More

    ಸಾಂಪ್ರದಾಯಿಕ “ಬಹಿ ಖಾತಾ” ಪದ್ಧತಿಗೆ ಗುಡ್​ ಬೈ: ಬಜೆಟ್​ ಮಂಡನೆಗೆ ಡಿಜಿಟಲ್​ ಸ್ಪರ್ಶ!

    ನವದೆಹಲಿ: ಮಹಾಮಾರಿ ಕರೊನಾ ಸಂಕಷ್ಟದ ನಡುವೆಯೂ ವರ್ಷದ ಆರಂಭದಲ್ಲಿ ಮಂಡನೆಯಾಗಲಿರುವ 2021ನೇ ಸಾಲಿನ ಬಜೆಟ್​ ಮೇಲೆ ಜನರ ನಿರೀಕ್ಷೆ ಹೆಚ್ಚಾಗಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಬಜೆಟ್​ ಮಂಡನೆ ಆರಂಭವಾಗಲಿದೆ. ಈ ಬಾರಿಯ ಬಜೆಟ್​ ಮಂಡನೆ ತುಂಬಾ ವಿಶಿಷ್ಟವಾಗಿದ್ದು, ಈವರೆಗೂ ಇದ್ದ “ಬಹಿ ಖಾತಾ” ಸಂಪ್ರದಾಯಕ್ಕೆ ತೆರೆ ಎಳೆದಿರುವ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ಬಜೆಟ್​ ಮಂಡನೆಗೆ ಆಧುನಿಕ ಸ್ಪರ್ಶ ನೀಡಲಿದ್ದಾರೆ.

    ಹೌದು. ಮೊದಲು ಬಜೆಟ್​ ಪ್ರತಿಗಳಿದ್ದ ಸೂಟ್​ಕೇಸ್ ಹಿಡಿದುಕೊಂಡು ಸಂಸತ್ತಿಗೆ ಆಗಮಿಸಲಾಗುತ್ತಿತ್ತು. ಸೂಟ್​ಕೇಸ್​ ವಿದೇಶಿ ಸಂಸ್ಕೃತಿ ಆಗಿದ್ದರಿಂದ ಅದಕ್ಕೆ ಗುಡ್​ಬೈ ಹೇಳಿದ ನಿರ್ಮಲಾ ಸೀತಾರಾಮನ್​ ಸಾಂಪ್ರದಾಯಿಕ “ಬಹಿ ಖಾತಾ” ಹಿಡಿದು ಸಂಸತ್ತಿಗೆ ಆಗಮಿಸುವ ಮೂಲಕ ಹೊಸ ಪದ್ಧತಿಗೆ ನಾಂದಿ ಹಾಡಿದ್ದರು.

    ಇದನ್ನೂ ಓದಿರಿ: Web Exclusive | ‘ಕಾಂಪಿಟ್ ವಿತ್ ಚೈನಾ’ ಬ್ರ್ಯಾಂಡ್​ ಹಿಂಪಡೆತ: ಹೆಸರಿಲ್ಲದೆ ಯೋಜನೆ ಜಾರಿ; ರಾಜಕೀಯ ಹಾಗೂ ರಾಜತಾಂತ್ರಿಕ ಕಾರಣ..

    ಇದೀಗ ಬಹಿ ಖಾತಾ ಪದ್ಧತಿಗೆ ಆಧುನಿಕ ಸ್ಪರ್ಶ ನೀಡಿರುವ ನಿರ್ಮಲಾ ಸೀತಾರಾಮನ್​ ಇಂದಿನ ಬಜೆಟ್​ ಅನ್ನು ಟ್ಯಾಬ್​ ಮೂಲಕ ಮಂಡನೆ ಮಾಡಲಿದ್ದಾರೆ. ಈ ಮೂಲಕ ಬಜೆಟ್​ಗೆ ಡಿಜಿಟಲ್​ ಸ್ಪರ್ಶ ನೀಡಲಿದ್ದಾರೆ. ಅಲ್ಲದೆ, ಇದೇ ಮೊದಲ ಬಾರಿಯ ಕಾಗದರಹಿತ ಬಜೆಟ್​ ಮಂಡನೆ ಎಂಬ ಹೆಸರಿಗೆ ಪಾತ್ರವಾಗಲಿದೆ.

    ಮೊಬೈಲ್​ ಆ್ಯಪ್​ನಲ್ಲಿ ಬಜೆಟ್​ ಪ್ರತಿ
    ಸಾರ್ವಜನಿಕರೂ ಯೂನಿಯನ್ ಬಜೆಟ್ ಮೊಬೈಲ್ ಆಪ್ ಮೂಲಕ ಬಜೆಟ್ ಪ್ರತಿಯನ್ನು ಪಡೆಯಬಹುದಾಗಿದೆ. ಆಪ್​ನಲ್ಲಿ ಮುಂಗಡ ಪತ್ರದ 14 ದಾಖಲೆಗಳ ಪಿಡಿಎಫ್ ಪ್ರತಿ ಲಭ್ಯವಿರುತ್ತದೆ. ಇದರಲ್ಲಿ ಮುಂಗಡಪತ್ರದ ಭಾಷಣ ಮತ್ತು ಇತರೆ ದಾಖಲೆಗಳು ಸೇರಿಕೊಂಡಿವೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಆ್ಯಪ್​ ಲಭ್ಯವಿದೆ. ಆ್ಯಪ್​ ಬಳಕೆದಾರ ಸ್ನೇಹಿಯಾಗಿದ್ದು, ಬಜೆಟ್ ಪ್ರತಿಯನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು, ಝುೂಮ್ ಮಾಡಿ ನೋಡಬಹುದು ಮತ್ತು ಪ್ರಿಂಟ್ ಕೂಡ ಮಾಡಬಹುದಾಗಿದೆ. ಹುಡುಕುವುದಕ್ಕೆ ಸರ್ಚ್ ಆಯ್ಕೆಯನ್ನೂ ಒದಗಿಸಲಾಗಿದೆ. ಆ್ಯಪ್​ ಆಂಡ್ರಾಯ್ಡ್​ ಮತ್ತು ಐಒಎಸ್ ಮಾದರಿಯಲ್ಲೂ ಲಭ್ಯವಿದೆ. ಆ್ಯಪ್​ ಡೌನ್ ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಕೊಂಡಿ ಬಳಸಬಹುದು.

    ಮುಂಗಡ ನೆರವಿನ ನಿರೀಕ್ಷೆ: ಅರ್ಥವ್ಯವಸ್ಥೆ ಮೇಲೆ ಕರೊನಾ ಪ್ರಹಾರ; ಸಿಕ್ಕೀತೇ ಹೊಸ ಬದುಕಿನ ಪರಿಹಾರ?

    ಕೇಂದ್ರ ಬಜೆಟ್​ 2020 LIVE| ನಮೋ ಸರ್ಕಾರದಿಂದ ತೆರಿಗೆ ಗಿಫ್ಟ್​: 5 ಲಕ್ಷ ರೂ.ವರೆಗೂ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts