More

    ಕೇಂದ್ರ ಬಜೆಟ್ 2020: ನಿಶ್ಚಿತ ಮಿತಿಗಿಂತ ಹೆಚ್ಚು ಮಾಲಿನ್ಯ ಉಂಟುಮಾಡುವ ಪವರ್​ ಪ್ಲಾಂಟ್​ಗಳಿಗೆ ಬೀಗ

    ನವದೆಹಲಿ: ನಿಗಿದತ ಮಾನದಂಡಗಳ ಪ್ರಕಾರ ನಿಶ್ಚಿತ ಮಿತಿಗಿಂತ ಹೆಚ್ಚು ಮಾಲಿನ್ಯ ಉಂಟುಮಾಡುವ ಪವರ್​ಪ್ಲಾಂಟ್​ಗಳನ್ನು ಮುಚ್ಚಲು ಆದೇಶಿಸಲಾಗುವುದು ಎಂದು ಕೇಂದ್ರ ಸರ್ಕಾರ ಶನಿವಾರ ಘೋಷಿಸಿದೆ.

    ಈ ವಿಚಾರವನ್ನು ಈ ಸಲದ ಬಜೆಟ್ ಮಂಡನೆ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಸಂಸತ್ತಿಗೆ ತಿಳಿಸಿದ್ದಾರೆ. ಹವಾಮಾನ ವೈಪರೀತ್ಯ ತಡೆಯಲು ಕ್ರಮ ಕೈಗೊಳ್ಳುವ ವಿಚಾರದಲ್ಲಿ ಭಾರತ ಬದ್ಧವಾಗಿದೆ. ಇದರಂತೆ, ಪ್ಯಾರಿಸ್ ಒಪ್ಪಂದದ ಅಂಶಗಳನ್ನು ಅನುಸರಿಸಲು ಸಜ್ಜಾಗಿದೆ. 2021ರ ಜನವರಿ 1ರಿಂದ ಈ ಒಪ್ಪಂದದ ಅಂಶ ಜಾರಿಗೆ ಬರಲಿದೆ ಎಂದಿದ್ದಾರೆ.

    ವಾಯ ಮಾಲಿನ್ಯ ತಡೆಗಾಗಿ ಕೇಂದ್ರ ಸರ್ಕಾರ ಈ ಹಣಕಾಸು ವರ್ಷದಲ್ಲಿ 4,400 ಕೋಟಿ ರೂಪಾಯಿ ಹಂಚಿಕೆ ಮಾಡಲಿದೆ. ಇದಲ್ಲದೆ, ಪರ್ಯಾಯ ವಿದ್ಯುತ್ ಯೋಜನೆ ಪ್ರಕಾರ, ದೇಶದ 20 ಲಕ್ಷ ರೈತರಿಗೆ ಪಿಎಂ ಕುಸುಮ್​ ಸ್ಕೀಮ್ ಮೂಲಕ ಸೋಲಾರ್ ಪಂಪ್ ಸ್ಥಾಪಿಸಲು ಅನುಕೂಲ ಕಲ್ಪಿಸಲಾಗುತ್ತದೆ ಎಂದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts