More

    ಕೇಂದ್ರ ಸಚಿವರು ಎಂಬ ಕಾರಣಕ್ಕೆ ಕ್ವಾರಂಟೈನ್​ ಅಗತ್ಯವಿಲ್ಲವಂತೆ!

    ಬೆಂಗಳೂರು: ಅಂದಾಜು ಎರಡು ತಿಂಗಳ ಬಳಿಕ ದೇಶಿಯ ವಿಮಾನ ಸಂಚಾರ ಸೋಮವಾರದಿಂದ ಪುರಾರಂಭಗೊಂಡಿದೆ. ದೆಹಲಿಯಿಂದ ಬೆಂಗಳೂರುಗೆ ಹೊರಟ ಮೊದಲ ವಿಮಾನದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ ಬೆಂಗಳೂರಿಗೆ ಆಗಮಿಸಿದರು.

    ವಿಮಾನ ನಿಲ್ದಾಣದಲ್ಲಿ ಇಳಿಯುತ್ತಲೇ ನೇರವಾಗಿ ತಮ್ಮ ಅಧಿಕೃತ ಕಾರನ್ನು ಏರಿದ ಅವರು ಮನೆಗೆ ಹೋದರು. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ ತಾವು ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಔಷಧ ಖಾತೆಯ ಸಚಿವರಾಗಿದ್ದು, ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್​ ನಿಯಮದಿಂದ ವಿನಾಯ್ತಿ ಇರುವುದಾಗಿ ಹೇಳಿದರು.

    ಆದರೆ, ಕರ್ನಾಟಕ ಸರ್ಕಾರದ ನಿಯಮದ ಪ್ರಕಾರ ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ, ಗುಜರಾತ್​, ತಮಿಳುನಾಡು, ಮತ್ತು ಮಧ್ಯಪ್ರದೇಶದಂಥ ಕೆಂಪು ವಲಯದಿಂದ ಬರುವ ವಿಮಾನದ ಪ್ರಯಾಣಿಕರಿಗೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್​ ಕಡ್ಡಾಯವಾಗಿದೆ. ಈ ನಿಯಮ ಎಲ್ಲರಿಗೂ ಅನ್ವಯ ಎಂದು ಹೇಳಲಾಗಿತ್ತು. ಆದರೆ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮಾತ್ರ ಈ ನಿಯಮವನ್ನು ಉಲ್ಲಂಘಿಸಿ ಮನೆಗೆ ಹೋಗಿದ್ದರ ಬಗ್ಗೆ ಅಚ್ಚರಿ ಹಾಗೂ ಟೀಕೆ ವ್ಯಕ್ತವಾಗುತ್ತಿದೆ.

    ಒಂಟಿಯಾಗಿ ಹಾರಿ ತಾಯಿಯ ಮಡಿಲು ಸೇರಿದ ಐದು ವರ್ಷದ ಪುಟಾಣಿ- ಕಂದನ ಮುದ್ದಾಡಿದ ಅಮ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts