ಎಸ್.ಕೃಷ್ಣಕುಮಾರ್, ಸೇಪಿಯೆಂಟ್ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಪ್ರಾಂಶುಪಾಲ ಡಾ.ಕೆ.ಗಣೇಶ್, ಉಪ ಪ್ರಾಂಶುಪಾಲ ಆರ್.ನರೇಂದ್ರ, ಎಂ.ಕ್ರಾಂತಿರಾಜ್ ಒಡೆಯರ್ ಇತರರಿದ್ದರು. ಟೂರ್ನಿಯಲ್ಲಿ 21 ತಂಡಗಳು ಭಾಗಿಯಾಗಿದ್ದು, ಜುಲೈ 20ರ ವರೆಗೆ ನಡೆಯಲಿದೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts