More

    ಜನರಿಂದ ಹಣ ಕೇಳುವುದು ಸೂಕ್ತವಲ್ಲ, ಕೃಷ್ಣ ಮಠ ನಿರ್ವಹಣೆಗೆ ಬ್ಯಾಂಕ್ ಸಾಲ

    ಉಡುಪಿ: ಸದ್ಯದ ಪರಿಸ್ಥಿತಿಯಲ್ಲಿ ಭಕ್ತರು ಹಾಗೂ ಸರ್ಕಾರದಿಂದ ಹಣ ಕೇಳುವುದು ಸೂಕ್ತವಲ್ಲ ಎಂಬ ಕಾರಣಕ್ಕಾಗಿ ಬ್ಯಾಂಕಿನಿಂದ ಸಾಲ ಕೇಳಲಾಗಿದೆ ಎಂದು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ತಿಳಿಸಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಠದ ನಿರ್ವಹಣೆ, ದುರಸ್ತಿ ಇತ್ಯಾದಿ ಕೈಗೊಳ್ಳಲಾಗಿದ್ದು, ಬ್ಯಾಂಕ್‌ಗೆ ಸಾಲಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಮಾರು ಮಠದ ಆಶ್ರಯದಲ್ಲಿ ಶೈಕ್ಷಣಿಕ ಸಂಸ್ಥೆಗಳಿದ್ದರೂ ಅದರಿಂದ ಮಠ ಹಣ ಅಪೇಕ್ಷಿಸುವುದು ಸರಿಯಲ್ಲ. ಮಠದ ಆದಾಯದ ಪಾಲನ್ನು ಶೈಕ್ಷಣಿಕ ಸಂಸ್ಥೆಗಳಿಗೆ ನೀಡುವ ಪರಿಪಾಠವಿದೆ. ಆದರೆ, ಶೈಕ್ಷಣಿಕ ಸಂಸ್ಥೆಗಳಿಂದ ಮಠ ಆದಾಯ ಪಡೆದಿಲ್ಲ ಎಂದರು.

    ಕರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಮಠೀಯ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಈ ಬಾರಿಯ ಕೃಷ್ಣ ಜಯಂತಿಯನ್ನು ಸೆ.10ರಂದು ಕೃಷ್ಣ ಮಠದಲ್ಲಿ ಆಚರಿಸಲಾಗುವುದು. ಸೀಮಿತ ಭಕ್ತರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳಿಗೆ ಅನುಗುಣವಾಗಿ ಉತ್ಸವ ನಡೆಸಲಾಗುತ್ತದೆ. ಸೆ.11ರಂದು ವಿಟ್ಲಪಿಂಡಿ (ಕೃಷ್ಣಲೀಲೋತ್ಸವ) ಆಚರಣೆ ಜಿಲ್ಲಾಡಳಿತದ ನಿರ್ದೇಶನದಂತೆ ಮಾಡಲಾಗುವುದು. ಧಾರ್ಮಿಕ ಕಾರ‌್ಯಕ್ರಮಗಳನ್ನು ಸಾಮಾಜಿಕ ಜಾಲತಾಣ ಮೂಲಕ ಪ್ರಸಾರ ಮಾಡಲಾಗುವುದು. ಭಕ್ತರು ಮನೆಗಳಲ್ಲೇ ಕೃಷ್ಣಮಠದ ಅಷ್ಟಮಿ ಉತ್ಸವ ವೀಕ್ಷಿಸಿ, ಕೃಷ್ಣಭಕ್ತಿ ಪ್ರದರ್ಶಿಸಬೇಕು ಎಂಬುದು ತಮ್ಮ ಅಪೇಕ್ಷೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts