ಉಗಾರ ಖುರ್ದದಲ್ಲಿ ನಾಲ್ವರು ಬೈಕ್ ಕಳ್ಳರ ಬಂಧನ

blank

ಕಾಗವಾಡ: ಸಮೀಪದ ಉಗಾರ ಖುರ್ದ ಪಟ್ಟಣದಲ್ಲಿ ಶನಿವಾರ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ನಾಲ್ವರು ಬೈಕ್ ಕಳ್ಳರನ್ನು ಬಂಧಿಸಿರುವ ಪೊಲೀಸರು 1.75 ಲಕ್ಷ ರೂ.ಮೌಲ್ಯದ ಐದು ಬೈಕ್ ವಶಪಡಿಸಿಕೊಂಡಿದ್ದಾರೆ. ಉಗಾರ ಪಟ್ಟಣದ ವಿನಾಯಕ ಅಶೋಕ ಪಾಚಕಟ್ಟೆ (25), ವಿನೋದ ರಮೇಶ ರಜಪೂತ (29), ಸಾಗರ ದಶರಥ ಕಾಂಬಳೆ (28), ರೋಹಿತ ಮನು ಚವ್ಹಾಣ (22) ಬಂಧಿತ ಬೈಕ್ ಕಳ್ಳರು.

ಉಗಾರ ಖುರ್ದದ ರಾಣಿ ಚನ್ನಮ್ಮ ವೃತ್ತದಲ್ಲಿ ಗಸ್ತಿನಲ್ಲಿದ್ದ ಪೊಲೀಸರು ಸಂಶಯಾಸ್ಪದವಾಗಿ ತಿರುಗುತ್ತಿದ್ದ ಯುವಕರನ್ನು ವಿಚಾರಣೆಗೆ ಒಳಪಡಿಸಿದಾಗ ಬೈಕ್ ಕಳ್ಳತನ ಪ್ರಕರಣ ಬೆಳಕಿಗೆ ಬಂದಿವೆ. ಅವರನ್ನು ಬಂಧಿಸಿ ತನಿಖೆ ನಡೆಸಿದಾಗ ರಾಯಲ್ ಎನ್‌ಫೀಲ್ಡ್, ಹೋಂಡಾ ಆಕ್ಟಿವಾ, ಹೀರೋ ಹೋಂಡಾ ಸ್ಪ್ಲೆಂಡರ್, ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್, ಪ್ಯಾಷನ್ ಪ್ರೊ ಬೈಕ್ ಕಳವು ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ.

ಅವುಗಳನ್ನು ವಶಪಡಿಸಿಕೊಂಡ ಪೊಲೀಸರು, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗಿರೀಶ, ಸಿಪಿಐ ಶಂಕರಗೌಡ ಬಸನಗೌಡರ, ಕಾಗವಾಡ ಪಿಎಸ್‌ಐ ಹನುಮಂತ ಧರ್ಮಟ್ಟಿ ಕಾರ್ಯಾಚರಣೆ ನಡೆಸಿದ್ದರು.

Share This Article

Curry Leaf Juice ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಯ ರಸ ಕುಡಿಯಿರಿ..ಬೊಜ್ಜು ಕಡಿಮೆಯಾಗುತ್ತದೆ..

Curry Leaf Juice : ಕರಿಬೇವಿನ ಎಲೆಗಳನ್ನು ಆಯುರ್ವೇದದಲ್ಲಿ ಔಷಧಿ ಎಂದು ಪರಿಗಣಿಸಲಾಗಿದೆ. ವಿಶೇಷವೆಂದರೆ ಇಷ್ಟೆಲ್ಲಾ…

Health Tips : ನೀವು ಮಧ್ಯರಾತ್ರಿ ಎಚ್ಚರಗೊಳ್ಳುತ್ತೀರಾ? ಆರೋಗ್ಯ ಸಮಸ್ಯೆ ಇರೋದು ಪಕ್ಕಾ…

Health Tips : ಮನುಷ್ಯನಿಗೆ ಆಹಾರ ಮತ್ತು ನೀರು ಎಷ್ಟು ಮುಖ್ಯವೋ ನಿದ್ರೆಯೂ ಅಷ್ಟೇ ಮುಖ್ಯ…

‘ಗೋಲ್ಡನ್ ಮಿಲ್ಕ್’ ಮಾಡುವ ಸರಿಯಾದ ವಿಧಾನ ಇಲ್ಲಿದೆ; ಉತ್ತಮ ಆರೋಗ್ಯಕ್ಕಾಗಿ ಈ Recipe

ಒಂದು ಚಮಚ ಅರಿಶಿನವನ್ನು ಹಾಲಿನಲ್ಲಿ ಬೆರೆಸಿ ಕುಡಿದರೆ ಅದು ದೇಹಕ್ಕೆ ವರದಾನವಾಗಿದೆ. ಅರಿಶಿನ ಹಾಲು ಅನೇಕ…