More

    ಕರೊನಾ ಸೋಂಕಿತರ ಮನೆಗಳು ಇನ್ಮುಂದೆ ಸೀಲ್​ಡೌನ್:​ ಉಡುಪಿ ಜಿಲ್ಲಾಧಿಕಾರಿ ನಿರ್ಧಾರ

    ಉಡುಪಿ: ಕರೊನಾ ಸೋಂಕಿತರ ಮನೆಗಳನ್ನು ಇನ್ಮುಂದೆ ಸೀಲ್​ಡೌನ್​ ಮಾಡಲು ಮತ್ತು ಹೋಂ ಐಸೋಲೇಷನ್​ ಇರುವ ಮನೆಗಳಿಗೂ ಸಹ ಪಟ್ಟಿ ಅಳವಡಿಸಲು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ನಿರ್ಧರಿಸಿದ್ದಾರೆ. ​

    ಪಾಸಿಟಿವ್ ಬಂದವರನ್ನು ಸುಲಭವಾಗಿ ಗುರುತಿಸಲು ಮತ್ತು ಸೋಂಕಿತರ ಚಲನಾವಲನ ಮೇಲೆ ನಿಗಾ ಇರಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಜಿ. ಜಗದೀಶ ಅವರಿಂದಲೇ ಸೀಲ್​ಡೌನ್ ಪ್ರಕ್ರಿಯೆ ಆರಂಭ ಆಗಿದೆ.

    ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮ ವ್ಯಾಪ್ತಿಯಲ್ಲಿ ಸೀಲ್ ಡೌನ್ ಮಾಡಲಾಗಿದ್ದು, ಮನೆಯ ಸುತ್ತ ಎಚ್ಚರಿಕೆ ಸೂಚಿಸುವ ಟೇಪ್ (ಪಟ್ಟಿ) ಕಟ್ಟಿ ಜಾಗೃತಿ ಮೂಡಿಸಲಾಗಿದೆ. ಇದೇ ವೇಳೆ ಸೋಂಕಿತರ ಆರೋಗ್ಯ ವಿಚಾರಿಸಿ, ಜಿಲ್ಲಾಧಿಕಾರಿ ಧೈರ್ಯ ತುಂಬಿದರು.

    ಮನೆಯಲ್ಲಿಯೇ ಇದ್ದು, ಆರೋಗ್ಯದ ಬಗ್ಗೆ ನಿಗಾ ಇಡುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿ, ಜಿಲ್ಲೆಯಾದ್ಯಂತ ಕೋವಿಡ್ ಪಾಸಿಟಿವ್ ಬಂದವರ ಮನೆ ಸೀಲ್​ಡೌನ್​ಗೆ ಕ್ರಮಕೈಗೊಳ್ಳಲು ಹೇಳಿದರು. ಕೋವಿಡ್ ಮೊದಲ ಅಲೆಯ ವೇಳೆ ಚಾಲ್ತಿಯಲ್ಲಿದ್ದ ಕ್ರಮ ಮತ್ತೆ ಜಾರಿಗೆ ಬಂದಂತಾಗಿದೆ. (ದಿಗ್ವಿಜಯ ನ್ಯೂಸ್​)

    ಮಾಸ್ಕ್​​ ಧರಿಸದ ಮಹಿಳೆಗೆ ಮಗಳ ಕಣ್ಣೆದುರಲ್ಲೇ ಥಳಿತ: ಪೊಲೀಸರಿಬ್ಬರ ಅಮಾನತು!

    ರೇಪ್​ ಕೇಸ್​ನಿಂದ ತೆಹಲ್ಕಾ ಮ್ಯಾಗಜಿನ್​ ಸಂಸ್ಥಾಪಕ ತರುಣ್​ ತೇಜ್​ಪಾಲ್​ ಖುಲಾಸೆ: ಗೋವಾ ನ್ಯಾಯಾಲಯ ಆದೇಶ

    ಮಹಾರಾಷ್ಟ್ರದ ಗಡಿಯಲ್ಲಿ ಪೊಲೀಸ್‌- ನಕ್ಸಲರ ಗುಂಡಿನ ಕಾಳಗ: 11 ಮಂದಿಯ ಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts