More

    ಕನಕಗಿರಿ ತಾಲೂಕಿನಾದ್ಯಂತ ಉತ್ತಮ ಮಳೆ

    ಕನಕಗಿರಿ: ತಾಲೂಕಿನಾದ್ಯಂತ ಬುಧವಾರ ತಡರಾತ್ರಿ ಉತ್ತಮ ಮಳೆಯಾಗಿದ್ದು, ಕೆಲ ರೈತರಿಗೆ ಸಂತಸ ತಂದರೆ ಹಲವರಿಗೆ ಕೊಯ್ಲಿಗೆ ಬಂದ ಫಸಲು ಹಾಳಾಯಿತಲ್ಲವೆಂಬ ಚಿಂತೆಯಾಗಿದೆ.

    ಪ್ರಸಕ್ತ ವರ್ಷದ ಮುಂಗಾರು ಮಳೆ ಸಂಪೂರ್ಣ ವಿಫಲವಾದ ಬಳಿಕ ಹಿಂಗಾರು ಕೈ ಕೊಟ್ಟಿದ್ದು, ಈಗಾಗಲೇ ತಾಲೂಕನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದೆ. ಜಾನುವಾರುಗಳಿಗೆ ಮೇವಿನ ಚಿಂತೆಯಲ್ಲಿದ್ದ ರೈತನಿಗೆ ಈ ಮಳೆಯಿಂದ ಹಸಿರು ಸಿಗುವ ಆಶಾ ಭಾವನೆ ಮೂಡಿಸಿದೆ ಆದರೂ ಕೊಯ್ಲಿಗೆ ಬಂದಿದ್ದ ಬೆಳೆಗಳಿಗೆ ಉಪಯೋಗವಿಲ್ಲದಂತಾಗಿದೆ.

    2 ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಪಟ್ಟಣದ ತಗ್ಗು ಪ್ರದೇಶಗಳು, ಜಮೀನುಗಳ ಬದುಗಳಲ್ಲಿ ನೀರು ಸಂಗ್ರಹಗೊಂಡಿದೆ. ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕಚೇರಿ ಸುತ್ತಲೂ ನೀರು ನಿಂತುಕೊಂಡಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಇನ್ನು ಗ್ರಾಪಂನ ನರೇಗಾದಡಿ ಬದು ನಿರ್ಮಾಣಕ್ಕಾಗಿ ಅಗೆಯಲಾಗಿರುವ ಗುಂಡಿಗಳು ನೀರಿನಿಂದ ತುಂಬಿಕೊಂಡಿವೆ.

    ಇದರಂತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾದರೆ ಹಳ್ಳ ಕೊಳ್ಳಗಳು ಹರಿದು ಬೋರ್‌ವೆಲ್‌ಗಳ ಅಂತರ್ಜಲ ಹೆಚ್ಚುವ ಸಾಧ್ಯತೆ ಇದೆ. ಕಪ್ಪು ಭೂಮಿಗೆ ಹುಳಿಗಡಲೆ ಬಿತ್ತನೆಗೆ ಅವಕಾಶವಿದ್ದರಿಂದ ಮಳೆಯಾಗಿದ್ದು ಒಳ್ಳೆಯದಾಗಿದ್ದರೆ, ಅಷ್ಟಿಷ್ಟು ಫಸಲು ಬಿಟ್ಟಿರುವ ತೊಗರಿ ಬೆಳೆ ಗಿಡದಲ್ಲಿಯೇ ಮೊಳಕೆಯೊಡಯುವ ಆತಂಕ ರೈತರಿಗೆ ಶುರುವಾಗಿದೆ. ಇನ್ನು ಪಂಪ್‌ಸೆಟ್ ನೀರಿಂದ ಬೆಳೆದ ಭತ್ತದ ಬೆಳೆ ನೆಲಕ್ಕಚ್ಚಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts