More

    ರಾತ್ರಿಯಿಡೀ ರೈತರು-ಪೊಲೀಸರ ನಡುವೆ ವಾಗ್ವಾದ; ಮಾತುಕತೆಗೆ ಸರ್ಕಾರ ಸಿದ್ಧ ಎಂದ ಕೃಷಿ ಸಚಿವ ಅರ್ಜುನ್ ಮುಂಡಾ

    ನವದೆಹಲಿ: ಒಂದೆಡೆ ಪಂಜಾಬ್-ಹರಿಯಾಣದ ರೈತರು ದೆಹಲಿ ಚಲೋ ಮೆರವಣಿಗೆ ವಿಚಾರದಲ್ಲಿ ಅಚಲರಾಗಿದ್ದಾರೆ, ಇತ್ತ ಕಡೆ ಅವರನ್ನು ದೆಹಲಿ ಪ್ರವೇಶಿಸದಂತೆ ತಡೆಯಲು ಪೊಲೀಸರು ಬಿಗಿ ಭದ್ರತೆ ಹೆಚ್ಚಿಸಿದ್ದಾರೆ. ಇದರಿಂದ ರೈತರು ಹಾಗೂ ಪೊಲೀಸರ ನಡುವೆ ಘರ್ಷಣೆಯ ವಾತಾವರಣ ನಿರ್ಮಾಣವಾಗಿದೆ.

    ಇನ್ನು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಸರ್ಕಾರ ಮಾತನಾಡಲು ಸಿದ್ಧವಿದ್ದರೂ ರೈತರು ಒಪ್ಪುತ್ತಿಲ್ಲ, ಎಂಎಸ್‌ಪಿ ಕಾನೂನಿಗೆ ಎಲ್ಲಾ ಮಧ್ಯಸ್ಥಗಾರರ ಸಮಾಲೋಚನೆ ಅಗತ್ಯ. ರೈತರು ಬೇಡಿಕೆಗಳನ್ನು ಮಾತ್ರ ಸಲ್ಲಿಸುತ್ತಾರೆ. ಈ ಬಗ್ಗೆ ತಮ್ಮ ಸಲಹೆಗಳನ್ನು ನೀಡುವುದಿಲ್ಲ. ಕಾನೂನನ್ನು ಮಾಡಲಾಗುವುದು. ಆದರೆ ಅದು ಸಮಯ ತೆಗೆದುಕೊಳ್ಳುತ್ತದೆ. ಮೋದಿ ಸರಕಾರ ಕಾನೂನು ಮಾಡುವುದಾಗಿ ಹೇಳುತ್ತದೆ. ಕಾಂಗ್ರೆಸ್‌ನಂತೆ ಘೋಷಣೆ ಮಾಡಿ ಹಿಂದೆ ಸರಿಯುವ ಸರಕಾರವಲ್ಲ ಎಂದು ತಿಳಿಸಿದ್ದಾರೆ.

    100ಕ್ಕೂ ಹೆಚ್ಚು ರೈತರು, ಪೊಲೀಸ್ ಸಿಬ್ಬಂದಿಗೆ ಗಾಯ 
    ದೆಹಲಿಯ ಎಲ್ಲಾ ಮೂರು ಗಡಿಗಳನ್ನು ಮುಚ್ಚಲಾಗಿದೆ. ಟ್ರಾಫಿಕ್ ಜಾಮ್ ಆಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ನಿನ್ನೆ, ಹರಿಯಾಣ-ಪಂಜಾಬ್ ಸಂಪರ್ಕಿಸುವ ಶಂಭು ಗಡಿಯಲ್ಲಿ ರೈತರು ಮುಂದಕ್ಕೆ ಸಾಗಲು ಬ್ಯಾರಿಕೇಡ್‌ಗಳು ಒಡೆದಿದ್ದಾರೆ. ಆಗ ಅವರ ವಿರುದ್ಧ ಪೊಲೀಸರು ಬಲಪ್ರಯೋಗ ಮಾಡಿದ್ದಾರೆ. ರೈತರನ್ನು ಚದುರಿಸಲು ಡ್ರೋನ್‌ಗಳಿಂದ ಅಶ್ರುವಾಯು ಶೆಲ್‌ಗಳನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಗದ್ದಲ ಉಂಟಾಗಿದ್ದು, ಪ್ರತಿದಾಳಿಯಲ್ಲಿ 100ಕ್ಕೂ ಹೆಚ್ಚು ರೈತರು ಹಾಗೂ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಪೊಲೀಸರು ಹಲವು ರೈತರನ್ನು ವಶಕ್ಕೆ ಪಡೆದಿದ್ದಾರೆ, ರಾತ್ರಿಯಿಡೀ ಗದ್ದಲ ಮುಂದುವರೆಯಿತು. ರೈತರನ್ನು ತಡೆಯಲು ಪೊಲೀಸರು ರಾತ್ರಿಯೂ ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದರು.

    ಎಲ್ಲಾ ಮೂರು ಗಡಿಗಳಲ್ಲಿ ಉದ್ವಿಗ್ನ ಪರಿಸ್ಥಿತಿ, ಸೆಕ್ಷನ್ 144 ಜಾರಿ 
    ಶಂಭು ಗಡಿಯಲ್ಲಿ ರೈತರ ಗಲಾಟೆ ಹಿನ್ನೆಲೆಯಲ್ಲಿ ಹರಿಯಾಣ ಸರ್ಕಾರ 15 ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಿದೆ. ಅಲ್ಲದೇ ಇಂಟರ್‌ನೆಟ್ ನಿಷೇಧದ ಗಡುವನ್ನು ಫೆಬ್ರವರಿ 15ರವರೆಗೆ ವಿಸ್ತರಿಸಲಾಗಿದೆ. ಹರಿಯಾಣ, ದೆಹಲಿಯ ಸಿಂಘು-ಟಿಕ್ರಿ ಗಡಿ ಮತ್ತು ಉತ್ತರ ಪ್ರದೇಶದ ಗಾಜಿಪುರ ಗಡಿಯನ್ನು ಮುಚ್ಚಲಾಗಿದೆ. ಮುಂದಿನ 30 ದಿನಗಳ ಕಾಲ ದೆಹಲಿಯಲ್ಲಿ ಸೆಕ್ಷನ್ 144 ಜಾರಿಯಲ್ಲಿರುತ್ತದೆ. ಪಂಜಾಬ್‌ನಲ್ಲೂ ಇಂಟರ್ನೆಟ್ ಅನ್ನು ನಿಷೇಧಿಸಲಾಗಿದೆ.

    ಬಸ್‌ಗಳ ಪ್ರವೇಶ ನಿಷೇಧ 
    ರೈತರ ಆಂದೋಲನದ ಹಿನ್ನೆಲೆಯಲ್ಲಿ ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆ (ಎಚ್‌ಆರ್‌ಟಿಸಿ) ದೆಹಲಿಗೆ ಬರುವ ಬಸ್‌ಗಳನ್ನು ನಿಲ್ಲಿಸಿದೆ. ಹಿಮಾಚಲದಿಂದ ದೆಹಲಿಗೆ ಬರುವ ಎಲ್ಲಾ ಬಸ್‌ಗಳ ಮಾರ್ಗಗಳನ್ನು ಚಂಡೀಗಢಕ್ಕೆ ಸೀಮಿತಗೊಳಿಸಲಾಗಿದೆ. ಹರಿಯಾಣದಿಂದ ಬಸ್‌ಗಳ ಪ್ರವೇಶವನ್ನು ಈಗಾಗಲೇ ನಿಷೇಧಿಸಲಾಗಿದೆ. ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆಯಿಂದಾಗಿ ಮೇಲ್ಸೇತುವೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ದೆಹಲಿಯಿಂದ ನೋಯ್ಡಾ ಮತ್ತು ನೋಯ್ಡಾದಿಂದ ದೆಹಲಿಗೆ ಪ್ರಯಾಣಿಸುವ ಜನರು ಭಾರೀ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದಾರೆ.

    ಮತ್ತೊಂದು ಮಹಾ ಕುತಂತ್ರ!; ಎಂಇಎಸ್ ದುಷ್ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts