More

    11 ರಂದು ಖಾಸಗಿ ಶಾಲೆಗಳ ಬೇಡಿಕೆ ಈಡೇರಿಕೆಗೆ ಹೋರಾಟ

    ಲಿಂಗಸುಗೂರು: ಅನುದಾನ ರಹಿತ ಖಾಸಗಿ ಶಾಲೆಗಳ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿ.11 ರಂದು ಬೆಳಗಾವಿಯ ಸುವರ್ಣ ಸೌಧದ ಮುಂಭಾಗದಲ್ಲಿ ಮಾನ್ಯತೆ ಪಡೆದ ಖಾಸಗಿ ಶಾಲೆಗಳ ಸಂಘ (ರೂಪ್ಸಾ) ದ ಅಧ್ಯಕ್ಷ ಡಾ.ಹಾಲನೂರು ಲೇಪಾಕ್ಷಿ ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದೆಂದು ರೂಪ್ಸಾ ಸಂಘಟನೆಯ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಮಹಾಂತೇಶ ಗೌಡರ ತಿಳಿಸಿದರು.

    ಅನುದಾನ ರಹಿತ ಖಾಸಗಿ ಶಾಲೆಗಳ ಬೇಡಿಕೆ ಈಡೇರಿಸಿ

    ಪಟ್ಟಣದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1995ರ ನಂತರ ಕನ್ನಡ ಮಾಧ್ಯಮ ಎಲ್ಲ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಖಾಸಗಿ ಶಾಲೆಗಳಲ್ಲಿ ಶೇ.25 ಆರ್‌ಟಿಇ ಮಕ್ಕಳ ದಾಖಲಾತಿ ಮರು ಸ್ಥಾಪಿಸಬೇಕ. ಸರ್ಕಾರದಿಂದ ಪ್ರತಿ ಮಗುವಿಗೆ ನೀಡುವ 16 ಸಾವಿರ ವೆಚ್ಚವನ್ನು 35 ಸಾವಿರ ರೂ.ಗಳಿಗೆ ಏರಿಸಬೇಕು. ಖಾಸಗಿ ಶಾಲೆಗಳ ನವೀಕರಣ ವೇಳೆ ಅಗ್ನಿ ಶಾಮಕ ರಕ್ಷಣೆ ಮತ್ತು ಕಟ್ಟಡ ಭದ್ರತಾ ಪ್ರಮಾಣ ಪತ್ರಗಳಿಗೆ ರಿಯಾಯಿತಿ ನೀಡಬೇಕು. ಖಾಸಗಿ ಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ನವೀಕರಣವನ್ನು 10 ವರ್ಷಗಳ ಅವಧಿಗೆ ನಿಗದಿಪಡಿಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದೆಂದು ಎಂದರು.

    ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್​: ಖ್ಯಾತ ಮೊಬೈಲ್​ ಸಂಸ್ಥೆಯನ್ನು ಆರೋಪಿ ಎಂದು ಹೆಸರಿಸಿದ ಇಡಿ!

    ರೂಪ್ಸಾ ತಾಲೂಕು ಅಧ್ಯಕ್ಷ ನಾಗರಾಜ ಹಿರೇಮಠ, ಕಾರ್ಯದರ್ಶಿ ನಾಗರಡ್ಡಿ ದೇವಾಪುರ, ರಾಜ್ಯ ನಿರ್ದೇಶಕ ನಾಗನಗೌಡ, ಮಹ್ಮದ್ ಖಾದರಪಾಶಾ, ಸಂಗಯ್ಯ ಮೂಲಿಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts