More

    ಒಕ್ಕೂಟ ಬೆಳವಣಿಗೆಗೆ ರೈತರ ಪರಿಶ್ರಮ ಕಾರಣ

    ಹಾರೋಹಳ್ಳಿ: ಬೆಂಗಳೂರು ಹಾಲು ಒಕ್ಕೂಟದ ಬೆಳವಣಿಗೆಗೆ ರೈತರು ಮತ್ತು ಹಾಲು ಉತ್ಪಾದಕರ ಪರಿಶ್ರಮ ಕಾರಣ ಎಂದು ಬಮುಲ್ ನಿರ್ದೇಶಕ ಎಚ್.ಎಸ್. ಹರೀಶ್ ಕುಮಾರ್ ತಿಳಿಸಿದರು. ಹಾರೋಹಳ್ಳಿಯ ಗ್ರಾಮಾಂತರ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಶನಿವಾರ ನಡೆದ ಬಮುಲ್ 2019-20ನೇ ಸಾಲಿನ ವಾರ್ಷಿಕ ಸಾಮಾನ್ಯಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಾಲು ಉತ್ಪಾದಕರ ಪರಿಶ್ರಮದ ಫಲವಾಗಿ ಶಿವನಹಳ್ಳಿ ಬಳಿ 750 ಕೋಟಿ ರೂ. ವೆಚ್ಚದಲ್ಲಿ 6 ಲಕ್ಷ ಲೀಟರ್ ಸಾಮರ್ಥ್ಯದ ಹಾಲಿನ ಪುಡಿ ಉತ್ಪಾದಿಸುವ ಮೆಗಾಡೇರಿ ಸ್ಥಾಪನೆಯಾಗಿದೆ ಎಂದರು. ಕರೊನಾದಿಂದಾಗಿ ನಷ್ಟದಲ್ಲಿದ್ದ ಬಮುಲ್ ಈಗ ಚೇತರಿಕೆ ಕಾಣುತ್ತಿದ್ದು, ಚೀಸ್, ಬೆಣ್ಣೆ ಸೇರಿದಂತೆ ಇತರ ಹಾಲಿನ ಉತ್ಪನ್ನಗಳು ಎಂದಿನಂತೆ ಮಾರಾಟವಾಗುತ್ತಿವೆ ಎಂದರು.

    ಗೋಮಾಳದಲ್ಲಿರುವ 30 ಎಕರೆ ಜಮೀನನ್ನು ನೀಡುವಂತೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್​ಗೆ ಮನವಿ ಮಾಡಲಾಗಿದ್ದು, ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಜಾಗದಲ್ಲಿ ರೈತರಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ಮಾಡಲಾಗುವುದು ಎಂದರು.

    ವಿಸ್ತರಣಾಧಿಕಾರಿಗಳಾದ ಪ್ರವೀಣ್ ಕುಮಾರ್, ಅಲ್ಲಾಸಾಬ್, ಗೋಪಾಲ್, ಮಾದೇಗೌಡ, ಅನಿತಾ, ಹಾಗೂ ಬೆಂಗಳೂರು ದಕ್ಷಿಣ ಮತ ಕ್ಷೇತ್ರದ ಡೇರಿಗಳ ಅಧ್ಯಕ್ಷರು ಭಾಗವಹಿಸಿದ್ದರು.

    ಅತ್ಯುತ್ತಮ ಸಾಧನೆಗೆ ಪ್ರಶಸ್ತಿ

    ಅತ್ಯುತ್ತಮ ಡೇರಿ – ಮೊದಲ ಬಹುಮಾನ – ಮರಳವಾಡಿ ಡೇರಿ, ಎರಡನೇ ಬಹುಮಾನ – ಹುನ್ನಾರ ದೊಡ್ಡಿ ಡೇರಿ ಹಾಗೂ ಹೆಬ್ಬಿದರ ಮೆಟ್ಟಿಲು ಡೇರಿ. ಅತ್ಯುತ್ತಮ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಪ್ರಶಸ್ತಿ ಗಿರಿಗೌಡನದೊಡ್ಡಿ ಡೇರಿ ಪಡೆಯಿತು. ಅತ್ಯುತ್ತಮ ಬಿಎಂಸಿ ಕೇಂದ್ರ ಪ್ರಶಸ್ತಿ ಸೋಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಪಾಲಾಯಿತು. ದೊಡ್ಡಿಪಾಳ್ಯ ಡೇರಿಯ ಮಹೇಶ್ ಅತ್ಯುತ್ತಮ ಮುಖ್ಯ ಕಾರ್ಯನಿರ್ವಾಹಕ, ಜಕ್ಕಸಂದ್ರ ಡೇರಿಯ ನಂದೀಶ್ ಅತ್ಯುತ್ತಮ ಹಾಲು ಪರೀಕ್ಷಕ, ಕಗ್ಗಲಿಪುರ ಡೇರಿಯ ಹನುಮಕ್ಕ ಅತ್ಯುತ್ತಮ ಶುಚಿಗಾರ, ಗೊಲ್ಲಹಳ್ಳಿಯ ರಾಮ್ುಮಾರ್ ಅತಿ ಹೆಚ್ಚು ಹಾಲು ಉತ್ಪಾದಕ, ಅತ್ಯುತ್ತಮ ಕೃತಕ ಗರ್ಭಧಾರಣಾ ಕಾರ್ಯಕರ್ತ ಬೆಳಗುಳಿಯ ಶಿವಕುಮಾರ್, ಅತ್ಯುತ್ತಮ ಒಂಟಿ ಕೃತಕ ಗರ್ಭಧಾರಣಾ ಕಾರ್ಯಕರ್ತ ಪ್ರಶಸ್ತಿಗೆ ಮುಡೇನಹಳ್ಳಿ ಡೇರಿಯ ಶಿವರಾಜು ಪಾತ್ರರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts