More

    ಉಡುಪಿ ರೋಬೊಸಾಫ್ಟ್ ಜಪಾನ್ ಟೆಕ್ನೋ ಪ್ರೊ ತೆಕ್ಕೆಗೆ, 800 ಕೋಟಿ ರೂ.ಗೆ ಖರೀದಿ

    ಉಡುಪಿ: ದೇಶದ ಉದ್ಯಮರಂಗದಲ್ಲಿ ಮಹತ್ವಪೂರ್ಣ ಬೆಳವಣಿಗೆಯಾಗಿದ್ದು, ಕರ್ನಾಟಕ ಕರಾವಳಿಯ ಮೊದಲ ಐಟಿ ಕಂಪನಿ, ಉಡುಪಿ ರೋಬೊಸಾಫ್ಟ್ ಟೆಕ್ನಲಾಜಿಸ್ ಜಪಾನ್ ಮೂಲದ ಐಟಿ ಸಂಸ್ಥೆಯ ಪಾಲಾಗಿದೆ. 800 ಕೋಟಿ ರೂ.ಗೆ ರೋಬೊಸಾಫ್ಟ್‌ನ ಶೇ.100 ಷೇರುಗಳನ್ನು ಜಪಾನ್ ಮೂಲದ ಟೆಕ್ನೋ ಪ್ರೊ ಹೋಲ್ಡಿಂಗ್ಸ್ ಕಂಪನಿ ಖರೀದಿಸಲು ಮುಂದಾಗಿದೆ. ರೋಬೊಸಾಫ್ಟ್ ಸಂಸ್ಥೆಯಲ್ಲಿ 800ಕ್ಕೂ ಅಧಿಕ ಸಾಫ್ಟ್‌ವೇರ್ ಇಂಜಿನಿಯರ್ಸ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಹೊಸ ಒಪ್ಪಂದದಿಂದಾಗಿ ಕಂಪನಿಯೂ ಅಮೆರಿಕ, ಯುರೋಪ್, ಜಪಾನ್ ಸೇರಿದಂತೆ ಭಾರತದಲ್ಲಿ ಕಾರ್ಯವ್ಯಾಪ್ತಿ ವಿಸ್ತಾರಗೊಳ್ಳಲಿದೆ. 1996ರಲ್ಲಿ ಉಡುಪಿಯ ಸಂತೆಕಟ್ಟೆಯಲ್ಲಿ ಆರಂಭಗೊಂಡಿದ್ದು, ಭಾರತೀಯ ಮತ್ತು ಜಾಗತಿಕ ಮಟ್ಟದಲ್ಲಿ ಇಂಟರ್‌ನೆಟ್ ಬ್ರಾೃಂಡ್‌ಗಳಿಗೆ ಅಪ್ಲಿಕೇಶನ್ ಸಿದ್ಧಪಡಿಸುತ್ತಿತ್ತು. ಮೊಬೈಲ್ ಆ್ಯಪ್ಸ್, ಗೇಮಿಂಗ್ ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದ ಐಟಿ ಸಂಸ್ಥೆ ರೋಬೊಸಾಫ್ಟ್‌ನ ವಾರ್ಷಿಕ ವಹಿವಾಟು 183 ಕೋಟಿ ರೂ ಇದೆ. ಸದ್ಯ ಜಪಾನ್‌ನ ಟೆಕ್ನೋ ಪ್ರೊ ಹೋಲ್ಡಿಂಗ್ಸ್ 800 ಕೋಟಿ ರೂಪಾಯಿಗೆ ಖರೀದಿ ಒಪ್ಪಂದ ಪ್ರಕ್ರಿಯೆ ನಡೆದಿದೆ. ಈ ಬಗ್ಗೆ ವಿಜಯವಾಣಿಗೆ ಪ್ರತಿಕ್ರಿಯಿಸಿದ ರೋಬೊಸಾಫ್ಟ್ ಟೆಕ್ನಾಲಜಿಸ್ ಮ್ಯಾನೇಜಿಂಗ್ ಡೈರೆಕ್ಟರ್ ರೋಹಿತ್ ಭಟ್, ರೋಬೊಸಾಫ್ಟ್ ಕಂಪನಿಯ ಶೇ.100 ಷೇರುಗಳನ್ನು ಜಪಾನ್‌ಮೂಲದ ಸಂಸ್ಥೆ ಖರೀದಿಸಿದೆ. ನಾನು 99 ಗೇಮ್ಸ್ ಸಂಸ್ಥೆಯಲ್ಲಿ ಮುಂದುವರಿಯಲಿದ್ದೇನೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts