More

    ತುಂಬದ ಜಲಾಶಯ, ಕೆರೆ ಕಟ್ಟೆ

    ಮುಂಡಗೋಡ: ಒಂದು ವಾರದಿಂದ ತಾಲೂಕಿನಾದ್ಯಂತ ಉತ್ತಮವಾದ ಮಳೆ ಸುರಿದರೂ ಹಲವಾರು ಜಲಾಶಯ ಹಾಗೂ ಕೆರೆ-ಕಟ್ಟೆಗಳಲ್ಲಿ ನೀರು ಸಂಗ್ರಹವಾಗದಿರುವುದು ಆತಂಕಕ್ಕೆ ಕಾರಣವಾಗಿದೆ.

    ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಗಳಿಗೆ ಒಳಪಡುವ ಸಾವಿರಕ್ಕೂ ಅಧಿಕ ಕೆರೆ, ಕಟ್ಟೆಗಳು ಹಲವು ಜಲಾಶಯಗಳಿವೆ. ಆದರೆ, ಬಹುತೇಕ ಕೆರೆಗಳು ನೀರಿಲ್ಲದೆ ಒಣಗಿ ನಿಂತಿವೆ. ಹಲವೆಡೆ ಕೆರೆಗಳಲ್ಲಿ ಅಲ್ಪ ಪ್ರಮಾಣದ ನೀರು ಸಂಗ್ರಹವಾಗಿವೆ.

    ತಾಲೂಕಿನಲ್ಲಿ ಜು. 9ರಂದು 6 ಮಿಮೀ ಮಳೆಯಾಗಿದ್ದು, ಈ ವರ್ಷ ಇಂದಿನವರೆಗೆ 244.8 ಮಿಮೀ ಮಳೆಯಾಗಿದೆ. ಕಳೆದ ವರ್ಷ ಈ ಅವಧಿಗೆ 698.8 ಮಿಮೀ ಮಳೆಯಾಗುವ ಮೂಲಕ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿತ್ತು.

    ತಾಲೂಕಿನ ಬಾಚಣಕಿ, ಅರಶಿಣಗೇರಿ, ಅತ್ತಿವೇರಿ, ನ್ಯಾಸರ್ಗಿ, ಸನವಳ್ಳಿ, ಚಿಗಳ್ಳಿ, ಶಿಂಗನಳ್ಳಿ, ಅಟ್ಟಣಗಿ, ರಾಮಾಪುರ ಹೀಗೆ ಒಂಬತ್ತು ಪ್ರಮುಖ ಜಲಾಶಯಗಳಿವೆ. ಪ್ರತಿವರ್ಷ ಉತ್ತಮವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಜುಲೈ ತಿಂಗಳ ಅವಧಿಗೆ ಶೇ. 70 ನೀರು ಜಲಾಶಯಗಳಲ್ಲಿ ಭರ್ತಿಯಾಗುತ್ತಿದ್ದವು. ಆದರೆ, ಈ ವರ್ಷ ಜಲಾಶಯಗಳು ಅಲ್ಪ ಪ್ರಮಾಣದ ನೀರು ಉಳಿದುಕೊಂಡಿವೆ. ಸದ್ಯ ಬಾಚಣಕಿ ಶೇ. 08, ಅತ್ತಿವೇರಿ 05, ಚಿಗಳ್ಳಿ 10, ಅರಶಿಣಗೇರಿ 5, ನ್ಯಾಸರ್ಗಿ 5, ಶಿಂಗನಳ್ಳಿ 15, ಅಟ್ಟಣಗಿ 12 ಹಾಗೂ ಮುಂಡಗೋಡ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಸನವಳ್ಳಿ ಜಲಾಶಯಗಳಲ್ಲಿ 10ರಷ್ಟು ನೀರು ಸಂಗ್ರಹವಿದೆ.

    ನೀರಿಲ್ಲದ ಕೆರೆಗಳು: ತಾಲೂಕಿನ ಹಳ್ಳಿಗಳಲ್ಲಿನ ಕೆರೆಗಳು ಮೃಗಶಿರ ಮಳೆಗೆ ತುಂಬಿ ಹರಿಯುತ್ತಿದ್ದವು. ಆದರೆ, ಮಳೆ ಆಗದಿರುವುದರಿಂದ ನೂರಾರು ಕೆರೆಗಳು ಬೇಸಿಗೆ ಕಾಲದಲ್ಲಿರುವಂತೆ ಈಗಲು ಒಣಗಿ ನಿಂತಿವೆ. ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಾಸರಿ 52 ಕೆರೆಗಳಿವೆ. ಕೆಲವೆಡೆ ಅಲ್ಪ ಪ್ರಮಾಣದ ನೀರನ್ನು ಬಿಟ್ಟರೆ ಬಹುತೇಕ ಕೆರೆಗಳಲ್ಲಿ ನೀರಿಲ್ಲ. ಇದೇ ರೀತಿ ಅರಣ್ಯ ಪ್ರದೇಶದಲ್ಲಿರುವ ಕೆರೆಗಳಲ್ಲೂ ನೀರು ಸಂಗ್ರಹವಾಗಿಲ್ಲ.

    ಈ ವರ್ಷ ಸಮರ್ಪಕವಾಗಿ ಮಳೆ ಸುರಿಯದ್ದರಿಂದ ತಾಲೂಕಿನ ಬಹುತೇಕ ಕೆರೆ ಹಾಗೂ ಜಲಾಶಯಗಳಿಗೆ ಇದೂವರೆಗೂ ನೀರು ಹರಿದು ಬಂದೇಇಲ್ಲ. ಹೀಗಾಗಿ ಜಲಾಶಯ, ಕೆರೆಗಳಲ್ಲಿ ಅಲ್ಪಸ್ವಲ್ಪ ನೀರು ಮಾತ್ರ ಉಳಿದುಕೊಂಡಿವೆ.

    | ರಾಜು ಗುಬ್ಬಕ್ಕನವರ ಸನವಳ್ಳಿ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts