More

    ಅರ್ಥೈಸಿಕೊಂಡು ಓದುವುದು ಬಹುಮುಖ್ಯ

    ನಿಪ್ಪಾಣಿ: ವಿದ್ಯಾರ್ಥಿಗಳನ್ನು ಎಲ್ಲ ವಿಷಯಗಳಲ್ಲೂ ನಿಪುಣರನ್ನಾಗಿಸುವುದು ಶಿಕ್ಷಕರ ಕರ್ತವ್ಯ ಎಂದು ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಹೇಳಿದರು.

    ಸ್ಥಳೀಯ ವಿಎಸ್‌ಎಂಎಸ್‌ಆರ್‌ಕೆಐಟಿ ಆವರಣದ ವಿಎಸ್‌ಎಂ ಕನ್ವೇನ್ಶನ್ ಹಾಲ್‌ನಲ್ಲಿ ಗುರುವಾರ ಏರ್ಪಡಿಸಿದ್ದ ವಿಎಸ್‌ಎಂ ಜಿ.ಐ. ಬಾಗೇವಾಡಿ ಪದವಿಪೂರ್ವ ಮಹಾವಿದ್ಯಾಲಯದ ಮೂರು ದಿನಗಳ ಉತ್ಕೃಷ್ಟ 2023-24 ಕಾರ್ಯಕ್ರಮ ಉದ್ಘಾಟಿಸಿ ಅವರು
    ಮಾತನಾಡಿದರು. ವಿದ್ಯಾರ್ಥಿಗಳ ಸರ್ವಾಂಗೀಣ ಏಳಿಗೆಗಾಗಿ ವಿಎಸ್‌ಎಂನಿಂದ ವಿವಿಧ ವೇದಿಕೆ ಒದಗಿಸಲಾಗುತ್ತಿದೆ. ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕವಾಗಿ ಗೆಲ್ಲಲು ಅರ್ಥೈಸಿಕೊಂಡು ಓದುವುದು ಬಹುಮುಖ್ಯ ಎಂದರು.

    ದೇವಚಂದ ಮಹಾವಿದ್ಯಾಲಯದ ಡಾ.ಪಿ.ಡಿ.ಶಿರಗಾವೆ ಮಾತನಾಡಿ, ನಗರ ಸೇರಿ ಸುತ್ತಮುತ್ತಲಿನ ಎಲ್ಲ ಹಳ್ಳಿಗರ ಬಾಯಲ್ಲಿ ವಿಎಸ್‌ಎಂ ಹೆಸರು ಕೇಳಿಬರುತ್ತಿರುವುದು ಅದರ ಗುಣಮಟ್ಟಕ್ಕೆ ಸಾಕ್ಷಿ ಎಂದರು. ಉಪಕಾರ್ಯಾಧ್ಯಕ್ಷ ಪಪ್ಪು ಪಾಟೀಲ ಮಾತನಾಡಿ, ಸೌಲಭ್ಯಗಳ ಪ್ರಯೋಜನ ಪಡೆದು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

    ಪಪೂ ಮಹಾವಿದ್ಯಾಲಯದ ಉಸ್ತುವಾರಿ ಸಮಿತಿ ಅಧ್ಯಕ್ಷ ರಾವಸಾಹೇಬ ಪಾಟೀಲ, ಸಿಇಒ ಡಾ.ಸಿದ್ಧಗೌಡ ಪಾಟೀಲ ಮಾತನಾಡಿದರು.

    ವಿಜ್ಞಾನ ಪ್ರದರ್ಶನ, ರಂಗೋಲಿ ಮತ್ತು ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಂಡಳ ಕಾರ್ಯದರ್ಶಿ ಹರಿಶ್ಚಂದ್ರ ಶಾಂಡಗೆ, ಸಂಚಾಲಕ ಸಂಜಯ ಮೊಳವಾಡೆ, ಶೇಖರ ಪಾಟೀಲ, ಸಚಿನ ಹಾಲಪ್ಪನವರ, ವಿವಿಧ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ. ನಿಂಗಪ್ಪ ಮಾದಣ್ಣವರ ಸ್ವಾಗತಿಸಿದರು. ವಿಜ್ಞಾನ ವಿಭಾಗದ ಮುಖ್ಯಸ್ಥ
    ಅಜಿತರಾವ ಮೋರೆ ಅತಿಥಿಗಳನ್ನು ಪರಿಚಯಿಸಿದರು. ಸಂಜಯ ಮುತ್ನಾಳೆ ನಿರೂಪಿಸಿದರು. ಪಿ.ಎ.ಪಾಯಮಲ್ಲೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts