More

    ಕಾರಿನಲ್ಲಿ ಜೋಡಿಯ ಸೆಕ್ಸ್​; ವಿಡಿಯೋ ನೋಡಿದ ವಿಶ್ವಸಂಸ್ಥೆಗೆ ಶಾಕ್​…!

    ಟೆಲ್​ ಅವಿವ್​: ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ವಿಶ್ವ ಸಂಸ್ಥೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅದೊಂದು ತುಂಬ ಶಾಕಿಂಗ್​ ಹಾಗೂ ಮನಸನ್ನು ಕ್ಷೋಭೆಗೆ ದೂಡುವ ದೃಶ್ಯ ಎಂದು ಹೇಳಿದೆ.

    ಇಸ್ರೇಲ್​ನ ಟೆಲ್​ ಅವಿವ್​ನಲ್ಲಿ ವಿಶ್ವ ಸಂಸ್ಥೆಗೆ ಸೇರಿದ ಕಾರೊಂದರಲ್ಲಿ ಜೋಡಿಯೊಂದು ಸೆಕ್ಸ್​ ಮಾಡಿದ್ದೇ ಇದಕ್ಕೆ ಕಾರಣ. ವಿಶ್ವ ಸಂಸ್ಥೆಯ ಟ್ರುಸ್​ ಸುಪರ್​ವಿಸನ್​ ಆರ್ಗನೈಸೇಶನ್​ (UNTSO)ಗೆ ಸೇರಿದ ಕಾರಿನಲ್ಲಿ ಜೋಡಿಯೊಂದು ಮೈಮೇಲೆ ಪರಿವೇ ಇಲ್ಲದೆ ಸೆಕ್ಸ್​ನಲ್ಲಿ ತೊಡಗಿಕೊಂಡ ವಿಡಿಯೋ ವೈರಲ್​ ಆಗಿದೆ. ತಲೆಯ ಮೇಲೆ ಕೂದಲಿಲ್ಲದ ವ್ಯಕ್ತಿ ಡ್ರೈವಿಂಗ್​ ಸೀಟ್​ನಲ್ಲಿ ಕುಳಿತದ್ದರೆ, ಆತನ ಹಿಂದಿನ ಸೀಟಿನಲ್ಲಿ ಮತ್ತೋರ್ವ ವ್ಯಕ್ತಿ ಕುಳಿತಿದ್ದಾನೆ. ಈತನ ತೊಡೆಯ ಮೇಲೆ ಕೆಂಪು ಬಣ್ಣದ ಡ್ರೆಸ್​ ಹಾಕಿರುವ ಯುವತಿ ಕುಳಿತಿದ್ದಾಳೆ. ಇಬ್ಬರೂ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು ವಿಡಿಯೋದಲ್ಲಿ ಕಾಣಿಸುತ್ತಿದೆ. ಬಿಬಿಸಿ ವರದಿಯ ಪ್ರಕಾರ ಈ ವಿಡಿಯೋ ಚಿತ್ರೀಕರಣ ಆಗಿದ್ದು, ಇಸ್ರೇಲ್​​ನ ಟೆಲ್​ ಅವಿವ್​ ಸಿಟಿಯ ಸಮುದ್ರ ತೀರವೊಂದರ ಸಮೀಪ.

    ಇದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಗಳ ಗಮನಕ್ಕೂ ಬಂದಿದ್ದು, ನಮ್ಮ ಸಂಸ್ಥೆಯ ಕಾರು ಹೀಗೆ ದುರ್ಬಳಕೆ ಆಗುತ್ತಿರುವುದನ್ನು ನೋಡಿ ತುಂಬ ಬೇಸರವಾಯಿತು. ಈ ಬಗ್ಗೆ ಕೂಡಲೇ ತನಿಖೆ ಪ್ರಾರಂಭಿಸಲಾಗಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟಿಫನ್​ ಡುಜಾರಿಕ್​ ಅವರು ಟ್ವೀಟ್​ ಮಾಡಿದ್ದಾರೆ. 18 ಸೆಕೆಂಡ್​ಗಳ ವಿಡಿಯೋ ನೋಡಿ ತೀರ ಅಸಹ್ಯವೆನಿಸಿತು. ಇಂಥ ದುರ್ನಡತೆ ತೋರಿದವರ ವಿರುದ್ಧ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದಿದ್ದಾರೆ. ಇದನ್ನೂ ಓದಿ: ‘ಚೀನಾದ ಹೇಡಿತನದ ಆಕ್ರಮಣವನ್ನು ಸಾರ್ವಜನಿಕವಾಗಿ ಟೀಕಿಸಿ…’: ಪ್ರಧಾನಿಗೆ ಒತ್ತಾಯ

    ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು, ಕದನ ವಿರಾಮ ಒಪ್ಪಂದಗಳ ಮೇಲ್ವಿಚಾರಣೆಗಳನ್ನು ಮಾಡಲು 1948ರಲ್ಲಿ ವಿಶ್ವ ಸಂಸ್ಥೆಯ ಟ್ರುಸ್​ ಸುಪರ್​ವಿಸನ್​ ಆರ್ಗನೈಸೇಶನ್​ ಸ್ಥಾಪಿತವಾಗಿದೆ. ಇದರ ಪ್ರಧಾನ ಕಚೇರಿ ಜೆರುಸೆಲಂನಲ್ಲಿದೆ. (ಏಜೆನ್ಸೀಸ್​)

    ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುತ್ತಿದ್ದ ಬಾಲಕನಿಗೆ ವಕ್ಕರಿಸಿದ ಕರೊನಾ, 18 ವಿದ್ಯಾರ್ಥಿಗಳಿಗೆ ಸೋಂಕಿನ ಭೀತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts