More

    ಚೀನಾ ವಿರುದ್ಧ ಅಂತಾರಾಷ್ಟ್ರೀಯ ಕೋರ್ಟ್​ಗೆ ದೂರು ಒಯ್ದ ಉಯ್ಗುರ್​ ಸಮುದಾಯ

    ನವದೆಹಲಿ: ಏಕೋ 2020 ಚೀನಾದ ಪಾಲಿಗೆ ಚೆನ್ನಾಗಿದ್ದಂತೆ ಕಾಣುತ್ತಿಲ್ಲ. ಜಗತ್ತನ್ನೇ ಭಾಧಿಸುತ್ತಿರುವ ಕರೊನಾ ಸೋಂಕಿನ ಮೂಲ ಚೀನಾ ಎಂಬುದರೊಂದಿಗೆ ಆರಂಭವಾಗಿ, ಲಡಾಖ್​ ಬಿಕ್ಕಟ್ಟು ಸೃಷ್ಟಿಸಿ ಭಾರತದೊಂದಿಗೆ ಕಾಲು ಕೆರೆದು ಜಗಳವಾಡಿದ್ದು ಸೇರಿ ಇದೀಗ ಅಲ್ಪಸಂಖ್ಯಾತ ಉಯ್ಗುರ್​ರ ಜನಾಂಗೀಯ ಹತ್ಯೆಕ್ಕೆ ಯತ್ನಿಸಿ, ಮಾನವಹಕ್ಕು ಉಲ್ಲಂಘಿಸಿದ ಆರೋಪಕ್ಕೆ ಸಿಲುಕಿಕೊಂಡಿದೆ.

    ಲಂಡನ್​ ಮೂಲದ ವಕೀಲರು ಚೀನಾದ ಉಯ್ಗುರ್​ ಸಮುದಾಯದ ಎರಡು ಹೋರಾಟಗಾರರ ಗುಂಪಿನ ಪರವಾಗಿ ಅಂತಾರಾಷ್ಟ್ರೀಯ ಕ್ರಿಮಿನಲ್​ ಕೋರ್ಟ್​ನಲ್ಲಿ ಚೀನಾದ ವಿರುದ್ಧ ದೂರು ದಾಖಲಿಸಿದ್ದಾರೆ. ಮುಸ್ಲಿಂ ಅಲ್ಪಸಂಖ್ಯಾತರನ್ನು ಹೊಸಕಲು ಅಮಾನವೀಯ ವರ್ತನೆ ತೋರಿದ ಆರೋಪದಲ್ಲಿ ಅಂತಾರಾಷ್ಟ್ರೀಯ ಕಾನೂನಿನ್ವಯ ಚೀನಾ ವಿರುದ್ಧ ದಾಖಲಾಗುತ್ತಿರುವ ಮೊದಲ ಪ್ರಕರಣ ಇದಾಗಿದೆ.

    ಉಯ್ಗುರು ಸಮುದಾಯಕ್ಕೆ ಸೇರಿದ ಸಾವಿರಾರು ಜನರನ್ನು ವಿನಾಕಾರಣ ಅಕ್ರಮವಾಗಿ ಬಂಧಿಸಿ, ಇನ್ನಿಲ್ಲದ ಹಿಂಸೆ ಕೊಟ್ಟು ಕಾಂಬೋಡಿಯಾ ಅಥವಾ ತಜಿಸ್ತಾನಕ್ಕೆ ಬಲವಂತವಾಗಿ ರವಾನಿಸಿದ್ದು, ಉಯ್ಗುರು ಮಹಿಳೆಯರನ್ನು ಬಲವಂತವಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದು ಸೇರಿ ಹಲವು ಆರೋಪಗಳಿರುವ 80 ಪುಟಗಳ ದೂರಿನಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಒಳಗೊಂಡಂತೆ 30ಕ್ಕೂ ಹೆಚ್ಚು ಅಧಿಕಾರಿಗಳ ಹೆಸರನ್ನು ಪ್ರಸ್ತಾಪಿಸಲಾಗಿದೆ.

    ಇದನ್ನೂ ಓದಿ: ಭಾರತ ಆಯ್ತು, ಈಗ ಅಮೆರಿಕದಿಂದಲೂ ಚೀನಾ ಆ್ಯಪ್​ಗಳ ಕಿಕ್​ಔಟ್​?

    ಕ್ಸಿ ಜಿನ್​ಪಿಂಗ್​ ಅವರು ಕೆಲವರ್ಷಗಳಲ್ಲಿ ಜಾರಿಗೊಳಿಸಿರುವ ಹಲವು ನಿಯಮಗಳ ಪ್ರಕಾರ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ಬೇಹುಗಾರಿಕೆ ಮಾಡುವುದು, ಯಾವುದೇ ಶಂಕೆ ಇಲ್ಲದಿದ್ದರೂ ವಶಕ್ಕೆ ಪಡೆದುಕೊಳ್ಳುವುದು ಸೇರಿ ಹಲವು ಕ್ರಮಗಳನ್ನು ಕೈಗೊಳ್ಳಲು ಚೀನಿ ಅಧಿಕಾರಿಗಳು ಮುಕ್ತ ಅವಕಾಶ ಮಾಡಿಕೊಡುತ್ತವೆ. ಈ ನಿಯಮಗಳನ್ನು ಬಳಸಿಕೊಂಡು 10 ಲಕ್ಷಕ್ಕೂ ಹೆಚ್ಚು ಉಯ್ಗುರು ಸಮುದಾಯದವರು ಮತ್ತು ಮುಸ್ಲಿಂ ಸಮುದಾಯದವರನ್ನು ಚೀನಿ ಅಧಿಕಾರಿಗಳು ಅಕ್ರಮವಾಗಿ ಬಂಧನದಲ್ಲಿರಿಸಿದ್ದಾರೆ. ಅದರ ಈ ಕ್ರಮದ ಬಗ್ಗೆ ಜಾಗತಿಕವಾಗಿ ಖಂಡನೆ ವ್ಯಕ್ತವಾಗುತ್ತಿದೆ.

    ಅಂತಾರಾಷ್ಟ್ರೀಯ ಕ್ರಿಮಿನಲ್​ ಕೋರ್ಟ್​ ಜನಾಂಗೀಯ ಹತ್ಯೆ, ಯುದ್ಧ ಸಂಬಂಧಿತ ಅಪರಾಧಗಳು ಮತ್ತಿತರ ನಿಂದನೆ ಪ್ರಕರಣಗಳ ವಿಚಾರಣೆ ನಡೆಸುವ ಅಧಿಕಾರ ಹೊಂದಿದೆ. ಆದರೆ, ಚೀನಾ ಈ ಕೋರ್ಟ್​ ಅನ್ನು ಪರಿಗಣಿಸಲು ನಿರಂತರವಾಗಿ ನಿರಾಕರಿಸುತ್ತಲೇ ಬರುತ್ತಿದೆ. ಹೀಗಿರುವಾಗ ಉಯ್ಗುರ್​ ಸಮುದಾಯದವರ ಪರವಾಗಿ ಅಂತಾರಾಷ್ಟ್ರೀಯ ಕ್ರಿಮಿನಲ್​ ಕೋರ್ಟ್​ನಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆ ಹೇಗೆ ಸಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

    ‘ಕೊಲೆಯಾಗುವ ಸಾಧ್ಯತೆ ಇದೆ’ ಎಂದು ಮೆಸೇಜ್‌: ಪತ್ರಕರ್ತನ ಸಾವಿಗೆ ಸಿಕ್ಕಿದೆ ಟ್ವಿಸ್ಟ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts