More

    ಸಾಸ್ತಾನ ಮೀನುಮಾರುಕಟ್ಟೆಯಲ್ಲಿ ಸಚಿವರ ಎದುರಲ್ಲೆ ರಣಾಂಗಣ: ಪಂಚಾಯತಿ, ಮೀನು ಮಾರುವ ಮಹಿಳೆಯರ ನಡುವೆ ವಾಗ್ವಾದ

    ಕೋಟ: ಐರೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಸಾಸ್ತಾನ ಮೀನು ಮಾರುಕಟ್ಟೆಯಲ್ಲಿ ಶನಿವಾರ ರಣಾಂಗಣವೇ ಸೃಷ್ಠಿಯಾಯಿತು. ಅದು ಸಹ ಸಚಿವ ಎದುರಲ್ಲೆ ಪಂಚಾಯತ್ ಹಾಗೂ ಮೀನು ಮಾರುವ ಮಹಿಳೆಯರ ಮಧ್ಯೆ ಮಾತಿನ ಚಕಮಕಿ ನಡೆದುಹೊಯಿತು.

    ಸುಮಾರು 2ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸಾಸ್ತಾನ ಮೀನು ಮಾರುಕಟ್ಟೆ ಶೇಕಡಾ 90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು ಅದರಂತೆ ಸುಮಾರು 130ಕ್ಕೂ ಅಧಿಕ ಮೀನು ಮಾರುವ ಮಹಿಳೆಯರು ಕೂರಲು ಸಮರ್ಪಕವಾದ ವ್ಯವಸ್ಥೆಗಳಿಲ್ಲದೆ ಪಂಚಾಯತ್ ಹಸ್ತಕ್ಷೇಪದೊಂದಿಗೆ ಅದೇ ಕಟ್ಟಡದಲ್ಲಿ ಅಂಗಡಿ ಕೋಣೆಯನ್ನು ಮಿಸಲಿರಿಸಲಾಯಿತು.

    ಈ ಕುರಿತಂತೆ ಮಹಿಳಾ ಮೀನುಗಾರರು ಸೇರಿದಂತೆ ಪಂಚಾಯತ್ ಅಧ್ಯಕ್ಷ,ಸದಸ್ಯರ ಮುಖೇನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಶನಿವಾರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿದರು.

    ಈ ಸಂದರ್ಭದಲ್ಲಿ ಸ್ಥಳ ಪರಿಶೀಲಿಸಿ ಕಾಮಗಾರಿ ವಿಕ್ಷೀಸಿ ಪಂಚಾಯತ್ ಹಾಗೂ ಮಹಿಳಾ ಮೀನುಗಾರರನ್ನು ಕೆರದು ಸಮಸ್ಯೆಗಳ ಬಗ್ಗೆ ಚರ್ಚಿಸಿದರು.ಈ ಸಂದರ್ಭದಲ್ಲಿ ಮಹಿಳಾ ಮೀನುಗಾರರು ನಮ್ಮಗೆ ಸ್ಥಳದ ಕೊರತೆ ಎದುರಾಗಿದೆ.ಈ ಕರಿತಂತೆ ಮಾರುಕಟ್ಟೆಯ ದಕ್ಷಿಣ ದಲ್ಲಿರುವ ವಾಣಿಜ್ಯ ಕೊಠಡಿಯನ್ನು ತೆರವುಗೊಳಿಸಿ ಮೀನುಗಾರರಿಗೆ ಅನುಕೂಲ ಮಾಡಿ ಎಂದು ಮನವಿ ಇತ್ತರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಐರೋಡಿ ಗ್ರಾಮಪಂಚಾಯತ್ ಅಧ್ಯಕ್ಷ ಮೊಸೆಸ್ ರೂಡ್ರಿಗಸ್ ನಮ್ಮಗೆ ಪಂಚಾಯತ್ ಅಂಗಡಿ ಕೋಣೆಗಳ ಅವಶ್ಯಕತೆ ಇದ್ದು ಅದನ್ನು ತೆರವುಗೊಳಿಸಲು ಬಿಡುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ರೊಚ್ಚಿಗೆದ್ದ ಮಹಿಳಾ ಮೀನುಗಾರರು ಯಾಕೆ ನಿಮ್ಮ ಅನುಮತಿ ಅಗತ್ಯವಿಲ್ಲ ನಮ್ಮಗೆ ಕೂರಲು ಸಮರ್ಪಕವಾದ ಸ್ಥಳದ ವ್ಯವಸ್ಥೆಗಳು ಬೇಕು ಎಂದು ಪಂಚಾಯತ್ ವಿರುದ್ಧ ಆಕ್ರೋಶ ಹೊರಹಾಕಿದರು.ಈ ಸಂದರ್ಭದಲ್ಲಿ ಸಚಿವ ಕೋಟ ಮಧ್ಯಪ್ರವೇಶಿಸಿ ಇಲ್ಲಿ ಕಚ್ಚಾಡಿದರೆ ಪ್ರಯೋಜ ಶೂನ್ಯ ಈ ಬಗ್ಗೆ ಜಿಲ್ಲಾಧಿಕಾರಿ ಕಛೇರಿಯಲ್ಲಿ ಕುಳಿತು ಸಮಸ್ಯೆ ಬಗೆಹರಿಸಿ ಕೊಳ್ಳುವ ಎಂದು ಅಲ್ಲಿಂದ ನಿರ್ಗಮಿಸಿದರು.ಸುಮಾರು ಅರ್ಧ ತಾಸು ಮಾತಿನ ಚಕಮಕಿ ನಡೆಯಿತು.

    ಈ ಸಂದರ್ಭದಲ್ಲಿ ಮಹಿಳಾ ಮೂನುಗಾರರ ಪರವಾಗಿ ಜ್ಯೋತಿ ಮಾಧ್ಯವದ ಮುಂದೆ ಮಾತನಾಡಿ ನಾವು 150ಜನ ಮಹಿಳಾ ಮೀನುಗಾರರಿದ್ದೇವೆ ನಮ್ಮ ಮೀನುಮಾರುಕಟ್ಟೆಗೆ ಬಂದಂತಹ 2ಕೋಟಿ ಅನುದಾನ ಮೀನುಮಾರುಕಟ್ಟೆ ವಿನಿಯೋಗವಾಗದೆ ಅದರಲ್ಲಿಕೆಳಗಡೆ ವ್ಯಾಣಿಜ್ಯ ಕೊಟ್ಟಡಿ ಮೇಲ್ಗಡೆ ಅಂಗಡಿ ಕೋಣೆ ಮಾಡಿ ನಮ್ಮ ಮಹಿಳೆಯರಿಗೆ ಕೂರಲು ಕೇವಲ 60ಜನರಿಗೆ ಮಾತ್ರ ವ್ಯವಸ್ಥೆ ಮಾಡಿದ್ದಾರೆ ಹಾಗಾದರೆ ಇನ್ನುಳಿದವರು ಎಲ್ಲಿ ಕೂರುವುದು ಎದುರುಗಡೆ ಇರುವ ರಸ್ತೆ ಸಮೀಪ ಹಳೇ ಅಂಗಡಿ ಕೋಣೆಯಲ್ಲಿ ಕುತು ವ್ಯವಹರಿಸುತ್ತಿದ್ದೇವೆ ಅದನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ನಮ್ಮಗೆ ಇತ್ತ ಹೊಸ ಮಾರುಕಟ್ಟೆ ತೆರೆಯಲ್ಲಿ ಅತ್ತ ರಸ್ತೆ ಸಮೀಪ ಕೂರಲು ಬಿಡುವುದಿಲ್ಲ ಇದೆಂಥ ರ್ದೌಭಾಗ್ಯ ಎಂದು ವಿವರಿಸಿದರು.

    ಐರೋಡಿ ಗ್ರಾಮಪಂಚಾಯತ್‍ಗೆ ಮೊದಲಿನಿಂದಲು ಆದಾಯ ಬರುವ ಕಟ್ಟಡ ಇದಾಗಿದ್ದು ಇಲ್ಲಿ ಒಂದು ಸುಸಜ್ಜಿತ ಮಾರುಕಟ್ಟೆಯ ಬಗ್ಗೆ ನಮಗೂ ಕನಸಿದೆ ಅದಕ್ಕೆ ಅವಕಾಶ ಕಲ್ಪಿಸಲಾಗಿದೆ.ಪಂಚಾಯತ್ ಆದಾಯಕ್ಕನುಗುಣವಾಗಿ ಇಲ್ಲಿ ವಾಣಿಜ್ಯ ಸಂಕಿರ್ಣದ ಕನಸು ಕಂಡಿದ್ದೇವೆ ಅದರಂತೆ ನಡೆದಿದೆ. ಆ ಮೂಲಕ ಪಂಚಾಯತ್ ನಡೆಸಲು ಅನುಕೂಲಕ್ಕೆ ಆರ್ಥಿಕ ಕ್ರೂಡಿಕರಿಸಲು ವೇದಿಕೆಯಾಗಿರಿಸಿಕೊಂಡಿದ್ದೇವೆ. ಇದಕ್ಕೆ ವಿರೋಧ ವ್ಯಕ್ತಪಡಿಸುವುದು ಎಷ್ಟು ಸಮಂಜಸ ಎಂದು ಐರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಸೆಸ್ ರೂಡ್ರಿಗಸ್ ಪ್ರಶ್ನಿಸಿದರು.

    ಸಾಸ್ತಾನ ಮೀನುಮಾರುಕಟ್ಟೆ ಯ ವಿಚಾರದಲ್ಲಿ ಮಹಿಳಾ ಮೀನುಗಾರರು ವಾಣಿಜ್ಯ ಸಂಕಿರ್ಣವನ್ನು ತೆರವುಗೊಳಿಸಿ ಮೀನುಮಾರುಕಟ್ಟೆಯನ್ನು ವಿಸ್ತರಿಸಿ ನಮ್ಮೆಲ್ಲ ಮಾರಾಟಗಾರರಿಗೆ ಅನುಕೂಲವಾಗುತ್ತದೆ ಎಂಬ ಬಯಕೆ ಆದರೆ ಪಂಚಾಯತ್ ನವರು ಅದನ್ನು ತೆರವುಗೊಳಿಸಲು ಹಿಂದೆಟು ಹಾಕುತ್ತಿದ್ದಾರೆ.ಇವರಿಬ್ಬರ ವಾದಗಳನ್ನ ಗೌರಯುತವಾಗಿ ಆಲಿಸಲಾಗಿದೆ. ಇವೆಲ್ಲ ಸಮಸ್ಯೆಗಳನ್ನು ಬರುವ ಶನಿವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ಕೆ.ಎಫ್ ಡಿ ಸಿ ಯವರು, ಇಂಜಿನಿಯರವರು, ಹಸಿಮೀನು ಮಾರಾಟ ಮಾಡುವ ಮಹಿಳೆಯರನ್ನು, ಮೀನುಗಾರ ಮುಖಂಡರುಗಳನ್ನು, ಗ್ರಾಮಪಂಚಾಯತ್ ಅಧ್ಯಕ್ಷರನ್ನು ಒಂದೆಡೆ ಸೇರಿಸಿ ಸರಕಾರ ಸಮಸ್ಯೆಯನ್ನು ಬಗೆಹರಿಸಲಾಗುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts