More

    ಉಲ್ಲಾಸ್ ಅಗರಬತ್ತಿಯಿಂದ ದಸರಾದಲ್ಲಿ ನಂದಿ ಉತ್ಸವ: 16 ಅಡಿ ಎತ್ತರ, 24 ಅಡಿ ಉದ್ದ ನಂದಿ ಪ್ರತಿಷ್ಠಾಪನೆ

    ಬೆಂಗಳೂರು: ಅಗರಬತ್ತಿ ಕ್ಷೇತ್ರದಲ್ಲಿ ವಿಶಿಷ್ಠ ಛಾಪು ಮೂಡಿಸಿರುವ ಉಲ್ಲಾಸ್ ಅಗರಬತ್ತಿ ಸಂಸ್ಥೆ, ಈ ಬಾರಿ ವಿಶ್ವ ವಿಖ್ಯಾತ ದಸರಾದಲ್ಲಿ ವಿಶ್ವದ ಅತಿ ದೊಡ್ಡ ನಂದಿ ವಿಗ್ರಹವನ್ನು ಹೂವುಗಳಿಂದ ಪ್ರತಿಷ್ಠಾಪಿಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೆರಗು ಕೊಟ್ಟಿದೆ. ಬೆಂಗಳೂರು ಗಣೇಶ ಉತ್ಸವ ಸೇರಿ ದೇಶದ ಹಲವು ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಇದರ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸೋಮಶೇಖರ್ ಪಿ. ಪಾಟೀಲ್ ಅವರು ವಿಜಯವಾಣಿ ಜತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಇದರ ಪೂರ್ತಿ ವಿವರ ಇಲ್ಲಿದೆ.

    * ಪ್ರತಿ ವರ್ಷ ನಡೆಯುವ ಬೆಂಗಳೂರು ಗಣೇಶ ಉತ್ಸವದಲ್ಲಿ ನಿಮ್ಮ ಸಂಸ್ಥೆಯ ಪ್ರಮುಖ ಕೊಡುಗೆ ಇದ್ದೇ ಇರುತ್ತದೆ. ಉಲ್ಲಾಸ್ ಅಗರಬತ್ತಿ ಸಂಸ್ಥೆ ನಿರಂತರವಾಗಿ ಇಂಥ ಸಾಂಸ್ಕೃತಿಕ ಚಟುವಟಿಕೆ ಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು?

    ‘ಧರ್ಮೋ ರಕ್ಷತಿ ರಕ್ಷಿತಃ’(Protect dharma, dharma will Protect you) ಧ್ಯೇಯ ಇಟ್ಟುಕೊಂಡು ನಾವು ಕೆಲಸ ಮಾಡುತ್ತಿದ್ದೇವೆ. ನಮ್ಮ ತಾಯಿ ಚಿಕ್ಕಂದಿನಿಂದಲೂ ಕೈಲಾದ ಮಟ್ಟಿಗೆ ಧರ್ಮದ ಕಾರ್ಯಕ್ರಮಗಳನ್ನು ಮಾಡಬೇಕು ಎಂಬುದನ್ನು ನಮಗೆ ಕಲಿಸಿದ್ದಾರೆ. ಇನ್ಪೋಸಿಸ್​ನ ಸುಧಾಮೂರ್ತಿ ಅವರು ನಿರಂತರವಾಗಿ ಇದನ್ನು ಹೇಳುತ್ತಿರುತ್ತಾರೆ. ಹಾಗಾಗಿ, ನಾವೂ ಇದನ್ನು ಪರಿ ಪಾಲಿಸಿಕೊಂಡು ಬರುತ್ತಿದ್ದೇವೆ. 12 ವರ್ಷಗಳಿಂದ ಬೆಂಗಳೂರು ಗಣೇಶ ಉತ್ಸವದಲ್ಲಿ ತೊಡಗಿಸಿಕೊಂಡಿದ್ದೇವೆ. ಈ ಬಾರಿ ಪರಿಸರ ಸ್ನೇಹಿ ಗಣೇಶ ಹಬ್ಬ-2022 ಕಾರ್ಯಕ್ರಮದಲ್ಲಿ 3,800 ಸ್ಪರ್ಧಿಗಳು ಒಂದೇ ವೇದಿಕೆಯಲ್ಲಿ ಗಣೇಶ ಮೂರ್ತಿ ತಯಾರಿಸಿರುವುದು ಗಿನ್ನಿಸ್ ರೆಕಾರ್ಡ್ ಆಗಿದೆ. ಇದರ ಶ್ರೇಯ ಬೆಂಗಳೂರು ಗಣೇಶ ಉತ್ಸವ ಸಂಸ್ಥೆ, ಶ್ರೀ ಶೃಂಗೇರಿ ಶಂಕರಮಠದ ಪದಾಧಿಕಾರಿಗಳು ಹಾಗೂ ಉಲ್ಲಾಸ್ ಸಂಸ್ಥೆಗೂ ಸಲ್ಲುತ್ತದೆ. ಅದೇ ರೀತಿ, ಬೆಂಗಳೂರು ಗಣೇಶ ಉತ್ಸವ ಅಂಗವಾಗಿ ಶಂಕರಪುರದ ಶ್ರೀ ಶೃಂಗೇರಿ ಶಂಕರಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣೇಶ ಮಂಟಪ ಸ್ಥಾಪಿಸಿದ್ದವು. ಈ ಕಾರ್ಯಕ್ರಮಕ್ಕೂ ಲಕ್ಷಾಂತರ ಜನರು ಭೇಟಿ ನೀಡಿ ದೇವರ ದರ್ಶನ ಪಡೆದು ನಮಗೆಲ್ಲರಿಗೂ ಹಾರೈಸಿದ್ದಾರೆ. ಪ್ರತಿ ವರ್ಷ ಇಂತಹ ಕಾರ್ಯಕ್ರಮಗಳನ್ನೂ ನಡೆಸುವುದರ ಮೂಲಕ ನಮ್ಮ ಸಂಸ್ಕೃತಿ ಮತ್ತು ಪರಂಪರೆಗೆ ಅಳಿಲು ಸೇವೆ ಮಾಡುತ್ತಿದ್ದೇವೆ.

    * ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ನಂದಿ ಉತ್ಸವ ಆಚರಣೆಯ ಉದ್ದೇಶವೇನು?
    ಪ್ರಸ್ತುತ ದಿನಗಳಲ್ಲಿ ಮಾನವ ಸಂಪನ್ಮೂಲ(ಎಚ್​ಆರ್) ನಿರ್ವಹಣೆಗೆ ನಂದಿ ಅತ್ಯುತ್ತಮ ಉದಾಹರಣೆ ಆಗಿದೆ. ಶಿವನ ಆಜ್ಞೆಯನ್ನೂ ನಂದಿ ಪರಿಪಾಲಿಸದೆ ಇರುವ ದಿನಗಳೇ ಇಲ್ಲ. ಶಿವನಿಗೆ ಎಷ್ಟು ಪೂಜೆ ಸಲ್ಲಿಸುತ್ತಿವೆಯೋ ಅಷ್ಟೇ ಗೌರವ ಅಥವಾ ಪೂಜೆ ನಂದಿಗೂ ಸಲ್ಲುತ್ತದೆ. ಈಗಿನ ಎಚ್​ಆರ್ ಮ್ಯಾನೇಜ್​ವೆುಂಟ್​ಗೆ ವಿಚಾರಕ್ಕೂ ನಾವು ನೋಡುವುದಾದರೆ ಇದು ಸೂಕ್ತವಾಗಿದೆ. ನಮ್ಮ ಸಂಸ್ಥೆಯಿಂದ ಚಾಮುಂಡಿ ಬೆಟ್ಟದಲ್ಲಿ ಪ್ರತಿಷ್ಠಾಪಿಸಿರುವ ನಂದಿ ವಿಗ್ರಹ ಮಾದರಿಯಲ್ಲಿ ಈ ಬಾರಿ ದಸರಾದಲ್ಲಿ ವಿಶ್ವದ ಅತಿ ದೊಡ್ಡ ನಂದಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಉತ್ಸವ ಆಚರಿಸಲಾಗುತ್ತಿದೆ. ಈ ಉತ್ಸವದಲ್ಲಿ 16 ಅಡಿ ಎತ್ತರ, 24 ಅಡಿ ಉದ್ದದ ನಂದಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಹೂವುಗಳಿಂದ ಆಲಂಕರಿಸಲಾಗಿದೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್​ಗೂ ಇದನ್ನೂ ಅನುಮೋದಿಸಲಾಗಿದೆ.

    *ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೇ ಈ ಕಾರ್ಯಕ್ರಮ ಆಯೋಜನೆ ಮಾಡಿದಕ್ಕೆ ಕಾರಣವೇನು?
    ಅಗರಬತ್ತಿ ಉಗಮ ಸ್ಥಾನ ಮೈಸೂರು ಆಗಿರುವುದರಿಂದ ಮೈಸೂರು ಮಹಾರಾಜರ ಕಾಲದಿಂದಲೂ ಪಾರಂಪರಿಕವಾಗಿ ಅಗರಬತ್ತಿಗೆ ಮನ್ನಣೆ ಮತ್ತು ಪ್ರೋತ್ಸಾಹ ಸಿಕ್ಕಿದೆ. ಹಾಗಾಗಿ, ಈ ದಿವಸ ಇಡೀ ವಿಶ್ವಕ್ಕೆ ಅಗರಬತ್ತಿ ಉತ್ಪನ್ನವನ್ನು ಮೈಸೂರು ಹಾಗೂ ಬೆಂಗಳೂರಿನಿಂದ ಅತಿ ಹೆಚ್ಚು ರಫ್ತು ಆಗುತ್ತದೆ. ಈ ಕಾರಣಕ್ಕೆ ಅಗರಬತ್ತಿಗೆ ಕೇಂದ್ರ ಸರ್ಕಾರ ಜಿಐ ಮ್ಯಾಪಿಂಗ್ ನೀಡಿದೆ. ಈ ಹಿನ್ನೆಲೆಯಲ್ಲಿ ದಸರಾದಲ್ಲಿ ಮಹಾರಾಜರಿಗೆ ಹಾಗೂ ಮೈಸೂರು ನಗರಕ್ಕೆ ಗೌರವ ಸಲ್ಲಿಸುವ ಅಂಗವಾಗಿ ನಂದಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಪುಪ್ಪ ನಮನ ಸಲ್ಲಿಸುತ್ತಿದ್ದೇವೆ.

    *ಗೌರಿ ಗಣೇಶ ಹಬ್ಬ ಸೇರಿ ವಿಶೇಷ ದಿನಗಳ ಸಂದರ್ಭದಲ್ಲಿಯೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ದೇಶದ ಸಂಸ್ಕೃತಿ ಹಾಗೂ ಪರಂಪರೆಯನ್ನು ಪಸರಿಸುವ ಕೆಲಸವನ್ನು ಮಾಡುತ್ತಿದ್ದೀರಿ. ಜನತೆಗೆ ನಿಮ್ಮ ಸಂದೇಶವೇನು?
    ಕಷ್ಟದಲ್ಲಿದ್ದವರು ಮಾತ್ರ ದೇವಸ್ಥಾನಕ್ಕೆ ತೆರಳುತ್ತಾರೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಈ ಕಲ್ಪನೆಯನ್ನು ಹೋಗಲಾಡಿಸಬೇಕಿದೆ.ಈಗಾಗಲೆ ನಡೆದಿರುವ ಗಣೇಶ ಉತ್ಸವ ಮತ್ತು ಪ್ರಸ್ತುತ ನಂದಿ ಉತ್ಸವದಲ್ಲಿ ಲಕ್ಷಾಂತರ ಜನರು ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾಗುವ ಜತೆಗೆ ಸಂತಸಪಡುತ್ತಿದ್ದಾರೆ. ಈ ಎಲ್ಲ ಉತ್ಸವಗಳಲ್ಲೂ ಹೆಚ್ಚು ಯುವಕರು-ಯವತಿಯರೇ ಪಾಲ್ಗೊಳ್ಳುತ್ತಿ ರುವುದರಿಂದ ಇನ್ನಷ್ಟು ಮೆರಗು ತಂದು ಕೊಡುತ್ತಿದ್ದಾರೆ. ಈ ಮೂಲಕ ನಾವೆಲ್ಲರೂ ಸೇರಿ ದೇಶದ ಸಂಸ್ಕೃತಿಯನ್ನು ಇನ್ನಷ್ಟು ಉಳಿಸಿ ಬೆಳೆಸೋಣ. ಡರ್ ಕೇ ಹಾಗೇ ಜೀತ್ ಹೇ ಎಂಬ ಮಾತಿದೆ. ಆದರೆ, ನಮ್ಮ ಪರಂಪರೆಯಲ್ಲಿ ಡರ್ ಕೇ ಪೆಹ್ಲೆ ಯೀ ಜೀತ್ ಹೇ….

    ಸರ್ವೆ ಜನಃ ಸುಖಿನೋ ಭವಂತು.

    ಜೈ ಹಿಂದ್, ಜೈ ಕರ್ನಾಟಕ.

    ಉಲ್ಲಾಸ್ ಅಗರಬತ್ತಿ ಹಿನ್ನೆಲೆ
    1978ರಲ್ಲಿ ಸ್ಥಾಪನೆಯಾದ ಉಲ್ಲಾಸ್ ಅಗರಬತ್ತಿ ಸಂಸ್ಥೆ ಹಂತ ಹಂತವಾಗಿ ಬೆಳೆದಿದೆ. ನಾಲ್ಕು ದಶಕಗಳಿಂದ ಯಶಸ್ಸಿನ ಉತ್ತುಂಗವನ್ನೇರಿ ಉತ್ತಮ ಗುಣಮಟ್ಟದ ಅಗರಬತ್ತಿಗಳ ಪ್ರಮುಖ ತಯಾರಕರು ಮತ್ತು ರಫ್ತುದಾರರು ಎಂದೆನಿಸಿಕೊಂಡಿದೆ. ವಿಸ್ತಾರವಾದ ಮತ್ತು ಗೃಹ ಕೈಗಾರಿಕೆ ರೂಪದ ಉತ್ಪಾದನಾ ಸೌಲಭ್ಯವಿದ್ದು, ತಿಂಗಳಿಗೆ 600 ಮಿಲಿಯನ್ ಅಗರಬತ್ತಿ ಉತ್ಪಾದಿಸುವ ಸಾಮರ್ಥ್ಯವನ್ನು ಸಂಸ್ಥೆ ಹೊಂದಿದೆ. ಇತ್ತೀಚಿನ ದಿನಗಳಲ್ಲಿ 1,200 ಕೋಟಿ ರೂ. ಗಾತ್ರದ ರಫ್ತು ಮಾರುಕಟ್ಟೆಗೆ ಕಾಲಿಟ್ಟಿರುವುದೇ ಅಲ್ಲದೆ, ಪ್ರಪಂಚದಾದ್ಯಂತ 40ಕ್ಕೂ ಹೆಚ್ಚು ದೇಶಗಳಲ್ಲಿ ಅಸ್ತಿತ್ವ ದೊರಕಿಸಿಕೊಂಡಿದೆ. ಇವರ ವಿಶಿಷ್ಟ್ಯತೆ ಗ್ರಾಹಕರ ಆದ್ಯತೆಗಳ ವೈವಿಧ್ಯತೆಯ ಅರಿವು. ಭಾರತ ಮತ್ತು ಸಾಗರೋತ್ತರ ಮಾರುಕಟ್ಟೆಯಲ್ಲಿ ಗಣನೀಯ ಉಪಸ್ಥಿತಿ ಹೊಂದಿದ್ದು, 2022-23ರ ವರ್ಷದ ಅತ್ಯುತ್ತಮ ಗೃಹ ಪರಿಮಳಕ್ಕಾಗಿ ಟೈಮ್ಸ್ ಬಿಸಿನೆಸ್ ಪ್ರಶಸ್ತಿ ಲಭಿಸಿದೆ.

    ಉಲ್ಲಾಸ್ ಅಗರಬತ್ತಿಯಿಂದ ದಸರಾದಲ್ಲಿ ನಂದಿ ಉತ್ಸವ: 16 ಅಡಿ ಎತ್ತರ, 24 ಅಡಿ ಉದ್ದ ನಂದಿ ಪ್ರತಿಷ್ಠಾಪನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts